ಗುಪ್ತನೌಕೆ ‘ ಐಎನ್ಎಸ್ ಚಕ್ರ’..! ಗೌಪ್ಯ ಕಾರ್ಯಾಚರಣೆಗೆ ಸಹಕಾರಿ ಐಎನ್ಎಸ್ ಚಕ್ರ
ಭಾರತಕ್ಕೆ ಜಲಮಾರ್ಗದ ಮೂಲಕ ಬರುವ ಕಂಟಕಗಳನ್ನು ತಪ್ಪಿಸಲು ಹತ್ತಾರು ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ಹದ್ದಿನ ಕಣ್ಣಿಟ್ಟು ಕಾಯುತ್ತಿವೆ. ಅದರಲ್ಲೂ ಗುಪ್ತವಾಗಿ ಕಾರ್ಯ ನಿರ್ವಹಿಸಬಲ್ಲ ಕೆಲವು ಜಲಾಂತರ್ಗಾಮಿ ನೌಕೆಗಳು ಉನ್ನತ ಮಟ್ಟದ ತಂತ್ರಜ್ಞಾನದ ಮೂಲಕ ನಿರ್ಮಾಣವಾದವು. ಇಂಥದ್ದೇ ಸಾಲಿನಲ್ಲಿ ಜಲಾಂತರ್ಗಾಮಿ ನೌಕೆ ಐಎನ್ಎಸ್ ಚಕ್ರ ಸೇರುತ್ತದೆ. ರಷ್ಯಾ ಮೂಲದ ಪರಮಾಣು ಚಾಲಿತ ಜಲಾಂತರ್ಗಾಮಿ ಐಎನ್ಎಸ್ ನ್ನು ಭಾರತೀಯ ನೌಕಾಪಡೆಗೆ ಸೇರಿಸಿಕೊಳ್ಳುವ ಮೂಲಕ ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸೇರಿದೆ.
ನೌಕಾ ಸಿಬ್ಬಂದಿಗೆ ಇಂಥ ಜಲಾಂತರ್ಗಾಮಿ ಬಳಕೆಯ ತರಬೇತಿ ನೀಡುವ ಉದ್ದೇಶದಿಂದ ಭಾರತ ಈ ಹಿಂದೆ 1988ರಲ್ಲಿ ರಷ್ಯಾದ ಚಾರ್ಲಿ ಕ್ಲಾಸ್ ಪರಮಾಣು ಜಲಾಂತರ್ಗಾಮಿಯನ್ನು ಗುತ್ತಿಗೆ ಪಡೆದಿತ್ತು.
ಐಎನ್ಎಸ್ ಚಕ್ರ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಈ ನೌಕೆಯ ಪಲ್ಲಟನ ಸಾಮರ್ಥ್ಯ 8,140 ಟನ್.
ಇನ್ನು ಗರಿಷ್ಠ ವೇಗ 30 ನಾಟ್ಸ್.
ನೀರಿನೊಳಗೆ ಚಲಿಸುವ ಗರಿಷ್ಠ ಸಾಮರ್ಥ್ಯ 600 ಮೀಟರ್.
ನೀರಿನೊಳಗೆ ಇರುವ ಗರಿಷ್ಠ ಅವಧಿ 100 ದಿನ.
ಈ ನೌಕೆಯಲ್ಲಿ ಏಕಕಾಲಕ್ಕೆ ಒಟ್ಟು 73 ಸಿಬ್ಬಂದಿ ಕಾರ್ಯ ನಿರ್ವಹಿಸಬಲ್ಲರು.
ಇನ್ನು 533 ಎಂ.ಎಂ.ನ ಟಾರ್ಪಿಡೊ ಮತ್ತು 4
650 ಎಂ.ಎಂ.ನ ಟಾರ್ಪಿಡೊ 4 ಸಾಮರ್ಥ್ಯ ಈ ನೌಕೆಗಿದೆ.
ಭಾರತೀಯ ಸೇನೆಯ ಮೂರು ವಿಭಾಗಗಳ ಕಾರ್ಯತಂತ್ರಗಳಿಗೆ ಬೆಂಬಲ ನೀಡಬಲ್ಲ ಗೌಪ್ಯ ಕಾರ್ಯಾಚರಣೆಗೆ ಐಎನ್ಎಸ್ ಚಕ್ರ ಸಹಕಾರಿಯಾಗಿದೆ.
ಇದು ಭಾರತದ ಸಾಂಪ್ರದಾಯಿಕ ಡೀಸೆಲ್ ಎಲೆಕ್ಟ್ರಿಕ್ ಜಲಾಂತರ್ಗಾಮಿಗೆ ಪರ್ಯಾಯವಾಗಿದೆ.
ಬ್ಯಾಟರಿ ಬದಲಾವಣೆಗಾಗಿ ಮಾತ್ರ ಆಗಾಗ ಕಡಲಾಳದಿಂದ ಮೇಲೆ ಬರುತ್ತದೆ. ಅಲ್ಲದೇ ಆಯಕಟ್ಟಿನ ಸ್ಥಳಗಳಿಗೆ ಶೀಘ್ರವಾಗಿ ತಲುಪಿ ಶತ್ರು ಪಡೆಗಳನ್ನು ಹಿಮ್ಮೆಟ್ಟಿಸುತ್ತದೆ. ಇದನ್ನು ಗುಪ್ತನೌಕೆ ಎಂತಲೇ ಕರೆಯಲಾಗುತ್ತದೆ.
ಮುಂದಿನ ಸಂಚಿಕೆಯಲ್ಲಿ ಮತ್ತೊಂದು ವಿಶೇಷತೆಯ ಬಗ್ಗೆ ನಿಮ್ಮ ಮುಂದೆ ಬರ್ತೀವಿ.








