ಕೊರೊನಾ ಹೊಡೆತಕ್ಕೆ ಇಡಿ ವಿಶ್ವವೇ ತತ್ತರಿಸಿದೆ. ಹಾಗಾಗಿ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಆಗಿವೆ. ಅದೇ ರೀತಿ ಸಿಂಗಾಪುರದಲ್ಲೂ ಲಾಕ್ ಡೌನ್ ನಡೆಸಲಾಗಿದೆ. ಆದರೆ ಸ್ವ ನಿರ್ಬಂಧನ ಆದೇಶವನ್ನು ಉಲ್ಲಂಘಿಸಿದ ಭಾರತೀಯನಿಗೆ ಸಿಂಗಾಪುರ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಭಾರತೀಯ ಮೂಲದ ವಾರ್ದಿರೆಡ್ಡಿ ನಾಗೇಶ್ವರ ರೆಡ್ಡಿ ಸ್ವ ನಿರ್ಬಂಧನದಲ್ಲಿ ಇರಬೇಕಿತ್ತು. ಫೆಬ್ರವರಿ 16ರಿಂದ 25ರವರೆಗೆ ಸ್ವ ನಿರ್ಬಂಧನದಲ್ಲಿ ಇರಬೇಕಾದ ವಾರ್ದಿರೆಡ್ಡಿ ನಾಗೇಶ್ವರ್ ರೆಡ್ಡಿ 24 ರಂದೇ ಮನೆಯಿಂದ ಹೊರಬಂದಿದ್ದರು. ಇದು ನಿಯಮ ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂಬ ಕಾರಣಕ್ಕೆ ನ್ಯಾಯಲಯ ಶಿಕ್ಷೆ ನೀಡಿದೆ. ಹಾಗಾಗಿ ಆರೋಪಿ ವಾರ್ದಿರೆಡ್ಡಿ ನ್ಯಾಯಲಯದ ಮುಂದೆ ಇದೇ ತಿಂಗಳ 23 ರಂದು ಹಾಜರಾಗಿ ತಪ್ಪು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಇದೆ ಮಾದರಿ ಆರೋಪದ ಮೇಲೆ ಚೀನಾ ಪ್ರಜೆ 49 ವರ್ಷದ ಲಿಯು ಡುಫೆಂಗ್ ಆರೋಪಿಯಾಗಿದ್ದು ಈತನ ವಿಚಾರಣೆ ಮೇ 8ರಂದು ನಡೆಯಲಿದೆ. ಮತ್ತೊಬ್ಬ ಸಿಂಗಾಪುರ ಪ್ರಜೆ 32 ವರ್ಷದ ಫೂ ಚಿಂಗ್ ಗೌನ್ ಕೂಡ ಇದೇ ಆರೋಪ ಎದುರಿಸುತ್ತಿದ್ದಾರೆ. ಸಿಂಗಾಪುರದಲ್ಲಿ ನಿನ್ನೆ 623 ಹೊಸ ಕೊರೋನಾ ಕೇಸುಗಳು ದಾಖಲಾಗಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5 ಸಾವಿರದ 50ಕ್ಕೇರಿದೆ. ವಿದೇಶಿ ಕೆಲಸಗಾರರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ, ಅವರಲ್ಲಿ ಭಾರತೀಯರು ಹೆಚ್ಚಾಗಿದ್ದಾರೆ ಎಂದು ತಿಳಿದು ಬಂದಿದೆ.z
ಟೆಕ್ ಹಿನ್ನೆಲೆ ಇಲ್ಲದವರಿಗೂ ಕಾಗ್ನಿಜೆಂಟ್‌ನಲ್ಲಿ ಉದ್ಯೋಗ, ಐಐಎಂ ಬೆಂಗಳೂರು ಸೇರಿ 58 ಸಂಸ್ಥೆಗಳ ಪದವೀಧರರ ನೇಮಕ
ಬೆಂಗಳೂರು: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ತಂತ್ರಜ್ಞಾನ ಸೇವೆ ಒದಗಿಸುವ ಜಾಗತಿಕ ಮಟ್ಟದ ಮುಂಚೂಣಿ ಸಂಸ್ಥೆ ಕಾಗ್ನಿಜೆಂಟ್ ಭಾರತದಲ್ಲಿ ತನ್ನ ಹೊಸ ಟ್ಯಾಲೆಂಟ್ ಆಕ್ಸಿಲರೇಟರ್ ಕಾರ್ಯಕ್ರಮವನ್ನು ಆರಂಭಿಸಿದೆ....








