ಕೋವಿಡ್ ಸಂಕಷ್ಟ – ರೈತರು, ಬಡರಿಗೆ ನೆರವಾದ ಉಪೇಂದ್ರ – ಪುಣ್ಯ ಕೆಲಸದಲ್ಲಿ ಉಪ್ಪಿಗೆ ಸಾಥ್ ಕೊಟ್ಟ ಅನ್ನದಾತ..!
ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪಕೋರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ಕೋವಿಡ್ ತಡೆಗೆ ರಾಜ್ಯದಲ್ಲಿ ಕಾಲ್ ಡೌನ್ ಹೇರಲಾಗಿದೆ.. ಬಡವರು ಸಾಕಷ್ಟು ಸಮಸ್ಯೆಗಳನ್ನ ಅನುಭವಿಸುವಂತಾಗಿದೆ.
ಈ ನಡುವೆ ಸ್ಯಾಂಡಲ್ ವುಡ್ , ಬಾಲಿವುಡ್ , ಟಾಲಿವುಡ್ , ಕಾಲಿವುಡ್ ನ ಅನೇಕ ಸಿನಿಮಾ ತಾರೆಯರು ಬಡವರಿಗೆ , ಕೋವಿಡ್ ಸೋಂಕಿತರಿಗೆ ತಮಗೆ ತೋಚಿದ ಸಹಾಯಗಳನ್ನ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ , ಶ್ರೀಮುರುಳಿ, ರಾಗಿಣಿ, ಅಕ್ಷಯ್ ಕುಮಾರ್ , ಸಲ್ಮಾನ್ ಖಾನ್ , ಸೋನು ಸೂದ್ , ಹೀಗೆ ಹಲವರು ಕಷ್ಟದ ಸಂದರ್ಭದಲ್ಲಿ ಸಹಾಯಾಸ್ತ ಚಾಚಿದ್ದಾರೆ.
ಈ ರೀತಿ ಸಹಾಯ ಮಾಡ್ತಿರುವವರ ಪೈಕಿ ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಅವರು ಸಹ ಒಬ್ಬರು. ಇದೀಗ ಉಪೇಂದ್ರ ಅವರು ಮಾಡುತ್ತಿರುವ ಸಮಾಜ ಸೇವೆಗೆ ಉಚಿತವಾಗಿ ಟೊಮೇಟೋ ನೀಡುವ ಮೂಲಕವಾಗಿ ರೈತರೊಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಿದ್ದರಾಜು ಬ್ಯಾಲಾಳು ಗ್ರಾಮದ ರೈತರು ಇಂದು 15 ಕ್ರೇಟ್ ಟೊಮೇಟೋ ಉಚಿತವಾಗಿ ಕೊಟ್ಟು ಬೇಕಾದವರಿಗೆ ಹಂಚಿ ಎಂದು ನಮಗೆಲ್ಲರಿಗೂ ಮಾದರಿಯಾದರು. ಟೊಮೇಟೋಗೆ ಹಣ ಪಡೆಯಲು ನಿರಾಕರಿಸಿದ ಬ್ಯಾಲಾಳು ಸಿದ್ದರಾಜು ತನ್ನ ಗ್ರಾಮದಲ್ಲಿ ಸಂಕಷ್ಟದಲ್ಲಿರುವ ಇಪ್ಪತ್ತು ಕುಟುಂಬಕ್ಕೆ ದಿನಸಿ ಕಿಟ್ ವಿತರಿಸುವ ಜವಾಬ್ಧಾರಿಯನ್ನು ತಾನೇ ವಹಿಸಿಕೊಂಡು ಕಿಟ್ ಕೊಂಡೊಯ್ಯುತ್ತಿದ್ದಾರೆ ಎಂದು ಉಪೇಂದ್ರ ಅವರು ಮಾದರಿ ರೈತರ ಕುರಿತಾಗಿ ಟ್ವೀಟ್ ಮಾಡುವಮೂಲಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಾಕ್‍ಡೌನ್ ಕಾರಣ ಸಂಪಾದನೆ ಇಲ್ಲದೇ ಕೂತಿರುವ ರೈತರು ಹಾಗೂ ಬಡವರ ಪಾಲಿಗೆ ನಟ ಉಪೇಂದ್ರ ಅವರು ನೆರವಿಗೆ ನಿಂತಿದ್ದಾರೆ. ಇದೀಗ ಉಪೇಂದ್ರ ಅವರು ಮಾಡುತ್ತಿರುವ ನಿಸ್ವಾರ್ಥ ಸೇವೆಗೆ ಬ್ಯಾಲಾಳು ಗ್ರಾಮದ ರೈತರೊಬ್ಬರು ಸಾಥ್ ನೀಡಿದ್ದಾರೆ. ತಾವು ಬೆಳೆದಿರುವ ಫಸಲನ್ನು ಉಚಿತವಾಗಿ ಉಪೇಂದ್ರ ಅವರ ಕೈಗೊಪ್ಪಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಕೊರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ ಸಿನಿಕಾರ್ಮಿಕರಿಗೆ, ಬಡವರಿಗೆ ದಿನಸಿ ಕಿಟ್‍ಗಳನ್ನು ನೀಡುತ್ತಿರುವ ಸೂಪರ್ ಸ್ಟಾರ್ ಉಪೇಂದ್ರ ಅವರು ಈಗ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅಗತ್ಯ ಇರುವವರಿಗೆ ಹಂಚುತ್ತಿದ್ದಾರೆ. ಅಲ್ಲದೇ ಉಪೇಂದ್ರ ಅವರ ಸಮಾಜಮುಖಿ ಕಾರ್ಯದಲ್ಲಿ ಸಾಧುಕೋಕಿಲ, ಶೋಭರಾಜ್ ಸೇರಿದಂತೆ ಅನೇಕರು ಸಾಥ್ ನೀಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








