ಚಾಮರಾಜನಗರದಲ್ಲಿ ಕೋವಿಡ್ ನಿಂದಾಗಿ 9 ಮಂದಿ ಸಾವು Chamarajanagar
ಚಾಮರಾಜನಗರ : ಜಿಲ್ಲೆಯಲ್ಲಿ ಹೆಮ್ಮಾರಿ ಕೊರೊನಾ ಮರಣಕೇಕೆ ಮುಂದುವರೆದಿದೆ.
ಕಳೆದ 24 ಗಂಟೆಯಲ್ಲಿ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 9 ಮಂದಿ ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ.
ಸೋಮವಾರ ಬೆಳಗ್ಗೆ 9 ಗಂಟೆಯಿಂದ ಮಂಗಳವಾರ ಬೆಳಗ್ಗೆ 9 ಗಂಟೆಯ ತನಕ 9 ಮಂದಿ ಕೊವಿಡ್ ಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಚಾಮರಾಜನಗರ ತಾಲ್ಲೂಕಿನ 4, ಯಳಂದೂರು ತಾಲ್ಲೂಕಿನಲ್ಲಿ 2, ಕೊಳ್ಳೇಗಾಲ ತಾಲ್ಲೂಕಿನಲ್ಲಿ 2,
ಹನೂರು ತಾಲ್ಲೂಕಿನ 1, ಸೇರಿ 9 ಮಂದಿ ಇಂದು ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ ಜೀವ ಕಳೆದುಕೊಂಡಿದ್ದಾರೆ.









