ಹಮಾಸ್ ಉಗ್ರರ ವಿರುದ್ಧ ಮುಗಿಬಿದ್ದಿರುವ ಇಸ್ರೇಲ್ ಸೇನೆ – ರಹಸ್ಯ ಸುರಂಗ ಧ್ವಂಸ
ಗಾಜಾಸಿಟಿಯಲ್ಲಿ ಹಿಂಸಾತ್ಮಕ ವಾತಾವರಣ – ಎಲ್ಲಿ ನೋಡಿದ್ರು ಹೆಣಗಳ ರಾಶಿ
ಇಸ್ರೇಲ್ ನ ಗಾಜಾಪಟ್ಟಿಯಲ್ಲಿ ಎಲ್ಲಿ ನೋಡಿದ್ರು ಹೆಣಗಳ ರಾಶಿ , ಹಿಂಸಾತ್ಮಕ ವಾತಾವರಣ ನಿರ್ಮಾಣವಾಗಿದೆ.. ಇಸ್ರೇಲ್ ಮೇಲೆ ಹಮಾಸ್ ನಡೆಸುತ್ತಿರುವ ದಾಳಿಗೆ ಅಲ್ಲಿನ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಹಮಾಸ್ ಉಗ್ರರ ವಿರುದ್ಧ ಮುಗಿಬಿದ್ದಿರುವ ಇಸ್ರೇಲ್ ಸೇನೆ ಸೋಮವಾರವೂ ಗಾಜಾ ಪಟ್ಟಿಯ ಮೇಲೆ ಬಾಂಬ್ ದಾಳಿ ಮುಂದುವರಿಸಿವೆ.
ಉಗ್ರ ಸಂಘಟನೆಯ 9 ಕಮಾಂಡರ್‌ಗಳು ಅಡಗಿದ್ದ ಸುರಂಗಗಳನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗಿದೆ. ಇಸ್ರೇಲ್ ಸೇನೆ ಹೇಳಿಕೊಂಡ ಪ್ರಕಾರ 15 ಕಿ. ಮೀ. ಉದ್ದದ ರಹಸ್ಯ ಸುರಂಗವನ್ನು ನಾಶಗೊಳಿಸಲಾಗಿದೆ. ಸೋಮವಾರದ ವೈಮಾನಿಕ ದಾಳಿಯಲ್ಲಿ ಹಮಾಸ್ ಹಿರಿಯ ಕಮಾಂಡರ್ ಹುಸ್ಸಮ್ ಅಬು ಹಬ್ರಿಡ್‌ನನ್ನು ಕೊಲ್ಲಲಾಗಿದೆ. ಗಾಜಾ ಸಿಟಿಯ ಮೇಯರ್ ಯಾಹ್ಯಾ ಸರ್ರಾಜ್ ನೀಡಿದ ಮಾಹಿತಿ ಪ್ರಕಾರ ಬಾಂಬ್ ದಾಳಿಯಿಂದ ರಸ್ತೆ ಮತ್ತು ಇತರ ಮೂಲ ಸೌಕರ್ಯಗಳಿಗೆ ಭಾರಿ ಹಾನಿ ಉಂಟಾಗಿದೆ.
ಕಳೆದ ಸೋಮವಾರ ಆರಂಭವಾಗಿರುವ ಈ ಕಾಳಗದಲ್ಲಿ ಇದುವರೆಗೆ 55 ಮಕ್ಕಳು, 33 ಮಹಿಳೆಯರೂ ಸೇರಿದಂತೆ 200ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. 1,230ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಗಾಜಾ ಸಿಟಿಗೆ 3 ದಿನಗಳಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಮತ್ತೊಂದೆಡೆ ದಕ್ಷಿಣ ಇಸ್ರೇಲ್‌ನ ಬೀರ್ಶೆಬಾ ನಗರದ ಮೇಲೆ ಹಮಾಸ್ ಉಗ್ರರು ರಾಕೆಟ್ ದಾಳಿ ನಡೆಸಿದ ವೇಳೆ, ಸ್ಥಳೀಯ ಕ್ರಿಕೆಟ್ ಕ್ಲಬ್ ಭಾರತೀಯ ಸಂಶೋಧಕರನ್ನು ರಕ್ಷಿಸಿದೆ. ಅವರು ಬೆನ್-ಗರಿಯಾನ್ ವಿವಿಯ ಸಂಶೋಧಕರಾಗಿದ್ದಾರೆ. ಕ್ರಿಕೆಟ್ ಕ್ಲಬ್ ಹೊಂದಿರುವ ನೆಲಮಾಳಿಗೆಯಲ್ಲಿ ಸಂಶೋಧಕರು ಮತ್ತು ಸ್ಥಳೀಯರಿಗೆ ರಕ್ಷಣೆ ನೀಡಲಾಗಿದೆ.
ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಅನೇಕ ಮಕ್ಕಳು ತಂದೆ ತಾಯಿಯನ್ನ ಕಳೆದುಕೊಂಡು ಅನಾಥರಾಗಿದ್ರೆ , ಇನ್ನೂ ಹಲವರು ಕುಟುಂಬಸ್ಥರು , ಆಪ್ತರು , ಸ್ನೇಹಿತರನ್ನ ಕಳೆದುಕೊಂಡಿದ್ದಾರೆ.. ಮತ್ತು ಹಲವು ಕುಟುಂಬಗಳ ಆಧಾರಸ್ಥಂಬವೆನಿಸಿಕೊಂಡಿದ್ದರು ಕೊರೊನಾಗೆ ಬಲಿಯಾಗಿದ್ದು, ಕುಟುಂಬಗಳು ದಿಚ್ಚು ತೋಚದ ಪರಿಸ್ಥಿತಿಗೆ ತಲುಪಿವೆ.. ಸಿನಿಮಾ ತಾರೆಯರು ಮೃತಪಟ್ಟಿದ್ದಾರೆ. ಸೆಲೆಬ್ರಿಟಿಗಳು ಸಹ ತಮ್ಮವರನ್ನ ಕಳೆದುಕೊಂಡಿದ್ದಾರೆ.. ಇನ್ನೂ ವಿಪರ್ಯಾಸವೆಂದ್ರೆ ಮದುವೆಗೆ ಇನ್ನು ಒಂದೆರೆಡು ದಿನಗಳಿರುವಾಗಲೇ ವರ ಅಥವ ವಧು ಮೃತಪಟ್ಟಿರುವ ಘಟನೆಗಳು , ಮದುವೆಯಾದ ವಾರ -10 ದಿನಗಳೊಳಗೇ ಗಂಡ ಅಥವ ಹೆಂಡತಿ ಸಾವನಪ್ಪಿರುವುದು ಇಂತಹ ಮನಕಲುಕುವಂತಹ ಘಟನೆಗಳು ಬೆಳಕಿಗೆ ಬರುತ್ತಿವೆ..








