ಚಿಕ್ಕಮಗಳೂರು : ಪೊಲೀಸರಿಗೆ ಊಟ ನೀಡಿದ ಕಾಫಿನಾಡ ಯುವಕರು
ಚಿಕ್ಕಮಗಳೂರು : ಕೊರೊನಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುವ ಪೊಲೀಸರಿಗೆ ಕಾಫಿನಾಡಿನ ಯುವಕರು ಇಂದು ಮಧ್ಯಾಹ್ನ ಬಿರಿಯಾನಿ ಊಟ ನೀಡಿದ್ದಾರೆ.
ಚಿಕ್ಕಮಗಳೂರು ನಗರದ ಜೆಡಿಎಸ್ ಮುಖಂಡ ಸಿರಾಜ್ ಹಾಗೂ ಅವರ ಸ್ನೇಹಿತರು ವೆಜ್ ಬಿರಿಯಾನಿ ಹಾಗೂ ಚಿಕನ್ ಬಿರಿಯಾನಿ ಎರಡೂ ಊಟವನ್ನ ತಯಾರಿಸಿ ಎಲ್ಲಾ ಪೊಲೀಸರಿಗೂ ವಿತರಿಸಿದ್ದಾರೆ.
ನಗರದ ಮುಖ್ಯ ಸರ್ಕಲ್, ಪೊಲೀಸ್ ಠಾಣೆ ಗಳಿಗೆ ಭೇಟಿ ನೀಡಿ ಊಟ ವಿತರಣೆ ಮಾಡಲಾಗಿದೆ.
ಕೇವಲ ಪೊಲೀಸರಿಗಷ್ಟೇ ಅಲ್ಲದೆ ನಗರದಲ್ಲಿ ಸಿಕ್ಕ ಜನಸಾಮಾನ್ಯರು, ನಿರ್ಗತಿಕರು, ನಿರಾಶ್ರಿತರಿಗೂ ಬಿರಿಯಾನಿ ಹಾಗೂ ನೀರಿನ ಬಾಟಲಿ ನೀಡಿದ್ದಾರೆ.