ಕೋವಿಡ್ ಸಂಕಷ್ಟ ಮಂಡ್ಯ ಜಿಲ್ಲಾಸ್ಪತ್ರೆಗೆ ಹೆಚ್ ಡಿ ಕುಮಾರಸ್ವಾಮಿ ಭೇಟಿ
ಮಂಡ್ಯ : ಕೋವಿಡ್ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಲೇ ಇರುವ ಹಿನ್ನೆಲೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಹೆಚ್ಚುವರಿ ಬೆಡ್ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಹಾಗೆ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಇದೇ ವೇಳೆ ಆಸ್ಪತ್ರೆಯ ಸಿಬ್ಬಂದಿಗಳ ಸಮಸ್ಯೆಗಳ ಬಗ್ಗೆ ಆಲಿಸಿ, ಸಿಬ್ಬಂದಿಗಳ ಸಮಸ್ಯೆಗಳ ಬಗೆಹರಿಸುವಂತೆ ಮಿಮ್ಸ್ ನಿರ್ದೇಶಕ ಡಾ.ಹರೀಶ್ ಗೆ ಸೂಚನೆ ನೀಡಿದ್ರು.
ಈ ವೇಳೆ ಸಾವರ್ಜನಿಕರು ಕುಮಾರಸ್ವಾಮಿ ಅವರ ಬಳಿ ಸಮಸ್ಯೆಗಳನ್ನೂ ಹೇಳಿಕೊಂಡರು. ಸಮಸ್ಯೆಗಳ ಆಲಿಸಿ ಸಮಸ್ಯೆಗಳ ಬಗ್ಗೆ ಸರಿಪಡಿಸುವಂತೆ ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.. ಇದೇ ಸಂದರ್ಭದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಡಿಸಿ ತಮ್ಮಣ್ಣ, ಡಾ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಸೇರಿದಂತೆ ಹಲವರು ಭಾಗಿಯಾಗಿದ್ದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ಸಂಕಷ್ಟದಲ್ಲಿರುವವರಿಗೆ ಸ್ಪಂಧಿಸಬೇಕಾದ್ದು ಸರ್ಕಾರದ ಜವಾಬ್ದಾರಿ. ಸರ್ಕಾರದಲ್ಲಿ ಯಾಕೆ ಹೊಂದಾಣಿಕೆ ಇಲ್ಲ.. ಈಗ ಐದು ಜನ ಮಂತ್ರಿಗಳಿಗೆ ಜವಾಬ್ದಾರಿ ಕೊಟ್ಟಿದ್ದಾರೆ.. ಅವರು ಯಾವ ರೀತಿ ಕೆಲಸ ಮಾಡ್ತಾರೆ ನೋಡೋಣ ಎಂದಿದ್ದಾರೆ.
ಇದೇ ವೇಳೆ ಸುಧಾಕರ್ ಬೇಸರದಿಂದ ಕ್ಯಾಬಿನೆಟ್ ಸಭೆಯಿಂದ ಹೊರ ನಡೆದ ವಿಚಾರವಾಗಿ ಮಾತನಾಡಿದ ಅವರು ಹಲವಾರು ಜಿಲ್ಲೆಗಳಿಂದ ಮಾಹಿತಿ ಪಡೆದಿದ್ದೀನೆ.. ಸಭೆ ನೆಪದಲ್ಲಿ ಅಧಿಕಾರಿಗಳ ಸಮಯ ವ್ಯರ್ಥ ಮಾಡ್ತಿದ್ದೀರಿ. ಇದೆಲ್ಲವನ್ನೂ ನಿಲ್ಲಿಸಿ, ಅಧಿಕಾರಿಗಳಿಗೆ, ಸಚಿವರಿಗೆ ಜವಾಬ್ದಾರಿ ಕೊಡಿ ಎಂದಿದ್ದಾರೆ.