ಕೊರೊನಾ ಸಂಕಷ್ಟ – ಬೆಂಗಳೂರಿಗರಿಗೆ ಮತ್ತೊಂದು ಆಘಾತ
ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮಿತಿ ಮಿರುತ್ತಿದೆ. ಕೊರೊನಾಗೆ ಲೆಕ್ಕವಿಲ್ಲದಷ್ಟು ಮಂದಿ ಬಲಿಯಾಗ್ತಿದ್ದಾರೆ. ಅದೆಷ್ಟೋ ಜನರು ತಮ್ಮವರನ್ನ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇದೀಗ ಪರಿಸ್ಥಿಯಲ್ಲಿ ರಾಜ್ಯದ ಅದ್ರಲ್ಲೂ ಬೆಂಗಳೂರಿಗರಿಗೆ ಮತ್ತೊಂದು ಆಘಾತಕಾರಿಗೆ ವಿಚಾರ ಬಹಿರಂಗವಾಗಿದೆ.
ಜೂನ್ ವೇಳೆಗೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 33 ಲಕ್ಷಕ್ಕೆ ತಲುಪಲಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಐಐಎಸ್ ಸಿ ಬಹಿರಂಗಪಡಿಸಿದೆ. ಈಗಾಗಲೇ ಬೆಂಗಳೂರಿನಲ್ಲಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ವ್ಯವಸ್ಥೆ ಸಿಗುತ್ತಿಲ್ಲ. ಲಾಕ್ ಡೌನ್ ಶೈಲಿಯ ಕರ್ಫ್ಯೂ (ಜನತಾ ಕರ್ಫ್ಯೂ ) ಜಾರಿಗೆ ತಂದಿದ್ದರು ಯಾವುದೇ ಪ್ರಯೋಜನವಾಗ್ತಿಲ್ಲ.
ಪ್ರಸ್ತುತ ಬೆಂಗಳೂರಿನಲ್ಲಿ ಇರುವ ಕೊರೊನಾ ಸೋಂಕಿತರ ಅಂಕಿ-ಅಂಶಗಳನ್ನು ಆಧರಿಸಿ ಐ ಐ ಎಸ್ ಸಿ ಈ ವರದಿ ನೀಡಿದ್ದು, ಜೂನ್ ವೇಳೆಗೆ ಬೆಂಗಳೂರಿನಲ್ಲಿ 33 ಲಕ್ಷ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಲಿವೆ. ಸಾವಿನ ಸಂಖ್ಯೆ 24,000ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದಿದ್ದು, ಲಾಕ್ ಡೌನ್ ಅನಿವಾರ್ಯ ಎಂಬ ಅಭಿಪ್ರಾಯ ಹೊರಹಾಕಿರುವುದಾಗಿ ತಿಳಿದುಬಂದಿದೆ.
ಸರ್ಕಾರದ ಜೊತೆ ಕೊರೊನಾ ವಿರುದ್ಧ ಹೋರಾಟದಲ್ಲಿ ಜನರು ಕೈಜೋಡಿಸಬೇಕಾಗಿದೆ. ಜನರು ಸುಖಾಸುಮ್ಮನೆ ಅನಗತ್ಯವಾಗಿ ಹೊರಗಡೆ ಓಡಾಡದೇ , ಗುಂಪಿನಲ್ಲಿ ಬೆರೆಯದೇ , ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ.