ರಾಜ್ಯದಲ್ಲಿ ಇಂದು 47,930 ಮಂದಿಗೆ ಸೋಂಕು, 490 ಮಂದಿ ಬಲಿ Covid
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಮುಂದುವರೆದಿದ್ದು, ರಾಜ್ಯದಲ್ಲಿ ಇವತ್ತು 47,930 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು 490 ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19,34,378 ಕ್ಕೆ ಏರಿಕೆಯಾಗಿದೆ. ಇದುವರೆಗೆ 18,776 ಸೋಂಕಿತರು ಮೃತಪಟ್ಟಿದ್ದಾರೆ.
ಬೆಂಗಳೂರು ನಗರದಲ್ಲಿ ಇಂದು ಒಂದೇ ದಿನ 20,897 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ರಾಜಧಾನಿಯಲ್ಲಿ ಇವತ್ತು 281 ಸೋಂಕಿತರು ಬಲಿಯಾಗಿದ್ದಾರೆ. ನಗರದಲ್ಲಿನ್ನೂ 3,50,370 ಸಕ್ರಿಯ ಪ್ರಕರಣಗಳಿವೆ.









