ವರದಕ್ಷಿಣೆ – ಬೈಕ್ ಬೇಡ, ಬುಲೆಟ್ ಬೇಕು… ಎಂದವನಿಗೆ ಗ್ರಾಮಸ್ಥರಿಂದ ಭರ್ಜರಿ ಗಿಫ್ಟ್… ಏನು ಗೊತ್ತಾ..?
ಉತ್ತರಪ್ರದೇಶ : ವರದಕ್ಷಿಣೆ ಕೊಡುವುದು ತೆಗೆದುಕೊಳ್ಳುವುದು ಎರೆಡೂ ಕಾನೂನು ಬಾಹಿರ , ಶಿಕ್ಷಾರ್ಹ ಅಪರಾಧವಾಗಿದೆ.. ಆದ್ರೂ ಸಹ ಈ ವರದಕ್ಷಿಣೆ ಪಿಡುಗಿನಿಂದಾಗಿ ಮಹಿಳೆಯರು ಹೆಣ್ಣು ಹೆತ್ತವರು ಸದಾ ಕಷ್ಟಪಡುತ್ತಾರೆ.. ಅದೆಷ್ಟೋ ಜನ ಇದೇ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡಿದ್ದಾರೆ.
ಆದ್ರೆ ಇಲ್ಲೊಬ್ಬ ವ್ಯಕ್ತಿ ತನಗೆ ವರದಕ್ಷಿಣೆಯ ರೂಪದಲ್ಲಿ ಮಾಮೂಲಿ ಬೈಕ್ ಬೇಡಾ, ಬುಲೆಟ್ ಬೈಕೇ ಬೇಕು ಎಂದು ಹಠ ಹಿಡಿದಿದ್ದ. ಆತನಿಗೆ ಊರಿನ ಗ್ರಾಮಸ್ಥರೆಲ್ಲರೂ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆ ಉತ್ತರಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ನಡೆದಿದೆ. ಮೊಹಮದ್ ಅಮೀರ್ ಎಂಬಾತನ ಜೊತೆಗೆ ಯುವತಿಯ ಮದುವೆ ನಿಶ್ಚಯವಾಗಿತ್ತು. ಮದುವೆ ದಿನ ಬುಲೆಟ್ ವಿಚಾರವಾಗಿ ಗಲಾಟೆ ನಡೆದಿದೆ..
ವರದಕ್ಷಿಣೆ ರೂಪದಲ್ಲಿ ವರನ ಕಡೆಯವರು ಬೈಕ್ ಗೆ ಡಿಮ್ಯಾಂಡ್ ಮಾಡಿದ್ದರು. ಅದ್ರಂತೆ ವಧುವಿನ ಕಡೆಯವರು ಬೈಕ್ ಕೊಡಲು ಸಿದ್ಧರಾಗಿದ್ದರು. ಆದರೆ ಮದುವೆ ಊಟದಲ್ಲಿ ಕುಳಿತ ವರ ಹೊಸ ವರಸೆ ತೆಗೆದಿದ್ದಾನೆ. ನನಗೆ ಮಾಮೂಲಿ ಬೈಕ್ ಬೇಡ, ಬುಲೆಟ್ ಗಾಡಿಯೇ ಬೇಕೆಂದಿದ್ದಾನೆ. ಅದಕ್ಕೆ ಒಪ್ಪಿದ ವಧುವಿನ ಕುಟುಂಬ 2 ಲಕ್ಷ ರೂಪಾಯಿ ಚೆಕ್ ಅನ್ನೂ ಕೊಟ್ಟಿದ್ದಾರೆ.
ಆದರೆ ಚೆಕ್ ನೋಡಿ ಸಿಟ್ಟಿಗೆದ್ದ ವರ ಮತ್ತು ಆತನ ತಂದೆ ಚೆಕ್ ಅನ್ನು ಅಲ್ಲಿಯೇ ಹರಿದೆಸೆದಿದ್ದಾರೆ. ಈಗಲೇ ಬುಲೆಟ್ ತಂದು ನಿಲ್ಲಿಸಿ ಎಂದು ಹಠ ಹಿಡಿದಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ವಧುವಿನ ಕುಟುಂಬ, ಗ್ರಾಮಸ್ಥರು ವರ ಹಾಗೂ ಆತನ ತಂದೆಗೆ ಸರಿಯಾಗಿ ಬಾರಿಸಿದ್ದಾರೆ.
ಬಳಿಕ ಸ್ಥಳಕ್ಕೆ ಬಂದ ಪೊಲೀಸರು ವರ, ಆತನ ತಂದೆ ಸೇರಿ 7 ಮಂದಿಯ ಮೇಲೆ ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದ್ದಾರೆ. ಬಳಿಕ ವಧು ಕೂಡ ನಾನು ಅವರ ಮನೆಗೆ ಸೊಸೆಯಾಗಿ ಹೋಗುವುದಿಲ್ಲ ಎಂದು ತನ್ನ ತವರಿನಲ್ಲೇ ಉಳಿದುಕೊಂಡಿದ್ದಾಳೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.