ಮದುವೆ ಸಮಾರಂಭದಲ್ಲಿ 40ಕ್ಕಿಂತ ಹೆಚ್ಚು ಜನರು ಭಾಗವಹಿಸುವಂತಿಲ್ಲ
ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ಇಂತಹ ಪರಿಸ್ಥಿತಿ ಎದುರಿಸಲು ಸರ್ಕಾರ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆರ ಮಾಡಿ ಅನೇಕ ಕಠಿಣ ನಿರ್ಬಂಧನೆಗಳನ್ನ ವಿಧಿಸಿದೆ. ಈ ನಡುವೆ ಮದುವೆ, ಸಭೆ ಸಮಾರಂಭಗಳ ಕುರಿತು ಮತ್ತೊಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರ ಅನ್ವಯ
ಲಾಕ್ ಡೌನ್ ವೇಳೆ ರಿಲೀಸ್ ಮಾಡಲಾಗಿದ್ದ ಮಾರ್ಗಸೂಚಿಯನ್ನೇ ಬದಲಾವಣೆ ಮಾಡಿ ಪರಿಶ್ಕೃತ ಮಾರ್ಗಸೂಚಿ ರಿಲೀಸ್ ಮಾಡಿದೆ. ಇದರ ಅನ್ವಯ ಈ ಹಿಂದೆ ಮದುವೆಗೆ 50 ಜನರಿಗೆ ಅವಕಾಶ ನೀಡಿದ್ದ ಸರ್ಕಾರ, ಈ ಬಾರಿ ಕೇವಲ 40 ಜನರಿಗಷ್ಟೇ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ. ಈಗಾಗಲೇ ನಿಗದಿಯಾಗಿರುವ ಮದುವೆಗಳನ್ನು ಕಲ್ಯಾಣ ಮಂಟಪದಲ್ಲಿ ನೆರವೇರಿಸಲು ಅವಕಾಶ ಇಲ್ಲ. ಹೀಗಾಗಿ ತಮ್ಮ ತಮ್ಮ ಮನೆಗಳಲ್ಲೇ ಮದುವೆ ಕಾರ್ಯಕ್ರಮ ಮುಗಿಸಬೇಕು. ಈ ಹಿಂದಿ ಇದ್ದಂತಹ ನಿಯಮದಂತೆ ಮದುವೆಯಲ್ಲಿ ಭಾಗವಹಿಸುವವರಿಗೆ ಸ್ಥಳೀಯಾಡಳಿತಗಳಿಂದ ಪಾಸ್ ವಿತರಿಸಬೇಕು.
ದೇಶಾದ್ಯಂತ ಕೊರೊನಾ 2ನೇ ಅಲೆ ಅತಿ ಭಯನಾಕರೂಪ ಪಡೆದಿದ್ದು, ಸಾವು ನೋವುಗಳ ಸಂಖ್ಯೆ , ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೇ ಇದೆ. ಸರ್ಕಾರದ ಜೊತೆ ಕೊರೊನಾ ವಿರುದ್ಧ ಹೋರಾಟದಲ್ಲಿ ಜನರು ಕೈಜೋಡಿಸಬೇಕಾಗಿದೆ. ಜನರು ಸುಖಾಸುಮ್ಮನೆ ಅನಗತ್ಯವಾಗಿ ಹೊರಗಡೆ ಓಡಾಡದೇ , ಗುಂಪಿನಲ್ಲಿ ಬೆರೆಯದೇ , ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ.