‘ದೇಶದಲ್ಲಿ ಇನ್ನೂ3 ತಿಂಗಳೊಳಗೆ ಕೊರೊನಾ ಸೋಂಕಿಗೆ 10 ಲಕ್ಷ ಜನ ಸಾವು’..!
ಬೆಂಗಳೂರು: ದೇಶದಲ್ಲಿ ಕೊರೊನಾ ಮಾಹಾಮಾರಿಗೆ ನಿತ್ಯ ಸಾವಿರಾರು ಜನ ಪ್ರಾಣ ಕಳೆದುಕೊಳ್ತಿದ್ದಾರೆ. ಪ್ರತಿ ದಿನ 4 ಲಕ್ಷಕ್ಕಿಂತಲೂ ಅಧಿಕ ಮಂದಿ ಸೋಂಕಿಗೆ ತುತ್ತಾಗ್ತಿದ್ಧಾರೆ. ಈ ನಡುವೆ ದೇಶದ ಜನರಿಗೆ ಮತ್ತೊಂದು ಆಘಾತಕಾರಿ ವಿಚಾರ ಬಹಿರಂಗವಾಗಿದೆ.
ಹೌದು ಭಾರತದಲ್ಲಿ ಇನ್ನೂ3 ತಿಂಗಳೊಳಗೆ (ಆಗಸ್ಟ್ 1) ಕೊರೊನಾದಿಂದ 10 ಲಕ್ಷ ಮಂದಿ ಸಾವನಪ್ಪಲಿದ್ದಾರೆ ಎಂಬ ಎಚ್ಚರಿಕೆಯನ್ನ ಬ್ರಿಟನ್ ನ ಲ್ಯಾನ್ಸೆಟ್ ಜರ್ನಲ್ ನೀಡಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್ ಲ್ಯಾನ್ಸೆಟ್ ಜರ್ನಲ್ ನಲ್ಲಿ ಈ ವರದಿ ಪ್ರಕಟವಾಗಿದೆ.
ಭಾರತದಲ್ಲಿ ಕೊರೊನಾದಿಂದಾಗುವ ದುರಂತದ ಬಗ್ಗೆ ಎಚ್ಚರಿಕೆ ನೀಡಿರುವ ಲ್ಯಾನ್ಸೆಟ್ ಜರ್ನಲ್, ಭಾರತದಲ್ಲಿ ಕೊವಿಡ್ ವಿರುದ್ಧದ ಆರಂಭಿಕ ಹೋರಾಟದಲ್ಲಿ ಯಶಸ್ಸು ಸಾಧ್ಯವಾಗಿತ್ತು. ಆದರೆ ಆ ಯಶಸ್ಸನ್ನು ಈಗ ಹಾಳು ಮಾಡಿಕೊಂಡಿದೆ.
ಏಪ್ರಿಲ್‌ವರೆಗೆ ಕೊರೊನಾ ಟಾಸ್ಕ್ ಫೋರ್ಸ್ ಸಭೆ ಸೇರಿಲ್ಲ. ಭಾರತದ ಕ್ರಮಗಳ ಬಗ್ಗೆ ಈಗ ಮರುಪರಿಶೀಲಿಸಬೇಕಾಗಿದೆ. ಸರ್ಕಾರ ತನ್ನ ತಪ್ಪು ಒಪ್ಪಿಕೊಂಡು ಕೆಲಸ ಮಾಡಬೇಕು. ಜವಾಬ್ದಾರಿಯುತ ನಾಯಕತ್ವವನ್ನು ನೀಡಬೇಕು. ಭಾರತದಲ್ಲಿ ಕೊವಿಡ್ ಲಸಿಕೆ ನೀಡಿಕೆ ವೇಗ ಹೆಚ್ಚಿಸಬೇಕು. ಕೊರೊನಾ ತಡೆಗೆ ಏನು ಮಾಡಬೇಕೆಂದು ತಿಳಿಯಹೇಳಬೇಕು. ಮುನ್ನೆಚ್ಚರಿಕೆ ನೀಡಿದ್ದರೂ ಸೂಪರ್ ಸ್ಪ್ರೆಡರ್ ಧಾರ್ಮಿಕ ಚಟುವಟಿಕೆಗೆ ಅವಕಾಶ ನೀಡಲಾಗಿತ್ತು. ಇದರ ಜೊತೆಗೆ ರಾಜಕೀಯ ಸಮಾವೇಶಗಳನ್ನು ನಡೆಸಲು ಅವಕಾಶವಿತ್ತು. ಭಾರತ ಹರ್ಡ್ ಇಮ್ಯೂನಿಟಿ ಹಂತ ತಲುಪಿದೆ ಎಂದು ತಪ್ಪು ಲೆಚ್ಚಾಚಾರ ಹಾಕಲಾಗಿದೆ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ಲ್ಯಾನ್ಸೆಟ್ ಜರ್ನಲ್ ಸಂಪಾದಕೀಯ ವರದಿ ತಿಳಿಸಿದೆ.
ಅಲ್ಲದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಟ್ವಿಟ್ಟರ್‌ನಲ್ಲಿ ಬರುವ ಟೀಕೆಗಳನ್ನು ಡಿಲೀಟ್ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ ಎಂದೂ ಟೀಕೆ ವ್ಯಕ್ತವಾಗಿದೆ.