ಬಾಲಿವುಡ್ ನ ‘ಸಲ್ಲು ಭಾಯ್’ ಸಿನಿಮಾಗೆ ಬ್ಯಾಡ್ ಲುಕ್ – ಅತ್ಯಂತ ಕಳಪೆ ಸಿನಿಮಾಗಳ ಪಟ್ಟಿಗೆ ಸೇರಿದ ‘ರಾಧೆ’
ಮುಂಬೈ : ಬಾಲಿವುಡ್ ನ ‘ಬ್ಯಾಡ್ ಬಾಯ್’ , ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ ಬಹುನಿರೀಕ್ಷೆಯ ರಾಧೆ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು.. ಈಗಾಗಲೇ ಸಿನಿಮಾ ಕೂಡ ರಿಲೀಸ್ ಆಗಿದೆ. ಆದ್ರೆ ನಿರೀಕ್ಷೆ ಮಟ್ಟದ ಯಶಸ್ಸು ಗಳಿಸುವಲ್ಲಿ ವಿಫಲವಾಗಿದೆ. ಸಾಲದಕ್ಕೆ ಅತ್ಯಂತ ಕಳಪೆ ಸಿನಿಮಾಗಳ ಪಟ್ಟಿ ಸೇರಿದೆ. ಸಲ್ಮಾನ್ ಖಾನ್ ನಟಿಸಿರುವ ‘ರಾಧೆ’ ಸಿನಿಮಾ ಎರಡು ದಿನಗಳ ಹಿಂದಷ್ಟೆ ಒಟಿಟಿಯಲ್ಲಿ ಹಾಗೂ ಕೆಲವೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.
ಪ್ರಭುದೇವಾ ನಿರ್ದೇಶಿಸಿರುವ ‘ರಾಧೆ’ ಸಿನಿಮಾ ಅತ್ಯಂತ ಕಳಪೆ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಸಿನಿಮಾಗಳ ಗುಣಮಟ್ಟ ಆಧರಿಸಿ ರೇಟಿಂಗ್ ನೀಡುವ ಐಎಂಡಿಬಿಯು ‘ರಾಧೆ’ ಸಿನಿಮಾಕ್ಕೆ ನೀಡಿರುವುದು ಹತ್ತರಲ್ಲಿ 2.1 ರೇಟಿಂಗ್ ಅಷ್ಟೆ. ಸಲ್ಮಾನ್ ಖಾನ್ ಈವರೆಗೆ ನಟಿಸಿರುವ ಸಿನಿಮಾಗಳಲ್ಲಿ ಅತ್ಯಂತ ಕಳಪೆ ಐಎಂಡಿಬಿ ರೇಟಿಂಗ್ ಪಡೆದ ಎರಡನೇ ಸಿನಿಮಾ ‘ರಾಧೆ’. ಸಲ್ಮಾನ್ ಖಾನ್ ನಟಿಸಿರುವ ‘ರೇಸ್ 3’ ಸಿನಿಮಾಕ್ಕೆ ಐಎಂಡಿಬಿಯು 1.9 ರೇಟಿಂಗ್ ನೀಡಿದೆ.
ಕೆಲವು ಸಿನಿಮಾ ವಿಮರ್ಶಕರಂತೂ ‘ರಾಧೆ’ ಸಿನಿಮಾವನ್ನು ನೋಡಲು ಯೋಗ್ಯವಲ್ಲದ ಸಿನಿಮಾ ಎಂದಿದ್ದಾರೆ. ಇನ್ನು ತೆಲುಗಿನ ನಟಿ ಶ್ರೀರೆಡ್ಡಿ ಇದು ಅತ್ಯಂತ ಕಳಪೆ ಸಿನಿಮಾ ಎಂದಿದ್ದಾರೆ. ‘ರಾಧೇ ಸಿನಿಮಾ ಒಂದು ವಾಕ್ಯದ ವಿಮರ್ಶೆ, ಅಲ್ಲದೇ ಬಹುತೇಕರು ಸಿನಿಮಾ ನಿರ್ದೇಶಿಸಿರುವ ಪ್ರಭುದೇವಾ ಅವರನ್ನ ಟೀಕಿಸುತ್ತಾ.. ಕೆಟ್ಟ ವಿಮರ್ಶೆ ಪಡೆಯುವುದಕ್ಕೆ ಪ್ರಭುದೇವಾ ಅವರೇ ಕಾರಣ, ಸಲ್ಮಾನ್ ಖಾನ್ ಅದ್ಭುತ ನಟ. ಆದರೆ, ಪ್ರಭುದೇವ ಸಿನಿಮಾ ಹಾಳು ಮಾಡಿದ್ದಾರೆ ೆಂದು ಟ್ರೋಲ್ ಗಳನ್ನ ಮಾಡಿ ಹರಿಬಿಟ್ಟಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.