‘ನಾನಿನ್ನೂ ಬದುಕಿದ್ದೀನಿ ಸತ್ತಿಲ್ಲ’… ಸಾವಿನ ವದಂತಿಗೆ ಸ್ಪಷ್ಟನೆ ಕೊಟ್ಟ ‘ಶಕ್ತಿಮಾನ್’..!
ಕೋವಿಡ್ ಸಂಕಷ್ಟದ ನಡುವೆ ಅನೇಕ ಸಿನಿಮಾ ತಾರೆಯರು ಸಾವನಪ್ಪಿದ್ದಾರೆಂಬ ಕೆಲ ಸುಳ್ಳು ಸುದ್ದಿಗಳನ್ನ ಕೆಲ ಕಿಡಿಗೇಡಿಗಳು ಸಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿದ್ದಾರೆ.. ಇತ್ತೀಚೆಗೆ ಸ್ಯಾಂಡಲ್ ವುಡ್ ನಟ ದೊಡ್ಡಣ್ಣ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ.. ಅವರು ಮೃತಪಟ್ಟಿದ್ದಾರೆ ಎಂದೆಲ್ಲಾ ಸುದ್ದಿ ಹರಿದಾಡಿತ್ತು. ಸಾಲದಕ್ಕೆ ಕೆಲ ದುಷ್ಕರ್ಮಿಗಳು ಅವರ ಫೋಟೋಗೆ ಶ್ರದ್ಧಾಂಜಲಿ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು.. ಆದ್ರೆ ಬಳಿಕ ಇದಕ್ಕೆ ಖುದ್ದು ದೊಡ್ಡಣ್ಣ ಅವರೇ ನೇರವಾಗಿ ಲೈವ್ ಬಂದು ಸ್ಪಷ್ಟನೆ ನೀಡಿದ್ದರು.
ಇಮತಹದ್ದೇ ಒಂದು ಗುಮಾನಿ ‘ಶಕ್ತಿಮಾನ್’ ಮತ್ತು ‘ಮಹಾಭಾರತ’ ಧಾರಾವಾಹಿ ಖ್ಯಾತಿಯ ನಟ ಮುಖೇಶ್ ಖನ್ನಾ ಅವರ ಬಗ್ಗೆಯೂ ಹಬ್ಬಿದೆ. ಹೌದು.. ಕೋವಿಡ್-19 ನಿಂದ ಮುಖೇಶ್ ಖನ್ನಾ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮುಖೇಶ್ ಸಾವಿನ ಪೋಸ್ಟರ್ ಗಳನ್ನು ನೋಡಿ ಅಭಿಮಾನಿಗಳು, ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ಬಳಿಕ ಈ ಸುದ್ದಿ ನೋಡಿ ಶಾಕ್ ಆಗಿರುವ ಮುಖೇಶ್ ಖನ್ನಾ ನಾನಿನ್ನೂ ಬದುಕಿದ್ದೀನಿ ಎಂದು ವಿಡಿಯೋ ಹರಿಬಿಟ್ಟಿದ್ದು, ಇಂತಹ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಾಕ್ರೋಶ ಹೊರಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಸಾವಿನ ವದಂತಿಗೆ ಸ್ಪಷ್ಟನ ನೀಡಿರುವ ಮುಖೇಶ್ ಖನ್ನಾ, ಯಾರೊಬ್ಬರ ಜೀವನದ ಬಗ್ಗೆಯೂ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಸಬೇಡಿ, ಮೊದಲು ಪರಿಶೀಲಿಸಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣವೇ ಹೊಣೆಯಾಗಲಿದೆ ಎಂದಿದ್ದಾರೆ.
‘ನಿಮ್ಮ ಆಶೀರ್ವಾದದಿಂದ ನಾನು ಸಂಪೂರ್ಣವಾಗಿ ಆರೋಗ್ಯವಾಗಿ, ಚೆನ್ನಾಗಿ ಇದ್ದೀನಿ. ನನಗೆ ಕೋವಿಡ್ -19 ಇಲ್ಲ. ನನ್ನನ್ನು ಯಾವುದೇ ಆಸ್ಪತ್ರೆಗೂ ದಾಖಲಿಸಿಲ್ಲ. ಈ ವದಂತಿಯನ್ನು ಯಾರು ಹಬ್ಬಿಸಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಇದರ ಉದ್ದೇಶವೇನು ಎನ್ನುವುದು ನನಗೆ ಗೊತ್ತಿಲ್ಲ. ಇಂಥ ಸುಳ್ಳು ಸುದ್ದಿಯಿಂದ ಜನರ ಭಾವನೆಯನ್ನು ನೋವಿಸಬೇಡಿ’ ಎಂದು ಹೇಳಿದ್ದಾರೆ. ‘ಇಂಥ ಮಾನಸಿಕ ಅಸ್ಥಿರವಾಗಿರುವ ಜನರಿಗೆ ಯಾವ ಚಿಕಿತ್ಸೆ ನೀಡಬೇಕು. ಅವರನ್ನು ಯಾರು ಶಿಕ್ಷಿಸುತ್ತಾರೆ. ಸಾಕು, ಈಗಲೇ ಜಾಸ್ತಿ ಆಗಿದೆ. ಇಂಥ ನಕಲಿ ಸುದ್ದಿಗಳನ್ನು ನಿಲ್ಲಿಸಿ’ ಕೋಪಗೊಂಡಿದ್ದಾರೆ.








