ಮತ್ತೆ ವೈರಲ್ ಆಗ್ತಿದೆ ನಟಿ ರೇಖಾ – ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮದುವೆ ಸುದ್ದಿ..!
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕನಾಗಿದ್ದಾಗ ಅವರು ಅನೇಕ ಬಾಲಿವುಡ್ ಮಂದಿ ಅದ್ರಲದ್ಲೂ ನಾಯಕಿಯರ ಜೊತೆಗೆ ಹೆಚ್ಚು ಸಂಪರ್ಕ ಬೆಳೆಸಿದ್ದರು. ಅಲ್ಲದೇ ಸಾಕಷ್ಟು ವದಂತಿಗಳು ಸಹ ಅವರ ಬಗ್ಗೆ ವೈರಲ್ ಆಗಿತ್ತು.. ಅದ್ರಲ್ಲೂ ಪ್ರಮುಖವಾಗಿ ಇಮ್ರಾನ್ ಖಾನ್ ಮತ್ತು ಬಾಲಿವುಡ್ ಖ್ಯಾತ ನಟಿ ರೇಖಾ ನಡುವಿನ ಪ್ರೀತಿ, ಪ್ರೇಮಾ, ಮದುವೆ ವಿಚಾರ…
ಆದ್ರೆ ಎಷ್ಟೋ ವರ್ಗಳ ಬಳಳಿಕ ಇದೀಗ ಮತ್ತೊಮ್ಮೆ ಇದೇ ಸುದ್ದಿ ವೈರಲ್ ಆಗ್ತಿದೆ. ಹೌದು.. ಇ ಕುರಿತಾಗಿ ಒಂದು ಲೇಖನ ಈಗ ವೈರಲ್ ಆಗಿ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಈ ಲೇಖನದಲ್ಲಿ, ರೇಖಾ ಮತ್ತು ಇಮ್ರಾನ್ ಬಹುತೇಕ ಮದುವೆ ಹಂತಕ್ಕೆ ಹೋಗಿದ್ದರು ಎನ್ನುವ ವಿಚಾರವಿದೆ. ಇದು ರೇಖಾ ಅವರ ತಾಯಿಗೂ ತುಂಬಾ ಇಷ್ಟವಿತ್ತಂತೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್, ರೇಖಾ ಜೊತೆ ಒಂದು ತಿಂಗಳು ಮುಂಬೈನಲ್ಲಿ ಸಮಯ ಕಳೆದಿದ್ದರು. ಇಬ್ಬರು ಮುಂಬೈ ಕಡಲತೀರದಲ್ಲಿ ಕಾಣಿಸಿಕೊಂಡಿದ್ದರು ಎಂದು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿತ್ತು. ಈ ಬಗ್ಗೆ ಎದ್ದಿದ್ದ ವದಂತಿಗಳಿಗೆ ಆಗ ಪ್ರತಿಕ್ರಿಯೆ ನೀಡಿದ್ದ ಇಮ್ರಾನ್ ಖಾನ್, ರೇಖಾ ಜೊತೆಗಿನ ಕಂಪನಿ ಸ್ವಲ್ಪ ಸಮಯ ಮಾತ್ರ ಚಂದ. ನಾನು ಅವರ ಜೊತೆಗಿದ್ದ ಸಮಯವನ್ನು ಆನಂದಿಸಿದ್ದೀನಿ. ಬಳಿಕ ನಾನು ಮುಂದುವರೆದಿದ್ದೀನಿ. ಸಿನಿಮಾ ನಟಿಯರನ್ನು ಮದುವೆಯಾಗುವ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.








