ಪ್ರೇಮಿಗಳ ದಿನದಂದು ಬರಲಿದೆ ಎನ್ನ ತುಳು ಸಿನಿಮಾ..ಇದೇ ಫ್ರೆಬ್ರವರಿ 14ರ ಪ್ರೇಮಿಗಳ ದಿನದಂದು ತುಳು ಸಿನಿಮಾ ಯೆನ್ನಾ ತೆರೆಗೆ ಬರಲು ಸಜ್ಜಾಗಿದೆ. ಕ್ಯಾನೂಟ್ ಮಥಿಯಾಸ್ ಅವರ ಗ್ಲೋರಿಯಸ್ ಏಂಜೆಲೋರ್ ಪ್ರೊಡಕ್ಷನ್ಸ್ ಬ್ಯಾನರ್ನಡಿಯಲ್ಲಿ ನಿರ್ಮಾಣವಾಗಿರುವ ಯೆನ್ನಾ ಇಡೀ ತುಳುನಾಡಿನಲ್ಲಿ ಸಕತ್ ಸೌಂಡ್ ಮಾಡ್ತಿದೆ.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಚಿತ್ರದ ನಿರ್ದೇಶಕ ವಿಶ್ವನಾಥ್ ಕೋಡಿಕಲ್, ಎನ್ನ ಒಂದು ಸಂಪೂರ್ಣ ಹೊಸಬರ ಸಿನಿಮಾ, ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ.. ಈ ಚಿತ್ರದಲ್ಲಿ ಹೊಸಮುಖಗಳಿಗೆ ಅವಕಾಶ ನೀಡಿದ್ದೇವೆ ಎಂದು ತಿಳಿಸಿದ್ರು. ಯೆನ್ನಾ ಒಂದು ವಿಶಿಷ್ಟ ಕಥಾಹಂದರದ ಸಿನಿಮಾ. ಈಗಾಗಲೇ ಚಿತ್ರ ಸೆನ್ಸಾರ್ ಆಗಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇದೇ 14 ರಂದು, ದಕ್ಷಿಣ ಕನ್ನಡ, ಉಡುಪಿ ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ಹೇಳಿದ್ರು.

ಚಿತ್ರಕ್ಕೆ ವಿಶ್ವನಾಥ್ ಆಕ್ಷನ್ ಕಟ್ ಹೇಳುವುದರ ಜತೆಗೆ ಚಿತ್ರದ ಕಥೆ ನಿರ್ವಹಿಸಿದ್ದಾರೆ. ಮ್ಯಾಕ್ಸಿಮ್ ಪಿರೇರಾ ಏಂಜೆಲೋರ್ ಸಹಾಯಕ ನಿರ್ದೇಶಕರು. ಲಾಯ್ ವ್ಯಾಲೆಂಟೈನ್ ಸಲ್ಡಾನ್ಹಾ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಧನುಷ್ ಬಜಾಲ್ ಮತ್ತು ಮ್ಯಾಕ್ಸಿಮ್ ಪೆರಿಯೆರಾ ಸಾಹಿತ್ಯ ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಲಾಯ್ ಕರಾವಳಿ ಪ್ರದೇಶಗಳ ಜೊತೆಗೆ ಪ್ರಸಿದ್ಧ ಗಾಯಕಿ ಶಿಲ್ಪಾ ಕಟಿನ್ಹೋ ಚಿತ್ರದ ಹಾಡುಗಳಿಗೆ ಧ್ವನಿಗೂಡಿಸಿದ್ದಾರೆ.
ಇನ್ನ ಸುದ್ದಿಗೋಷ್ಟಿಯಲ್ಲಿ ಸಿ.ಕೆ.ಪ್ರಶಾಂತ್, ನಿರ್ಮಾಪಕ ಕ್ಯಾನುಟ್ ಮಥಿಯಾಸ್, ನಿರ್ದೇಶಕ ವಿಶ್ವನಾಥ್ ಕೊಡಿಕಲ್, ಪ್ರಮುಖ ನಟ ವಿಜೆ ವಿನೀತ್, ಮತ್ತು ಗ್ಲೋರಿಯಸ್ ಏಂಜೆಲೋರ್ ಪ್ರೊಡಕ್ಷನ್ಸ್ ನ ಮ್ಯಾಕ್ಸಿಮ್ ಪಿರೇರಾ ಏಂಜೆಲೋರ್ ಉಪಸ್ಥಿತರಿದ್ದರು








