ತುಳುನಾಡಿನ ಕುರಿತಾದ ಇಂಟರೆಸ್ಟಿಂಗ್ ವಿಚಾರಗಳು..!
ಅನೇಕ ವಿಶೇಷತೆಗಳು , ವೈವಿದ್ಯತೆಯಿಂದ ಕೂಡಿರುವ , ತನ್ನದೇಆದ ವಿಭಿನ್ನ ಸಂಪ್ರದಾಯಗಳ ಮೂಲಕ ವಿಶ್ವದ ಗಮನ ಸೆಳೆಯುವ ತುಳುನಾಡಿನ ಬಗ್ಗೆ ಕೆಲವೊಂದು ಇಂಟರೆಸ್ಟೆಇಂಗ್ ವಿಚಾರಗಳನ್ನ ತಿಳಿದುಕೊಳ್ಳೋಣ.
ತುಳುವನ್ನು ವಿದ್ವಾಂಸರು ಅತ್ಯಂತ ಹಳೆಯ ದ್ರಾವಿಡ ಭಾಷೆಯೆಂದು ಪರಿಗಣಿಸಿದ್ದಾರೆ.
ತುಳುನಾಡು ಸುಮಾರು 19,441 ಕಿ.ಮೀ ವಿಸ್ತೀರ್ಣ ಹೊಂದಿದ್ದು, ಕರ್ನಾಟಕದ ಒಟ್ಟು ಭೌಗೋಳಿಕ ಪ್ರದೇಶದ ಸುಮಾರು 6.4% ಕರ್ನಾಟಕದಲ್ಲಿದ್ದರೆ ಕೇರಳದಲ್ಲಿ 3.5% ಇದೆ..
ಇತಿಹಾಸದಲ್ಲಿ ಶ್ರೇಷ್ಠ ರಾಜನಾಗಿ ಉಳಿದುಕೊಂಡಿರುವ ಕೃಷ್ಣದೇವರಾಯ ತುಳುವರಾಗಿದ್ದರು. ಆ ವೇಳೆ ಸುಧೀರ್ಘ ಕಾಲದ ವರೆಗೂ ತುಳುವ ರಾಜವಂಶದ ಆಡಳಿತವಿತ್ತು.
ತುಳು ಭಾಷೆ ವಿಭಿನ್ನವಾಗಿದ್ದು, ಇದರಲ್ಲೇ 4 ಉಪಭಾಷೆಗಳಿದೆ ಎಂದು ಅಧ್ಯಯನ ತಿಳಿಸಿದೆ.
ಶಿವಳ್ಳಿ, ಜೈನ, ಸಾಮಾನ್ಯ, ಬುಡಕಟ್ಟು ಉಪಭಾಷೆಗಳಿವೆ.
ಟಿಗಲಾರಿ ಭಾಷೆಯ ಮೂಲ ಲಿಖಿತ ಲಿಪಿ ಗ್ರಂಥ ಮಳಯಾಳಂನ ‘ಗ್ರಂಥ’ದಿಂದ ರೂಪಾಂತರಗೊಂಡಿದೆ.
ಆದ್ರೆ ಈ ಲಿಪಿ ವಾಸ್ತವವಾಗಿ ತುಳುವಿನಿ ಲಿಪಿಯಿಂದ ಅಳವಡಿಕೊಳ್ಳಲಾಗಿತ್ತು.
19 ನೇ ಶತಮಾನದ ಮಿಷನರಿಗಳು ಕನ್ನಡ ಲಿಪಿಯನ್ನು ಪ್ರಾಥಮಿಕವಾಗಿ ತುಳು ಭಾಷೆಯನ್ನು ಬರೆಯಲು ಬೈಬಲ್ ಅನ್ನು ತುಳುಗೆ ಭಾಷಾಂತರಿಸಲು ಬಳಸಿದ್ದರು.
ಕನ್ನಡದ ಮೊದಲ ಮುದ್ರಣಾಲಯ (ಪ್ರೆಸ್) ಹೊಂದಿರುವ ಹೆಗ್ಗಳಿಕೆ ತುಳು ನಾಡದ್ದು..
ಕರ್ನಾಟಕ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಗಳಿಕೆಯಾಗುವುದು ತುಳುನಾಡಿನಿಂದ ಮುಂಬೈನಲ್ಲಿ ಪ್ರತಿ 10 ಜನರಲ್ಲಿ ಒಬ್ಬ ವ್ಯಕ್ತಿ ತುಳುವ.
ತುಳುನಾಡನ್ನ ಬ್ಯಾಂಕಿಂಗ್ ಉದ್ಯಮದ ತೊಟ್ಟಿಲು ಎಂದೂ ಕರೆಯಲಾಗುತ್ತದೆ. ಭಾರತದ 5 ಪ್ರಮುಖ ಬ್ಯಾಂಕ್ ಗಳು [ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ವಿಜಯ ಬ್ಯಾಂಕ್, ಕರ್ನಾಟಕ ಬ್ಯಾಂಕ್] ಮೊದಲು ಪ್ರಾರಂಭವಾಗಿದ್ದು ತುಳುನಾಡಿನಲ್ಲಿ.
ಬಾಲಿವುಡ್ ಗೆ ಇಲ್ಲಿಯವರೆಗೆ ಅತಿ ಹೆಚ್ಚು ಸಿನಿಮಾ ಸ್ಟಾರ್ ಗಳನ್ನ ನೀಡಿರುವ ಏಕೈಕ ಸ್ಥಳ ತುಳುನಾಡು.
ಮಂಗಳೂರಿನ ಟೈಲ್ಸ್ ವಿಶ್ವ ಪ್ರಸಿದ್ಧ ವಿಶ್ವದಲ್ಲೇ ಅತಿ ಹೆಚ್ಚು ಗೋಡಂಬಿ ಬೆಳೆಯುವ ನಾಡು ತುಳುನಾಡು
ಭಾರತದಲ್ಲೇ ಅತ್ಯುತ್ತಮ ಶಿಕ್ಷಣ ನೀಡುವ ಸ್ಥಳ ತುಳುನಾಡು
ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಬಗೆಯ ಆಹಾರ ಮತ್ತು ಭಕ್ಷ್ಯಗಳನ್ನು ನೀಡಿದ ಏಕೈಕ ಸ್ಥಳ ತುಳುನಾಡು.
ತುಳುನಾಡು ಭಾರತದಲ್ಲಿ ಅತಿ ಹೆಚ್ಚು ಖಾಸಗಿ ಬಸ್ಸುಗಳನ್ನು ಹೊಂದಿದೆ.
ಉಡುಪಿ ಹೆಸರನ್ನು ಒಡಿಪು ಎಂಬ ತುಳುವಿನ ಪದದಿಂದ ಪಡೆಯಲಾಗಿದೆ.
ಮಂಗಳೂರಿನ ಒಪ್ಪಂದದವರೆಗೂ ತುಳುನಾಡು ಮುಖ್ಯವಾಗಿ ತುಳುವರಿಂದ ಮಾತ್ರ ಆಳಲ್ಪಟ್ಟಿತು.
ಉಡುಪಿ ಮತ್ತು ಮಂಗಳೂರು ಕರ್ನಾಟಕದ ನಗರವಾಗಿದ್ದು, ಇದು ಸರ್ಕಾರದ ಹೆಚ್ಚಿನ ಬೆಂಬಲವಿಲ್ಲದೆ ಅಭಿವೃದ್ಧಿಗೊಂಡಿದೆ.
ಕರ್ನಾಟಕದಲ್ಲಿ ತುಳುನಾಡು ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ.
ತುಳು ಅತ್ಯಂತ ಸುಲಭವಾಗಿ ಬಳಸಬಹುದಾದ ದ್ರಾವಿಡ ಭಾಷೆ ಎಂದು ಹೇಳಲಾಗುತ್ತದೆ.
ತುಳುನಾಡಿನಲ್ಲಿ ಮಹಿಳೆಯರು ಹೆಣ್ಣುಮಕ್ಕಳಿಗೆ ಗೌರವ , ವಿಶೇಷ ಸ್ತಾನಮಾನಗಳನ್ನ ನೀಡಲಾಗುತ್ತದೆ. ಪುರುಷರಂತೆಯೇ ಮಹಿಳೆಯರನ್ನೂ ಸಮಾನವಾಗಿ ಕಾಣಲಾಗುತ್ತದೆ.. ಆದ್ಯತೆ ನೀಡಲಾಗುತ್ತದೆ.
ಪ್ರಾಚೀನ ಕಾಲದಲ್ಲಿ ಬರ್ಕೂರು ತುಳುನಾಡಿನ ರಾಜಧಾನಿಯಾಗಿತ್ತು.
ತುಳುನಾಡಿನಲ್ಲಿ ಪ್ರಮುಖವಾಗಿ ನಾಗಾರಾಧನೆ , ನಾಗ ಮಂಡಲ ಪೂಜೆಗಳಿಗೆ ಆದ್ಯತೆ ನೀಡಲಾಗುತ್ತದೆ.
ವಿಶ್ವ ಪ್ರಸಿದ್ಧ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅತಿ ಹೆಚ್ಚು ಭಕ್ತಾಧಿಗಳಿಗೆ ಉಚಿತವಾಗಿ ಆಹಾರವನ್ನ ನೀಡುತ್ತಿದೆ.
ಸುಬ್ರಮಣ್ಯ, ಕದ್ರಿ, ಬಾಜ್ಪೆ ದೇವಸ್ಥಾನ, ಕಟೀಲ್, ಉಡುಪಿ ಕೃಷ್ಣ ಮಠ, ಕೊಲ್ಲೂರು, ಮಂದಾರ್ತಿ ಮತ್ತು ತುಳುನಾಡು ಮತ್ತು ಸುತ್ತಮುತ್ತಲಿನ ಅನೇಕ ದೇವಾಲಯಗಳು ಸಹ ಉಚಿತ ಆಹಾರ ಮತ್ತು ಆಶ್ರಯವನ್ನು ನೀಡುತ್ತವೆ.
ಭಾರತದಲ್ಲಿ ಒಟ್ಟಾರೆಯಾಗಿ ತುಳುನಾಡು ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿದೆ ( 93% ಕ್ಕಿಂತ ಹೆಚ್ಚು) .