ಚಿಕ್ಕಮಗಳೂರು: ಕೊರೊನಾ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಅಡ್ಡ ಹಾಕಿದರು ಗಾಡಿ ನಿಲ್ಲಸದೇ ದರ್ಪ ಮೆರೆದಿರುವ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷನ ಗಾಡಿಯನ್ನು ಬಣಕಲ್ ಪೊಲೀಸರು ಸೀಜ್ ಮಾಡಿದ್ದಾರೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆ ಹಾಗೂ ರಾಜ್ಯಗಳ ಗಡಿಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ. ಈ ಮಧ್ಯೆ ಕೊರೊನಾ ವೈರಸ್ ಆತಂಕದಲ್ಲಿ ಮಂಗಳೂರು ರೆಡ್ ಝೋನ್ ನಲ್ಲಿದೆ. ಮಂಗಳೂರಿನಿಂದ ಚಾರ್ಮಾಡಿ ಮೂಲಕ ಚಿಕ್ಕಮಗಳೂರಿಗೆ ಬರುವ ಪ್ರತಿಯೊಂದು ಗಾಡಿಯನ್ನು ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ತೊಳೆದುಕೊಂಡು ಬರುವಂತೆ ಹೇಳಿ, ಚೆಕ್ ಮಾಡಿ ಜಿಲ್ಲೆಯೊಳಗೆ ಬರುವಂತೆ ಸೂಚಿಸಿದ್ದಾರೆ.
ಮಂಗಳೂರಿನಿಂದ ಎರಡು ದಿನಗಳ ಹಿಂದೆ ತಾಲೂಕು ಪಂಚಾಯತ್ ಅಧ್ಯಕ್ಷರ ಗಾಡಿ ಕೊಟ್ಟಿಗೆಹಾರದಲ್ಲಿ ಪೊಲೀಸರು ಅಡ್ಡ ಹಾಕಿದರು ನಿಲ್ಲಿಸದೆ ಬಣಕಲ್ ಗೆ ಬಂದಿದ್ದರು. ಪುನಃ ಹೋಗುವಾಗಲೂ ಗಾಡಿ ನಿಲ್ಲಿಸದೆ ಹೋಗಿದ್ದರು. ಸರ್ಕಾರದ ನಿಯಮವನ್ನ ಉಲ್ಲಂಘಿಸಿದ ಆರೋಪದಡಿ ಬಣಕಲ್ ಪೊಲೀಸರು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರ ಗಾಡಿಯನ್ನ ಸೀಜ್ ಮಾಡಿದ್ದಾರೆ.








