ವ್ಯಾಕ್ಸಿನ್ ಗಾಗಿ ಬೊಬ್ಬೆ ಹೊಡೆಯಬೇಡಿ : ಬಿ.ಎಸ್.ಯಡಿಯೂರಪ್ಪ
ಬೆಂಗಳೂರು : ರಾಜ್ಯದಲ್ಲಿ ವಾಕ್ಸಿಸ್ ಕೊರತೆ ಇರೋದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರವೇ. ಇದನ್ನ ಸರಿದೂಗಿಸಿಕೊಂಡು ವಾಕ್ಸಿನ್ ಕೊರತೆ ಆಗದಂತೆ ನೋಡಿಕೊಳ್ಳಬೇಕಿದ್ದ ಸರ್ಕಾರ ಕೇಂದ್ರದ ಮುಂದೆ ಮಂಡಿಯೂರಿ ಕುಂತಿದೆ.
ಈ ಮಧ್ಯೆ ರಾಜ್ಯ ಕೆಲವು ಭಾಗಗಳಲ್ಲಿ ವಾಕ್ಸಿನ್ ಗಾಗಿ ಜನರು ಆಸ್ಪತ್ರೆಯತ್ತ ನುಗ್ಗುತ್ತಿರುವ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಆಸ್ಪತ್ರೆ ಮುಂದೆ ಹೋಗಿ ವ್ಯಾಕ್ಸಿನ್ ಗಾಗಿ ಬೊಬ್ಬೆ ಹೊಡೆಯಬೇಡಿ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾಕ್ಸಿನ್ ಬಗ್ಗೆ ಸಮಸ್ಯೆ ಇಲ್ಲ. ಗೊಂದಲ ಬೇಡ, ಆತಂಕ ಬೇಡ.
ಆಸ್ಪತ್ರೆ ಮುಂದೆ ಹೋಗಿ ವ್ಯಾಕ್ಸಿನ್ ಗಾಗಿ ಬೊಬ್ಬೆ ಹೊಡೆಯಬೇಡಿ. ವ್ಯಾಕ್ಸಿನ್ ಬರ್ತಾ ಇದ್ದಂತೆ ಎಲ್ಲರಿಗೂ ಕೊಡ್ತೇವೆ, ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ಸದ್ಯ ರಾಜ್ಯದಲ್ಲಿ ಕೊರೊನಾ ಸ್ವಲ್ಪ ಕಂಟ್ರೋಲ್ ಗೆ ಬರ್ತಿದೆ, ಜನ ಸಹಕಾರ ಕೊಟ್ಟರೆ ಅನುಕೂಲವಾಗುತ್ತದೆ.
ದೇಶದಲ್ಲಿ ಕೊರೊನಾ ಹೆಚ್ಚಳ ಆಗ್ತಿರೋದು ನಮ್ಮ ರಾಜ್ಯದಲ್ಲಿ ಮಾತ್ರ, ಸಾವಿನ ಸಂಖ್ಯೆಯೂ ಹೆಚ್ಚಳವಾಗಿದೆ. ಜನರ ಸಹಕಾರದಿಂದ ಕೊರೊನಾ ಕಂಟ್ರೋಲ್ ಮಾಡಬಹುದು ಎಂದರು.










