ಶಾಕಿಂಗ್ – ರಾಜ್ಯದಲ್ಲಿ ಒಂದೇ ದಿನ 50 ಸಾವಿರ ಜನರಿಗೆ ಸೋಂಕು – 346 ಸಾವು
ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ ಪತ್ತೆಯಾಗಿರುವ ಸೋಂಕು ಪ್ರಕರಣಗಳು ಹಿಂದಿನ ಎಲ್ಲಾ ರೆಕಾರ್ಡ್ ಗಳನ್ನ ಬ್ರೇಕ್ ಮಾಡಿದೆ. ಇಂದು ಒಂದೇ ದಿನ 50,112 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಒಂದೇ ದಿನ 346 ಸೋಂಕಿತರು ಸಾವನ್ನಪ್ಪಿದ್ದಾರೆ.
ಬೆಂಗಳೂರು ಒಂದರಲ್ಲೇ ಇವತ್ತು ಬರೋಬ್ಬರಿ 23,106 ಜನರಿಗೆ ಸೋಂಕು ತಗಲಿದ್ದು, 161 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಂದೇ ದಿನ 50,112 ಜನರಿಗೆ ಸೋಂಕು ತಗುಲಿದ್ದು, ಹೊಸ ದಾಖಲೆಯಾಗಿದೆ.
ಸಾವನಪ್ಪಿದವರ ಪೈಕಿ
ಬೆಂಗಳೂರು – 161
ಬೆಂಗಳೂರು ಗ್ರಾಮಾಂತರ – 5
ಬಳ್ಳಾರಿ – 19
ಬಾಗಲಕೋಟೆ – 3
ಬೆಳಗಾವಿ- 2
ಚಿತ್ರದುರ್ಗ – 1
ದಕ್ಷಿಣ ಕನ್ನಡದ- 4
ಚಾಮರಾಜನಗರದಲ್ಲಿ – 5
ಬೀದರ್ – 8
ಚಿಕ್ಕಬಳ್ಳಾಪುರ – 5
ದಾವಣಗೆರೆ – 2
ಧಾರವಾಡ – 8
ಗದಗ – 3
ಶಿವಮೊಗ್ಗ – 15
ರಾಯಚೂರು – 3
ಹಾವೇರಿ – 4
ಕಲಬುರ್ಗಿ – 15
ರಾಮನಗರ – 2
ಹಾಸನ – 11
ಕೋಲಾರ – 5
ಮಂಡ್ಯ – 19
ಮೈಸೂರು – 10
ಉಡುಪಿ – 3
ಉತ್ತರ ಕನ್ನಡ – 15
ವಿಜಯಪುರ -4
ತುಮಕೂರು – 12
ದೇಶಾದ್ಯಂತ ಕೊರೊನಾ 2ನೇ ಅಲೆ ಅತಿ ಭಯನಾಕರೂಪ ಪಡೆದಿದ್ದು, ಸಾವು ನೋವುಗಳ ಸಂಖ್ಯೆ , ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೇ ಇದೆ.
ಇಂದು ಒಂದೇ ದಿನ ರಾಜ್ಯದಲ್ಲಿ ಹಿಂದೆಂದಿಗಿಂತಲೂ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ಕಂಡುಬಂದಿರುವುದು ಜನರ ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ.
ದೇಶದಲ್ಲಿ ಕೊರೊನಾಗೆ ಲೆಕ್ಕವಿಲ್ಲದಷ್ಟು ಮಂದಿ ಬಲಿಯಾಗ್ತಿದ್ದಾರೆ. ಅದೆಷ್ಟೋ ಜನರು ತಮ್ಮವರನ್ನ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸಿನಿ ತಾರಯರು ಸಹ ತಮ್ಮರನ್ನ ಕಳೆದುಕೊಂಡು ನೋವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ತಿದ್ದಾರೆ. ಸೋಂಕಿತರು ಬೆಡ್ ಸಿಗದೇ ಆಕ್ಸಿಜನ್ ಕೊರತೆಯಿಂದ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಗೆ ಬಂದು ದೇಶ ತಲುಪಿದೆ. ಅಂತಹದ್ರಲ್ಲಿ ತೀರಾ ಮನಕಲಲಕುಂತಹ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇದೆ..
ಸರ್ಕಾರದ ಜೊತೆ ಕೊರೊನಾ ವಿರುದ್ಧ ಹೋರಾಟದಲ್ಲಿ ಜನರು ಕೈಜೋಡಿಸಬೇಕಾಗಿದೆ. ಜನರು ಸುಖಾಸುಮ್ಮನೆ ಅನಗತ್ಯವಾಗಿ ಹೊರಗಡೆ ಓಡಾಡದೇ , ಗುಂಪಿನಲ್ಲಿ ಬೆರೆಯದೇ , ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ.