ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬೆಂಗಳೂರಿನ ಟ್ರಸ್ಟ್‌ ವೆಲ್‌ ಆಸ್ಪತ್ರೆಯ ವೈದ್ಯರಿಂದ ಬ್ಲಾಕ್‌ ಫಂಗಸ್ ಸೋಂಕಿನ ಬಗ್ಗೆ ಮಾಹಿತಿ

Shwetha by Shwetha
May 12, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
black fungus treatment in trust hospital
Share on FacebookShare on TwitterShare on WhatsappShare on Telegram

ಬೆಂಗಳೂರಿನ ಟ್ರಸ್ಟ್‌ ವೆಲ್‌ ಆಸ್ಪತ್ರೆಯ ವೈದ್ಯರಿಂದ ಬ್ಲಾಕ್‌ ಫಂಗಸ್ ಸೋಂಕಿನ ಬಗ್ಗೆ ಮಾಹಿತಿ

ಕೊರೋನಾ ಎರಡನೇ ಅಲೆಯ ಸೋಂಕಿನಿಂದ ಚೇತರಿಸಿಕೊಂಡಿರುವವರ ಮೇಲೆ ಡೆಡ್ಲಿ ಬ್ಲಾಕ್‌ ಫಂಗಸ್‌ – ಮ್ಯುಕೋರ್‌ಮಯೋಸಿಸ್ ಅಟ್ಯಾಕ್‌ ಆಗುತ್ತಿರುವ ಪ್ರಕರಣಗಳು ವರದಿಯಾಗಿದೆ. ದೆಹಲಿಯಲ್ಲಿ ಹೆಚ್ಚಾಗಿ ಕಂಡುಬಂದಿದ್ದ ಈ ಫಂಗಸ್‌ ಸೋಂಕು ಇದೀಗ ಬೆಂಗಳೂರಿನಲ್ಲೂ ತನ್ನ ಪ್ರಭಾವ ತೋರಿಸುತ್ತಿದೆ.

Related posts

glasgow-commonwealth-games-2026-india-medals-nita-ambani-congratulates

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಮೋಘ ಸಾಧನೆಗೆ ನೀತಾ ಅಂಬಾನಿ ಅಭಿನಂದನೆ

August 3, 2026
bhaja-mana-dasa-sahitya-workshop-dr-vidyabhushan-jayanagar-bengaluru

Bengaluru – ಹೊಸ ತಲೆಮಾರಿಗೆ ದಾಸಸಾಹಿತ್ಯದ ಪರಂಪರೆ: ಡಾ. ವಿದ್ಯಾಭೂಷಣ್ ಅವರೊಂದಿಗೆ ‘ಭಜ ಮನ’ ಸಂಗೀತ ಸಂಭ್ರಮ

August 3, 2026

ಬೆಂಗಳೂರಿನಲ್ಲಿರುವ ಟ್ರಸ್ಟ್‌ ವೆಲ್‌ ಆಸ್ಪತ್ರೆ ಕಳೆದ 2 ವಾರಗಳಲ್ಲಿ ಬ್ಲಾಕ್‌ ಫಂಗಸ್‌ ನ ಸೋಂಕಿಗೆ ಒಳಗಾದ 38 ಜನರಿಗೆ ಚಿಕಿತ್ಸೆಯನ್ನು ನೀಡಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಇಷ್ಟೊಂದು ಪ್ರಮಾಣದಲ್ಲಿ ಬ್ಲಾಕ್‌ ಫಂಗಸ್‌ ನ ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ಬಹುಶಃ ಇದು ಒಂದೇ ಆಸ್ಪತ್ರೆ ಎಂದರೆ ತಪ್ಪಾಗಲಾರದು.

ಕೊರೋನಾ ಸೋಂಕಿನಿಂದ ಗುಣಮುಖರಾದ ಮಧುಮೇಹ ರೋಗಿಗಳಲ್ಲಿ ಹೆಚ್ಚಾಗಿ ಈ ಫಂಗಲ್‌ ಸೋಂಕು ಕಂಡುಬರುತ್ತದೆ. ‌ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಇದ್ದರೆ ಕಣ್ಣು, ಮೇಲ್ಡವಡೆಗೆ ಹಾನಿಯಾಗುವ ಸಂಭವವಿದ್ದು, ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು.
ಕೊರೋನಾ ಸೋಂಕಿತರಿಗೆ ಸ್ಟಿರಾಯ್ಡ್‌ ಅನ್ನು ಚಿಕಿತ್ಸೆಗೆ ಬಳಸುತ್ತಿದ್ದು, ಇದು ಸೋಂಕಿತರ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಮಧುಮೇಹ ರೋಗಿಗಳಲ್ಲಿ ಸ್ಟಿರಾಯ್ಡ್‌ ಬಳಕೆಯಿಂದ ಸಕ್ಕರೆ ಅಂಶವು ಏರಿಕೆ ಕಂಡು ಫಂಗಲ್‌ ಬೆಳವಣಿಗೆಗೆ ಕಾರಣವಾಗುತ್ತದೆ.
ಸ್ಟಿರಾಯ್ಡ್‌ ಜೊತೆಗೆ ಹೆಚ್ಚು ಪ್ರಭಾವದ ಆಂಟಿಬಯಾಟಿಕ್‌ಗಳನ್ನು ಕೆಲವು ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸಲಾಗುತ್ತದೆ. ಇದರಿಂದಾಗಿ ರೋಗನಿರೋಧಕ ಶಕ್ತಿಯು ಕಡಿಮೆಯಾಗಿ ಬ್ಲಾಕ್‌ ಫಂಗಸ್‌ ಅಥವಾ ಮ್ಯುಕೋರ್‌ಮಯೋಸಿಸ್ ಫಂಗಸ್ ಗೆ ತುತ್ತಾಗುವ ಸಂಭವವಿದೆ.

ಟ್ರಸ್ಟ್‌ ವೆಲ್‌ ಆಸ್ಪತ್ರೆ ಸೋಂಕಿತರಿಗೆ ವಿಶೇಷ ಕಾಳಜಿಯನ್ನು ಹಾಗೂ ಆರೈಕೆಯನ್ನು ನೀಡುವ ಉದ್ದೇಶದಿಂದ ವಿಶೇಷ ವಿಭಾಗವನ್ನು ಪ್ರಾರಂಭಿಸಿದೆ.
black fungus treatment in trust hospital

ಟ್ರಸ್ಟ್‌ ವೆಲ್‌ ಆಸ್ಪತ್ರೆಯ ಮ್ಯುಕೋರ್‌ಮಯೋಸಿಸ್ ವಿಶೇಷ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿರುವ ಡಾ. ದೀಪಕ್‌ ಹಲ್ದೀಪುರ್‌ ಮಾತನಾಡಿ, ಕೋವಿಡ್‌ ಸಾಂಕ್ರಾಮಿಕವು ರೋಗಿಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಸ್ಟಿರಾಯ್ಡ್‌ಗಳನ್ನು ವೈದ್ಯರ ಸಲಹೆ ಇಲ್ಲದೆ ತಪ್ಪಾಗಿ ಬಳಸುವುದರಿಂದ ಮಧುಮೇಹ ರೋಗಿಗಳಲ್ಲಿ ಸಕ್ಕರೆ ಅಂಶವು ಹೆಚ್ಚಾಗುವ ಸಂಭವವಿದೆ. ಅಲ್ಲದೆ, ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವ ಸಂಧರ್ಭದಲ್ಲಿ ಈ ಫಂಗಸ್‌ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಆಕ್ಸಿಜನ್‌ ಹ್ಯೂಮಿಡಿಫೈರ್‌ ನಲ್ಲಿ ಬಳಸುವ ನೀರನ್ನು ಸ್ಟೆರಲೈಸ್‌ ಮಾಡದೇ ಇದ್ದಾಗ ಕೂಡ ಈ ಫಂಗಸ್ ಗೆ‌ ತುತ್ತಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಕೋವಿಡ್‌ ಸೋಂಕಿನಿಂದ ಗುಣುಮುಖರಾದ ಮೇಲೆ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಡಾ. ದೀಪಕ್‌ ಹಲ್ದೀಪುರ್‌ ಸಲಹೆ ನೀಡಿದ್ದಾರೆ.

1. ಮುಖದ ಒಂದೇ ಭಾಗದಲ್ಲಿ ನೋವು ಕಂಡುಬಂದರೆ
2. ಕಣ್ಣುಗಳಲ್ಲಿ ಊತ/ನೋವು ಕಂಡುಬಂದರೆ
3. ಮೂಗಿನಲ್ಲಿ ಗಾಳಿಯಾಡದಿರುವಿಕೆ
4. ಮೂಗಿನಲ್ಲಿ ರಕ್ತ ಸೋರಿಕೆ
5. ಹಲ್ಲುಗಳು ಸಡಿಲಗೊಳ್ಳುವುದು
6. ಬಾಯಿಯ ಮೇಲ್ಭಾಗದಲ್ಲಿ ಕಪ್ಪು ಅಥವಾ ಕಂದುಬಣ್ಣದ ಕಂಡುಬಂದರೆ
7. ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಕಂಡುಬಂದರೆ
ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಬ್ಯಾಕ್‌ ಫಂಗಸ್‌ ಅಥವಾ ಮ್ಯುಕೋರ್‌ಮಯೋಸಿಸ್ ನ ಸೋಂಕು ಇಲ್ಲದೆ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ವೈದ್ಯರಾದ ದೀಫಕ್‌ ಹಲ್ದೀಪುರ್‌ ತಿಳಿಸಿದ್ದಾರೆ.
black fungus treatment in trust hospital
ಡಾ ಹೆಚ್‌.ವಿ ಮಧುಸೂಧನ್‌ ಮಾತನಾಡಿ, ಕಳೆದ ಎರಡು ವಾರದಲ್ಲಿ ಟ್ರಸ್ಟ್‌ ವೆಲ್‌ ಆಸ್ಪತ್ರೆಯಲ್ಲಿ 15 ಕ್ಕೂ ಹೆಚ್ಚು ಬ್ಯಾಕ್‌ ಫಂಗಸ್‌ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಇದು ಸೈಲೆಂಟ್‌ ಕಿಲ್ಲರ್‌ ಸೋಂಕು ಆಗಿದ್ದು, ಕೊರೋನಾ ಮೊದಲ ಅಲೆಯಲ್ಲಿ ಕೇವಲ 33 ರೋಗಿಗಳಿಗೆ ಚಿಕಿತ್ಸೆ ನೀಡಿದ್ದೆವು. ಆದರೆ, ಎರಡನೇ ಅಲೆಯ ಸಂದರ್ಭದಲ್ಲಿ ಕೇವಲ 2 ವಾರದಲ್ಲಿ 38 ಜನರಿಗೆ ಸೋಂಕು ತಗುಲಿದ್ದು, ಇದು ಬಹಳ ಆತಂಕಕಾರಿ ವಿಷಯವಾಗಿದೆ. ಕೊರೋನಾದಿಂದ ಗುಣಮುಖರಾದ ಮೇಲೆ ಅದರಲ್ಲೂ ಮಧುಮೇಹ ರೋಗದಿಂದ ಬಳುತ್ತಿರುವವರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದರು.

ವಿಶೇಷ ಚಿಕಿತ್ಸಾ ವಿಭಾಗ:
ಈ ಫಂಗಸ್‌ ಸೋಂಕು ಬಹು ಬೇಗನೆ ಇತರರಿಗೆ ಹರಡುತ್ತದೆ. ಹಾಗಾಗಿ ಇದಕ್ಕೆ ಚಿಕಿತ್ಸೆ ನೀಡುವ ವೈದ್ಯರಿಗೂ ಈ ಸೋಂಕು ತಗುಲುವ ಭೀತಿ ಇದೆ. ಆದ್ದರಿಂದ ಟ್ರಸ್ಟ್‌ ವೆಲ್‌ ಆಸ್ಪತ್ರೆಯಲ್ಲಿ ಬ್ಲಾಕ್‌ ಫಂಗಸ್ ಚಿಕಿತ್ಸೆಗಾಗಿ ವಿಶೇಷ ವಿಭಾಗವನ್ನು ರಚಿಸಲಾಗಿದೆ. ಈ ತಂಡದಲ್ಲಿ ಇಎನ್‌ಟಿ ವಿಭಾಗದ ನಿರ್ದೇಶಕರಾದ ಡಾ ದೀಪಕ್‌ ಹಲ್ದೀಪುರ್‌, ನ್ಯೂರಸೈನ್ಸಸ್‌ ವಿಭಾಗದ ನಿರ್ದೇಶಕರಾದ ಡಾ. ಹೆಚ್‌. ವಿ ಮಧುಸೂಧನ್‌, ಮ್ಯಾಕ್ಸಿಲಲೋಫೇಶಿಯಲ್‌ ತಜ್ಞರಾದ ಡಾ ಆದಿತ್ಯಾ ಮೂರ್ತಿ, ಕಣ್ಣಿನ ತಜ್ಞರಾದ ಡಾ ಪ್ರೀತಿ ಕಾಳೆ ಇದ್ದಾರೆ.

ಸಾರ್ವಜನಿಕರಲ್ಲಿ ಈ ಸೋಂಕಿನ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯತೆ ಹೆಚ್ಚಾಗಿದ್ದು, ಮೇಲೆ ತಿಳಿಸಿದ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಅಶೋಕ್‌ ಆರ್‌
ಟ್ರಸ್ಟ್‌ ವೆಲ್‌ ಆಸ್ಪತ್ರೆ
ಮಾರ್ಕೇಟಿಂಗ್‌ ವಿಭಾಗದ ಮುಖ್ಯಸ್ಥರು
ಮೊ: 91 99004 42219
wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ.

ವಾಟ್ಸಾಪ್ ಮೂಲಕ ವ್ಯಾಕ್ಸಿನೇಷನ್ ಸೆಂಟರ್ ಅನ್ನು ಹೇಗೆ ಕಂಡುಹಿಡಿಯಬಹುದು ?#Covid #VaccinationCenter #WhatsApp https://t.co/2yTqNJTvY2

— Saaksha TV (@SaakshaTv) May 7, 2021

ಕಾಳು ಮೆಣಸು ಸಾರು (ಬಾಣಂತಿ ಸಾರು )#Saakshatv #cooking #recipe https://t.co/43m1leMELu

— Saaksha TV (@SaakshaTv) May 9, 2021

https://twitter.com/SaakshaTv/status/1390506933489180675?s=19

https://twitter.com/SaakshaTv/status/1390494846192922625?s=19

#blackfungus #trusthospital

Tags: black fungus case treatmentblack fungus treatment
ShareTweetSendShare
Join us on:

Related Posts

glasgow-commonwealth-games-2026-india-medals-nita-ambani-congratulates

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಮೋಘ ಸಾಧನೆಗೆ ನೀತಾ ಅಂಬಾನಿ ಅಭಿನಂದನೆ

by admin
August 3, 2026
0

  ಮುಂಬೈ, ಆಗಸ್ಟ್ 03, 2026: ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳ ಸಹಿತ ಒಟ್ಟು...

bhaja-mana-dasa-sahitya-workshop-dr-vidyabhushan-jayanagar-bengaluru

Bengaluru – ಹೊಸ ತಲೆಮಾರಿಗೆ ದಾಸಸಾಹಿತ್ಯದ ಪರಂಪರೆ: ಡಾ. ವಿದ್ಯಾಭೂಷಣ್ ಅವರೊಂದಿಗೆ ‘ಭಜ ಮನ’ ಸಂಗೀತ ಸಂಭ್ರಮ

by admin
August 3, 2026
0

• ಆಗಸ್ಟ್ 6, 7ಕ್ಕೆ ಜಯನಗರದಲ್ಲಿ 'ಭಜ ಮನ' ಗಾಯನ ಕಾರ್ಯಾಗಾರ • ವಿದ್ಯಾಭೂಷಣ್-ಮೇಧಾ ಅವರಿಂದ ದಾಸರಪದಗಳ ಮಾರ್ಗದರ್ಶನ • ಸಂಗೀತ ಪ್ರೇಮಿಗಳಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ...

today-rashee-bhavishya-04-08-2026-kannada-astrology-predictions

Astro- ನಾಡದೇವತೆ ಶ್ರೀ ಚಾಮುಂಡೇಶ್ವರೀ ಅಮ್ಮನವರ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, 04/08/2026 ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

by admin
August 3, 2026
0

  ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ 8548998564 ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ...

rekhya-village-belthangady-wild-elephant-attack-sanath-rai

Mangaluru – ಕಾಡಿನವರು ಊರಿಗೆ ಬಂದಿದ್ದಾರೆ..ಊರಿನವರು ಎಲ್ಲಿಗೆ ಹೋಗಬೇಕು..? ಜೀವ ಉಳಿಸಿ..ನಮ್ಮನ್ನು ರಕ್ಷಿಸಿ..! ಈ ಸಣ್ಣ ಕೂಗು ಕೇಳಿ ಬರುತ್ತಿರುವುದು ಎಲ್ಲಿಂದ..? ಆ ಊರು ಯಾವುದು..?

by admin
August 3, 2026
0

ಕತ್ತಲೆಯ ರಾತ್ರಿಯಲ್ಲಿ ರಾಜಾರೋಷದ ಓಡಾಟ..! ಕಾಡು ದಾರಿಯಲ್ಲಿ ಸದ್ದಿಲದ ಕಾರ್ಯಾಚರಣೆ..! ಬಲಿಯಾಯ್ತು ಒಂದು ಬಡ ಜೀವ..! ಕಾಡಿನವರು ಊರಿಗೆ ಬಂದಿದ್ದಾರೆ..ಊರಿನವರು ಎಲ್ಲಿಗೆ ಹೋಗಬೇಕು..? ಜೀವ ಉಳಿಸಿ..ನಮ್ಮನ್ನು ರಕ್ಷಿಸಿ..!...

todays-rashi-bhavishya-kannada-03-august-2026

Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ

by admin
August 3, 2026
0

ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram