ಪುತ್ತೂರು – ಪ್ರೀತಿಸಿದಾಕೆ ಕೈಕೊಟ್ಟಳೆಂದು ಆತ್ಮಹತ್ಯೆಗೆ ಯತ್ನಿಸಿದ ಯುವಕನಿಗೆ ಮರುಜೀವನ ನೀಡಿದ ಕೋವಿಡ್ ವಾರ್ ರೂಮ್ ಸದಸ್ಯರು
ಪ್ರೀತಿಸಿದ ಹುಡುಗಿ ಕೈಕೊಟ್ಟಳೆಂದು ಗುಜರಾತಿನ ಯುವಕನೊಬ್ಬ ಊರೂರು ಸುತ್ತಿ ಪುತ್ತೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಗುಜರಾತಿನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಯುವಕ ಪುತ್ತೂರಿನ ರಸ್ತೆಯ ಪಕ್ಕದಲ್ಲಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದಾನೆ. ಪುತ್ತೂರು ಶಾಸಕರ ಕೋವಿಡ್ ವಾರ್ ರೂಮ್ ಸದಸ್ಯರು ಆತನನ್ನು ರಕ್ಷಿಸಿದ್ದಾರೆ. ಆತನಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿ, ಕೌನ್ಸಿಲಿಂಗ್ ಕೊಡಿಸಿ ಆತನ ಊರಿಗೆ ಕಳುಹಿಸಿದರು.
ಹಲವು ವರ್ಷಗಳಿಂದ ಗುಜರಾತ್‌ನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೈಸೂರು ಮೂಲದ ನಂದೀಶ್, ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ವ್ಯಕ್ತಿ. ತಾನು ಪ್ರೀತಿಸಿದ ಹುಡುಗಿ ತನ್ನಿಂದ ದೂರವಾಗಿದ್ದಾಳೆ ಎಂದು ಖಿನ್ನತೆಗೆ ಒಳಗಾಗಿ ಅವನು ಅನೇಕ ಊರುಗಳಲ್ಲಿ ಅಲೆದಾಡಿದನು. ಕೊನೆಗೆ ಪುತ್ತೂರು ತಲುಪಿದ ಆತ ಕಬಕ ಬಳಿಯ ಪೋಳ್ಯ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ. ರಸ್ತೆ ಬದಿಯಲ್ಲಿ ನಂದೀಶ್ ಬಿದ್ದಿರುವುದನ್ನು ಗಮನಿಸಿದ ನಾಗರಾಜ್ ಮಿತ್ತೂರು ಆತನನ್ನು ಪುತ್ತೂರು ಬಿಜೆಪಿ ಕಚೇರಿಗೆ ಕರೆತಂದರು. ಕೋವಿಡ್ ವಾರ್ ರೂಮ್ ಸದಸ್ಯರು ಆತನ ವಿಷಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ, ನಂದೀಶ್ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಆದ್ದರಿಂದ ಆತನಿಗೆ ವಿಎಚ್‌ಪಿ ಕಚೇರಿಯಲ್ಲಿ ಆಶ್ರಯ ನೀಡಲಾಯಿತು.

ನಂತರ ಯುವಕ ತನ್ನ ಕಥೆಯನ್ನು ಬಹಿರಂಗಪಡಿಸಿದ. ನಾನು ಮೈಸೂರು ಮೂಲದವರು ಮತ್ತು ನನ್ನ ಕುಟುಂಬವು ಅಲ್ಲಿ ವಾಸಿಸುತ್ತಿದೆ ಎಂದು ಹೇಳಿದ. ಗುಜರಾತ್‌ನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ನಾನು ಅಲ್ಲಿನ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆದರೆ ಅವಳು ನನಗೆ ಕೈಕೊಟ್ಟಳು. ಹಾಗಾಗಿ ತನ್ನ ಜೀವನವನ್ನು ಕೊನೆಗೊಳಿಸುವ ಉದ್ದೇಶದಿಂದ ಕರ್ನಾಟಕಕ್ಕೆ ಮರಳಿದೆ ಎಂದು ಆತ ತಿಳಿಸಿದ್ದಾನೆ. ಶಾಸಕರ ವಾರ್ ರೂಮ್ ಸದಸ್ಯರು ಮತ್ತು ವಿಎಚ್‌ಪಿ ನಾಯಕರು ನಂದೀಶ್‌ಗೆ ಕೌನ್ಸಿಲಿಂಗ್ ನೀಡಿದರು. ನಂತರ ಆತ ಮತ್ತೆ ಗುಜರಾತ್‌ಗೆ ಹೋಗಲು ಬಯಸುತ್ತಿರುವುದಾಗಿ ಹೇಳಿದ. ಬಳಿಕ ಆತನನ್ನು ಪುತ್ತೂರು ಶಾಸಕರ ವಾರ್ ರೂಮ್ ಮೂಲಕ ಗುಜರಾತ್‌ಗೆ ವಾಪಸ್ ಕಳುಹಿಸಲು ನಿರ್ಧರಿಸಲಾಯಿತು.
ಪುತ್ತೂರು ಶಾಸಕರ ಕೋವಿಡ್ ವಾರ್ ರೂಮ್ ಸದಸ್ಯರು ಮಾಡಿದ ಪ್ರಯತ್ನ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ… ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ
https://twitter.com/SaakshaTv/status/1389419593236631553?s=19
https://twitter.com/SaakshaTv/status/1389407701130780675?s=19
https://twitter.com/SaakshaTv/status/1388652560756654086?s=19
https://twitter.com/SaakshaTv/status/1388307833075142660?s=19
#Covid #warroom








