ಬೆಂಗಳೂರು : ಕರ್ನಾಟಕದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು 38 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 353ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆವರೆಗೆ ರಾಜ್ಯದಲ್ಲಿ 38 ಕೊರೊನಾ ಪಾಸಿಟಿವ್ ಕೇಸ್ಗಳು ದಾಖಲಾಗಿದ್ದು, ಈ ಪೈಕಿ 12 ಪ್ರಕರಣಗಳು ಮೈಸೂರಿನದ್ದಾಗಿವೆ.
ಜೊತೆಗೆ ಬೆಂಗಳೂರಿನಲ್ಲಿ 9 ಜನರಿಗೆ, ಬಳ್ಳಾರಿಯಲ್ಲಿ ಏಳು ಜನರಿಗೆ, ಮಂಡ್ಯದಲ್ಲಿ ಮೂವರಿಗೆ, ಚಿಕ್ಕಬಳ್ಳಾಪುರದಲ್ಲಿ ಮೂವರಿಗೆ ವಿಜಯಪುರದಲ್ಲಿ ಇಬ್ಬರಿಗೆ, ಬೀದರ್ನಲ್ಲಿ ಒಬ್ಬರಿಗೆ ಹಾಗೂ ದಕ್ಷಿಣ ಕನ್ನಡದಲ್ಲಿ ಒಬ್ಬರಿಗೆ ಸೋಂಕು ಹರಡಿರೋದು ದೃಢಪಟ್ಟಿದೆ.








