ಜನರ ಜೀವ ಉಳಿಸಲು ಕಂಪ್ಲೀಟ್ ಲಾಕ್ ಡೌನ್ ಅನಿವಾರ್ಯ – ಹೆಚ್ ಡಿಕೆ
ಮಂಡ್ಯ : ಈಗಿನ ಲಾಕ್ ಡೌನ್ ನಿಂದ ಪ್ರಯೋಜನ ಇಲ್ಲ.. ಜನರ ಜೀವ ಉಳಿಸಲು ಕಂಪ್ಲೀಟ್ ಲಾಕ್ ಡೌನ್ ಅನಿವಾರ್ಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಸೀರಿಯಸ್ಸಾಗಿ ಲಾಕ್ ಡೌನ್ ಮಾಡಿದ್ದಕ್ಕೆ ಬಾಂಬೆಯಲ್ಲಿ ಸೋಂಕಿನ ಪ್ರಮಾಣ 2 ಸಾವಿರಕ್ಕೆ ಇಳಿದಿದೆ.. ನಾನು ಮಾರ್ಚ್ 15ಕ್ಕೆ ಲಾಕ್ ಡೌನ್ ಮಾಡಿ ಎಂದು ಹೇಳ್ದೆ.. ಮಾರ್ಚ್ 15ಕ್ಕೆ ಲಾಕ್ ಡೌನ್ ಮಾಡಿದ್ರೆ ಇಷ್ಟು ಜೀವ ಹೋಗುತ್ತಿರಲಿಲ್ಲ.
ಈಗಿನಂತೆ ಲಾಕ್ ಡೌನ್ ಮಾಡಿದ್ರೆ ಉಪಯೋಗಕ್ಕೆ ಬರೋದಿಲ್ಲ.. ಹಿಂದೆ ಆಗಿದಂತೆ ಕಂಪ್ಲೀಟ್ ಲಾಕ್ ಡೌನ್ ಮಾಡಬೇಕು.. ಸರ್ಕಾರಕ್ಕೆ ಜನರ ಜೀವ ಉಳಿಸೋದಕ್ಕಿಂತ ರೆವಿನ್ಯೂ ಮುಖ್ಯ. ಕನಿಷ್ಠ 15ರಿಂದ 20 ದಿನ ಕಂಪ್ಲೀಟ್ ಲಾಕ್ ಡೌನ್ ಮಾಡಬೇಕು.. ಜನರನ್ನು ಉಳಿಸಬೇಕೆಂದ್ರೆ ಲಾಕ್ ಡೌನ್ ಅನಿವಾರ್ಯ. ಜನರ ಜೀವ ಉಳಿಸಿದ್ರೆ ಇದೇ ಜನ ಖಜಾನೆ ತುಂಬಿಸಿ ಕೊಡ್ತಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿನಡೆಸುವ ಜೊತೆಗೆ ಸಲಹೆ ಕೊಟ್ಟಿದ್ದಾರೆ.
ದೇಶದಲ್ಲಿ ಕೊರೊನಾಗೆ ಲೆಕ್ಕವಿಲ್ಲದಷ್ಟು ಮಂದಿ ಬಲಿಯಾಗ್ತಿದ್ದಾರೆ. ಅದೆಷ್ಟೋ ಜನರು ತಮ್ಮವರನ್ನ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸಿನಿ ತಾರಯರು ಸಹ ತಮ್ಮರನ್ನ ಕಳೆದುಕೊಂಡು ನೋವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ತಿದ್ದಾರೆ. ಸೋಂಕಿತರು ಬೆಡ್ ಸಿಗದೇ ಆಕ್ಸಿಜನ್ ಕೊರತೆಯಿಂದ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಗೆ ಬಂದು ದೇಶ ತಲುಪಿದೆ. ಅಂತಹದ್ರಲ್ಲಿ ತೀರಾ ಮನಕಲಲಕುಂತಹ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇದೆ..
ಸರ್ಕಾರದ ಜೊತೆ ಕೊರೊನಾ ವಿರುದ್ಧ ಹೋರಾಟದಲ್ಲಿ ಜನರು ಕೈಜೋಡಿಸಬೇಕಾಗಿದೆ. ಜನರು ಸುಖಾಸುಮ್ಮನೆ ಅನಗತ್ಯವಾಗಿ ಹೊರಗಡೆ ಓಡಾಡದೇ , ಗುಂಪಿನಲ್ಲಿ ಬೆರೆಯದೇ , ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ.