ಬೆಂಗಳೂರಲ್ಲಿ ಇಂದು ಎಷ್ಟು ಮಂದಿಗೆ ಕೋವಿಡ್ ದೃಢಪಟ್ಟಿದೆ ಗೊತ್ತಾ..? bengaluru
ಬೆಂಗಳೂರು : ಕೊರೊನಾ ಎರಡನೇ ಅಲೆ ಸಿಲಿಕಾನ್ ಸಿಟಿ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದೆ.
ಒಂದಿಷ್ಟು ಬಿಡುವು ಇಲ್ಲದೆ ಪ್ರತಿ ಸೆಕೆಂಡ್ ಚಲನೆಯಲ್ಲಿದ್ದ ಬೆಂಗಳೂರು ಈಗ ಸ್ತಬ್ಧವಾಗಿದೆ.
ಕೊರೊನಾ ಅನ್ನೋ ಹೆಮ್ಮಾರಿಯ ಕಬಂದ ಬಾಹುಗಳಲ್ಲಿ ಸಿಕ್ಕಿ ಬೆಂಗಳೂರು ಬರ್ಬಾದಾಗುತ್ತಿದೆ.
ಇಂದು ನಗರದಲ್ಲಿ 13,492 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಬೆಂಗಳೂರಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 38.13ರಷ್ಟು ಇದ್ದು, 3,60,862 ಕೋವಿಡ್ ಸಕ್ರಿಯ ಪ್ರಕರಣಗಳಿವೆ.
13,492 ಪಾಸಿಟಿವ್ ಪ್ರಕರಣಗಳ ಪೈಕಿ ಬೊಮ್ಮನಹಳ್ಳಿಯಲ್ಲಿ 1,450, ದಾಸರಹಳ್ಳಿ 478, ಬೆಂಗಳೂರು ಪೂರ್ವ 1,752 , ಮಹದೇವಪುರ 2,022 , ಆರ್.ಆರ್. ನಗರ 1,022, ಬೆಂಗಳೂರು ದಕ್ಷಿಣ 1,376, ಬೆಂಗಳೂರು ಪಶ್ಚಿಮ 1,108, ಯಲಹಂಕದಲ್ಲಿ 971 ಹಾಗೂ ಬೆಂಗಳೂರು ಹೊರವಲಯದಲ್ಲಿ 1,096 ಜನರಲ್ಲಿ ಪಾಸಿಟಿವ್ ಕಂಡುಬಂದಿದೆ.
ನಿನ್ನೆ 14,316 ಪಾಸಿಟಿವ್ ಕೇಸ್ ದೃಢಪಟ್ಟಿತ್ತು.