ಮಂಗಳೂರು: ಕೊರೊನಾ ಸೊಂಕಿನ ಶಂಕೆಯಿರುವ ಹಿನ್ನೆಲೆ ಮಂಗಳೂರಿನ 32 ಮಂದಿಯ ಗಂಟಲು ದ್ರವದ ಸ್ಯಾಂಪಲ್ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಇನ್ನು ಈ ಹಿಂದೆ ಪರೀಕ್ಷೆಗೆ ಕಳುಹಿಸಿದ್ದ 90 ಮಂದಿಯ ಗಂಟಲು ದ್ರವದ ವರದಿ ಬಂದಿದೆ. ಅದರಲ್ಲಿ 89 ಜನರಿಗೆ ನೆಗೆಟಿವ್ ಬಂದಿದ್ದು, ಓರ್ವನಿಗೆ ಪಾಸಿಟಿವ್ ಬಂದಿದೆ. 28 ಮಂದಿ ಅಬ್ಸರ್ವೇಷನ್ ನಲ್ಲಿದ್ದು, 588 ಮಂದಿಯನ್ನ ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. 10 ಮಂದಿಯನ್ನ ಮಂಗಳೂರಿನ ಇಎಸ್ ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಸದ್ಯ ಮಂಗಳೂರಲ್ಲಿ 5,485 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ. ಈವರೆಗೆ 39,080 ಮಂದಿಯನ್ನ ಸ್ಕ್ರೀನಿಂಗ್ ಮಾಡಲಾಗಿದೆ. ಈವರೆಗೆ 714 ಮಂದಿಯ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದ್ದು, 713 ಜನರ ವರದಿ ಬಂದಿದೆ. ಅದರಲ್ಲಿ 700 ಮಂದಿಯ ನೆಗೆಟಿವ್ ವರದಿ ಬಂದಿದ್ದು, 13 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಬ್ಬನ ವರದಿ ಬರಲು ಬಾಕಿಯಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ








