‘ಹೆಲ್ತ್ ಮಿನಿಸ್ಟರ್ ಕೈಯಲ್ಲಿ ಏನ್ ಉಳೀತು’ – ಸುಧಾಕರ್ ವಿರುದ್ಧ ‘ಹಳ್ಳಿಹಕ್ಕಿ’ ವ್ಯಂಗ್ಯ
ಮೈಸೂರು: ದ್ರೌಪದಿಯ ವಸ್ತ್ರಾಪಹರಣದಂತೆ ಸುಧಾಕರನ ವಸ್ತ್ರಾಪಹರಣ ಆಗೋಯ್ತು ಎಂದು ವಿಧಾನ ಪರಿಷತ್ತು ಸದಸ್ಯ ಎಚ್.ವಿಶ್ವನಾಥ್ ಅವರು ಲೇವಡಿ ಮಾಡಿದ್ದಾರೆ. ಪಾಪ, ಸುಧಾಕರ್ ಏನೋ ಮಾಡ್ತಾ ಇದ್ದರು. ಈಗ ಅವರ ಕೈಯಲ್ಲಿ ಏನೂ ಇಲ್ಲ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಡಾ.ಅಶ್ವತ್ಥ ನಾರಾಯಣನನ್ನ ಕೋವಿಡ್ ಕಮಿಟಿ ಚೇರ್ಮನ್ ಮಾಡಿದ್ರು. ಮಾಡಿದ ಮೊದಲ ಸಭೆಯಲ್ಲೇ ಖಾಸಗಿ ಆಸ್ಪತ್ರೆಗಳ ಹಣ ಹೆಚ್ಚಿಸಿದರು. ನಾನು ಮೊದಲಿನಿಂದಲೂ ಕೈಗಾರಿಕಾ ಆಮ್ಲಜನಕ ಉತ್ಪಾದನೆ ನಿಲ್ಲಿಸಿ, ವೈದ್ಯಕೀಯ ಆಮ್ಲಜನಕ ಉತ್ಪಾದಿಸಿ ಅಂತ ಹೇಳುತ್ತಿದ್ದೆ. ಈಗ ಕೈಗಾರಿಕಾ ಮಂತ್ರಿ ಜಗದೀಶ್ ಶೆಟ್ಟರ್ ಆಮ್ಲಜನಕ ನಿರ್ವಹಣೆಗೆ ನೇಮಿಸಿದ್ದಾರೆ. ಹೆಲ್ತ್ ಮಿನಿಸ್ಟರ್ ಕೈಯಲ್ಲಿ ಏನ್ ಉಳೀತು. ಇದೆಲ್ಲ ಮಾಡಿದ್ದು ಸರಿ. ಆದರೆ ಯಾವಾಗ ಮಾಡಬೇಕಿತ್ತು. ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಈಗ ನೇಮಕ ಮಾಡಿ ಏನ್ ಮಾಡ್ತೀರಿ ಎಂದು ವ್ಯಂಗ್ಯವಾಡಿದ್ಧಾರೆ.
ದೇಶದಲ್ಲಿ ಕೊರೊನಾಗೆ ಲೆಕ್ಕವಿಲ್ಲದಷ್ಟು ಮಂದಿ ಬಲಿಯಾಗ್ತಿದ್ದಾರೆ. ಅದೆಷ್ಟೋ ಜನರು ತಮ್ಮವರನ್ನ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸಿನಿ ತಾರಯರು ಸಹ ತಮ್ಮರನ್ನ ಕಳೆದುಕೊಂಡು ನೋವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ತಿದ್ದಾರೆ. ಸೋಂಕಿತರು ಬೆಡ್ ಸಿಗದೇ ಆಕ್ಸಿಜನ್ ಕೊರತೆಯಿಂದ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಗೆ ಬಂದು ದೇಶ ತಲುಪಿದೆ. ಅಂತಹದ್ರಲ್ಲಿ ತೀರಾ ಮನಕಲಲಕುಂತಹ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇದೆ..
ಸರ್ಕಾರದ ಜೊತೆ ಕೊರೊನಾ ವಿರುದ್ಧ ಹೋರಾಟದಲ್ಲಿ ಜನರು ಕೈಜೋಡಿಸಬೇಕಾಗಿದೆ. ಜನರು ಸುಖಾಸುಮ್ಮನೆ ಅನಗತ್ಯವಾಗಿ ಹೊರಗಡೆ ಓಡಾಡದೇ , ಗುಂಪಿನಲ್ಲಿ ಬೆರೆಯದೇ , ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ.