RRR ಸಿನಿಮಾದ ಡಿಜಿಟಲ್ ಹಕ್ಕು 350 ಕೋಟಿ ರೂಪಾಯಿಗೆ ಮಾರಾಟ …!
ಸ್ಟಾರ್ ಡೈರೆಕ್ಟರ್ ರಾಜಮೌಳಿ , ಮೆಗಾ ಪವರ್ ಸ್ಟಾರ್ ರಾಮ್ ಚರಣ್ , ಯಂಗ್ ಟೈಗರ್ ಜ್ಯೂನಿಯರ್ NTR ನೇತೃತ್ವದಲ್ಲಿ ಮೂಡಿಬರುತ್ತಿರುವ RRR ಸಿನಿಮಾದ ಡಿಜಿಟಲ್ ಹಕ್ಕು 325 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದು ಹೇಳಲಾಗ್ತಿದೆ. ಈ ಸಿನಿಮಾದ ಎಲ್ಲಾ ಭಾಷೆಯ ಡಿಜಿಟಲ್ ಮತ್ತು ಸ್ಯಾಟ್‌ಲೈಟ್ ಹಕ್ಕನ್ನ ಜೀ ಗ್ರೂಪ್ ಸಂಸ್ಥೆ ಭಾರೀ ಮೊತ್ತಕ್ಕೆ ಖರೀದಿ ಮಾಡಿದೆ ಎನ್ನಲಾಗಿದೆ. ಸುಮಾರು 400 ಕೋಟಿ ರೂಪಾಯಿ ಬಜೆಟ್ ನಲ್ಲಿ ಮೂಡಿಬರುತ್ತಿರುವ RRR ಸಿನಿಮಾ ರಿಲೀಸ್ ಗೂ ಮುನ್ನವೇ 1000 ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿದೆ.
ಈ ಸಿನಿಮಾದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಹಾಗೂ ಜೂ NTR ಕೊಮ್ಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ದೇವಗನ್, ಆಲಿಯಾ ಭಟ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ತೆರೆಕಾಣಲಿದೆ.
ಇನ್ನೂ ಈಗಾಗಲೇ ಈ ಚಿತ್ರದ ವಿತರಣೆ ಹಕ್ಕು 500 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ ಎಂದು ವರದಿಯಾಗಿದೆ. ಇದೀಗ, ಡಿಜಿಟಲ್ ಹಕ್ಕು ಮತ್ತು ಸ್ಯಾಟ್‌ಲೈಕ್ ಹಕ್ಕು ಭಾರಿ ಮೊತ್ತಕ್ಕೆ ಸೇಲ್ ಆಗಿರುವ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಪೆನ್ ಸ್ಟುಡಿಯೋ ಸಂಸ್ಥೆ ಉತ್ತರ ಭಾರತದ ವಿತರಣೆ ಜೊತೆಗೆ ಡಿಜಿಟಲ್ ಹಕ್ಕು ಖರೀದಿ ಮಾಡಿದ್ದರು. ಆದ್ರೀಗ, ಎಲ್ಲಾ ಭಾಷೆಯ ಡಿಜಿಟಲ್ ಮತ್ತು ಸ್ಯಾಟ್‌ಲೈಟ್ ಹಕ್ಕು ಜೀ ಗ್ರೂಪ್ ಸಂಸ್ಥೆ ಪಾಲಾಗಿದೆ ಎಂಬ ವಿಚಾರ ಬಹಿರಂಗವಾಗಿದೆ.
ಹಿಂದಿಯ ಡಿಜಿಟಲ್ ಹಕ್ಕು ಕೊಂಡುಕೊಂಡಿದ್ದ ಪೆನ್ ಸ್ಟುಡಿಯೋ, ಜೀ ಗ್ರೂಪ್‌ಗೆ ಹಕ್ಕು ವರ್ಗಾಯಿಸಿದೆ ಎಂದು ತಿಳಿದು ಬಂದಿದೆ. ಮೊದಲಿಗೆ ಈ ಸಿನಿಮಾದ ಡಿಜಿಟಲ್ ಹಕ್ಕನ್ನ ಅಮೇಜಾನ್ ಪ್ರೈಮ್ ಖರೀದಿಸಲಿದೆ ಎನ್ನಲಾಗ್ತಿತ್ತು. ಆದ್ರೆ ಈಗ ಜಿ 5 ಪಾಲಾಗಿದೆ ಎನ್ನಲಾಗಿದೆ.
ಇನ್ನೂ ಬಹುನಿರೇಕ್ಷೆಯ RRR ಸಿನಿಮಾ ಅಕ್ಟೋಬರ್ 13 ಕ್ಕೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧಾರ ಮಾಡಿತ್ತು. ಆದ್ರೆ ಕೊರೊಪನಾ ಹಾವಳಿ ಲಾಕ್ ಡೌನ್ ನಿಂದಾಗಿ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹಾಕುವ ಸಾಧ್ಯತೆಯಿದೆ..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.