ದುಡಿಯುವ ವರ್ಗಕ್ಕೆ ‘ಪರಿಹಾರ ನೀಡೋಕೆ ದುಡ್ಡು ಪ್ರಿಂಟ್ ಮಾಡ್ತೀವಾ’ : ಈಶ್ವರಪ್ಪ
ಶಿವಮೊಗ್ಗ : ದುಡಿಯುವ ವರ್ಗಕ್ಕೆ 10 ಸಾವಿರೂ ರೂಪಾಯಿ ಪರಿಹಾರ ನೀಡೋಕೆ ನಾವು ದುಡ್ಡು ಪ್ರಿಂಟ್ ಮಾಡ್ತೀವಾ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡಿಯುವ ವರ್ಗಕ್ಕೆ 10 ಸಾವಿರ ರೂ. ಪರಹಾರ ನೀಡಬೇಕೆಂಬ ವಿಪಕ್ಷಗಳ ಬೇಡಿಕೆಗೆ
ಗರಂ ಆಗಿ ಪ್ರಿಂಟ್ ಮಾಡ್ತೀವಾ ಎಂದರು. ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ 14 ದಿನ ಬಾಯಿಗೆ ಬೀಗ ಹಾಕಿಕೊಳ್ಳಬೇಕು.
ನೀವು ಬಾಯಿಗ ಬೀಗ ಹಾಕಿಕೊಂಡರೆ ಲಾಕ್‍ಡೌನ್ ಯಶಸ್ವಿಯಾಗುತ್ತದೆ. ಅದಾದ ಮೇಲೆ ನಾವು, ನೀವು ಯಾವ ಭಾಷೆಯಲ್ಲಿ ಬೇಕಾದರೂ ಮಾತನಾಡಿಕೊಳ್ಳೋಣ ಎಂದರು.
ಇನ್ನು ರಾಜ್ಯದ ಜನ ಸಾಯುತ್ತದ್ದಾರೆ ಇಂತಹ ವೇಳೆ ಬಾಯಿಗೆ ಬಂದಂಗೆ ಟೀಕೆ ಮಾಡುತ್ತಿದ್ದಾರೆ. ಒಳ್ಳೆಯದಕ್ಕೆ ಒಂದಾದರೂ ಅಭಿನಂದನೆ ಸಲ್ಲಿಸಿದ್ದೀರಾ ಎಂದು ಪ್ರಶ್ನಿಸಿದರು.
ನೂರು ವರ್ಷದ ನಂತರ ಇಂತಹ ಕಾಯಿಲೆ ಬಂದಿದ್ದು ನಾವ್ಯಾರು ನಿರೀಕ್ಷೆ ಮಾಡಿರಲಿಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಕೂಡ ನಿರೀಕ್ಷೆ ಮಾಡಿರಲಿಲ್ಲ.
ಟೀಕೆ ವಿರೋಧ ಪಕ್ಷದ ಕರ್ತವ್ಯ. ಆದರೆ ಬಾಯಿಗೆ ಬಂದಂಗೆ ಟೀಕೆ ಮಾಡುವುದು ಒಳ್ಳೆಯದಲ್ಲ ಎಂದು ಆಕ್ರೋಶ ಹೊರಹಾಕಿದರು.










