ಕಿಲ್ಲರ್ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಸೋಂಕು ನಿಯಂತ್ರಣ ಮಾಡಲು ಸರ್ಕಾರಗಳು ಹರಸಾಹಸ ಪಡುತ್ತಿದ್ದಾವೆ. ಅದರ ಭಾಗವಾಗಿಯೇ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಲಾಕ್ ಡೌನ್ ನಿಂದಾಗಿ ಸಣ್ಣ ಪುಟ್ಟ, ಮಧ್ಯಮ ಸ್ಥರದ ವ್ಯಾಪಾರಿಗಳಿಗೆ ಬಹು ದೊಡ್ಡ ಹೊಡೆತ ಬಿದ್ದದಂತಾಗಿದೆ. ಅಲ್ಲದೆ ದಿನಗೂಲಿ ಕಾರ್ಮಿಕರಿಗೂ ಬದುಕು ನಡೆಸುವುದು ಕಷ್ಟವಾಗಿದೆ. ಇದಕ್ಕೆ ಅಡುಗೆ, ಪುರೋಹಿತ ವೃತ್ತಿ ಮಾಡುವ ಬ್ರಾಹ್ಮಣ ಸಮುದಾಯವು ಹೊರತಲ್ಲ. ಲಾಕ್ ಡೌನ್ ಕಾರಣಕ್ಕೆ ಯಾವುದೇ ದೇವಾಲಯಗಳು ಓಪನ್ ಇಲ್ಲ. ಜೊತೆ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಮದುವೆಗಳು ಹೆಚ್ಚಾಗಿರುತ್ತಿದ್ದವು. ಇದರಿಂದ ಅಡುಗೆ ಮಾಡುವ ಬ್ರಾಹ್ಮಣರು ಹಣ ಸಂಪಾದನೆ ಮಾಡಿಕೊಳ್ಳುತ್ತಿದ್ದರು. ಮದುವೆ ಆರ್ಡರ್ ಗಳಲ್ಲಿ ಬಂದ ಹಣದಲ್ಲಿ ವರ್ಷದ ಬದುಕು ನಡೆಯುತ್ತಿತ್ತು. ಇದೀಗ ಮದುವೆ, ಸಭೆ ಸಮಾರಂಭಗಳು ಇಲ್ಲದ ಕಾರಣ ಬ್ರಾಹ್ಮಣರ ಆದಾಯದ ಮೂಲಕ್ಕೆ ಕೊಡಲಿ ಪೆಟ್ಟು ಬಿದ್ದದಂತಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ ಕೆ. ನಾಗರಾಜ್ ನಕ್ಷತ್ರಿ, ಮದುವೆ,ಸಭೆ ಸಮಾರಂಭಗಳು ನಡೆಯುತ್ತಿಲ್ಲ. ದೇವಸ್ಥಾನಗಳು ಓಪನ್ ಇಲ್ಲ. ಇದನ್ನೇ ನಂಬಿಕೊಂಡು ಪುರೋಹಿತ ಮತ್ತು ಅಡುಗೆ ವೃತ್ತಿ ಮಾಡುವ ಬ್ರಾಹ್ಮಣರ ಬದುಕು ಸಂಕಷ್ಟದಲ್ಲಿದೆ. ಹಾಗಾಗಿ ಸರ್ಕಾರ ಯಾವುದಾದರೂ ಒಂದು ರೀತಿಯಲ್ಲಿ ಸ್ಪಂದಿಸಬೇಕು. ಆ ಮೂಲಕ ಬ್ರಾಹ್ಮಣರಿಗೆ ಸಹಕಾರ ನೀಡಬೇಕು ಎಂದು ಹೇಳಿದ್ದರು.
ಅರವಿಂದ ಅವೇಂಜರ್ಸ್ಗೆ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿ
ಬೆಂಗಳೂರು: ಅಮೋಘ ಆಟ ಪ್ರದರ್ಶಿಸಿದ ಅರವಿಂದ ಅವೇಂಜರ್ಸ್ ತಂಡವು ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 9ಡ್ರೀಮ್ಸ್ ಸಂಸ್ಥೆ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ...








