ಕೊರೊನಾದಂತೆ ಬ್ಲಾಕ್ ಫಂಗಸ್ ಒಬ್ಬರಿಂದ ಒಬ್ಬರಿಗೆ ಹರಡಲ್ಲ…! ಬ್ಲಾಕ್ ಫಂಗಸ್ ನ ಲಕ್ಷಣಗಳು
ದೇಶದಲ್ಲಿ ಕೋವಿಡ್ 2ನೇ ಅಲೆ ಭೀತಿಗೆ ಜನ ತತ್ತರಿಸಿ ಹೋಗಿದ್ದಾರೆ. ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ಈ ನಡುವೆ ದೇಶದ , ಹಾಗೂ ರಾಜ್ಯ , ಬೆಂಗಳೂರಿನಲ್ಲೂ ಬ್ಲಾಕ್ ಫಂಗಸ್ ವೈರಸ್ ನ ಕಾಟ ಶುರುವಾಗಿದೆ.. ರಾಜ್ಯದಲ್ಲಿ 97 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಇದ್ರಿಂದಾಗಿ ಈಗಾಗಲೇ ಹಲವು ಜೀವಗಳು ಹೋಗಿದವೆ. ಹೀಗಾಗಿ ಜನ ಮತ್ತಷ್ಟು ಆತಂಕ್ಕೆ ಒಳಗಾಗಿದ್ದಾರೆ.
ಇನ್ನೂ ಬ್ಲ್ಯಾಕ್ ಫಂಗಸ್ ಕೂಡ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆ ಎಂದು ಅನೇಕರು ಭಾವಿಸಿದ್ದು, ಜನರು ಪ್ಯಾನಿಕ್ ಆಗಲು ಶುರುಮಾಡಿದ್ದಾರೆ. ಆದ್ರೆ ಈ ನಡುವೆ ಒಂದು ಸಮಾಧಾನ ತರಿಸುವಂತಹ ಮಾಹಿತಿ ಬ್ಲಾಕ್ ಫಂಗಸ್ ನ ಬಗ್ಗೆ ಬಹಿರಂಗವಾಗಿದೆ.. ಅದೇನೆಂದ್ರೆ ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲ ಎಂದು..
ಹೌದು ಕಪ್ಪು ಶಿಲೀಂಧ್ರ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಲ್ಲ ಹೀಗಾಗಿ ಯಾರೂ ಕೂಡ ಹೆದರುವ ಅವಶ್ಯಕತೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಕೋವಿಡ್ ತಗುಲಿದ ಮಧುಮೇಹಿಗಳಲ್ಲಿ ಅತಿಯಾದ ಸ್ಟೀರಾಯ್ಡ್ ಬಳಕೆಯಿಂದಾಗಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಆದರೆ ಇದ್ಯಾವುದೇ ಕಾರಣಕ್ಕೂ ಮತ್ತೊಬ್ಬರಿಗೆ ಹರಡುವ ಸೋಂಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬ್ಲ್ಯಾಕ್ ಫಂಗಸ್ ಮೊದಲು ಕಣ್ಣಿನ ಮೇಲೆ ದಾಳಿ ಮಾಡುತ್ತದೆ, ಬಳಿಕ ಕ್ರಮೇಣವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.
ಬ್ಲ್ಯಾಕ್ ಫಂಗಸ್ ನ ಪ್ರಮುಖ ಲಕ್ಷಣಗಳು
ಬ್ಲ್ಯಾಕ್ ಫಂಗಸ್ ಬಂದರೆ ಅದು ಎಲ್ಲರಿಗೂ ಗೊತ್ತಾಗುತ್ತದೆ. ಆರಂಭದಲ್ಲಿ ಕಣ್ಣಿಗೆ ಅಟ್ಯಾಕ್ ಆಗುತ್ತದೆ. ಕಣ್ಣಲ್ಲಿ ನೋವು, ಊತ ಕಾಣಿಸಿಕೊಳ್ಳುತ್ತದೆ. ಬಳಿಕ ಮೂಗು, ಬಳಿಕ ಮೆದುಳಿಗೆ ಅಟ್ಯಾಕ್ ಆಗುತ್ತದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








