ಇಬ್ಬರು ಯುವತಿಯರ ಜೊತೆಗೆ ಸಪ್ತಪದಿ ತುಳಿದ ಯುವಕ
ಹೈದರಾಬಾದ್ : ಒಂದೇ ಮಂಟಪದಲ್ಲಿ ಅಕ್ಕ, ತಂಗಿ ಇಬ್ಬರನ್ನು ಮದ್ವೆಯಾಗಿ ಸುದ್ದಿಯಾಗಿದ್ದ ಕೋಲಾರದ ಯುವಕನಂತೆ ತೆಲಂಗಾಣದ ಮೆದಕ್ ಜಿಲ್ಲೆಯಲ್ಲಿ ಯುವಕನೊರ್ವ ಇಬ್ಬರು ಯುವತಿಯರ ಜೊತೆಗೆ ಸಪ್ತಪದಿ ತುಳಿದಿದ್ದಾನೆ.
ಗೋಪಾಲ ವೆಂಕಟೇಶ್ ಅವರ ಮಕ್ಕಳಾದ ಸ್ವಾತಿ, ಶ್ವೇತಾ ಇಬ್ಬರು ಒಬ್ಬನನ್ನೇ ಮದುವೆಯಾಗಿದ್ದಾರೆ.
ಪೋಷಕರು ಸಂತೋಷದಿಂದ ಇಬ್ಬರು ಹೆಣ್ಣುಮಕ್ಕಳನ್ನು ಒಬ್ಬವರನಿಗೆ ಕೊಟ್ಟು ಮದುವೆ ಮಾಡಿದ್ದಾರೆ.
ಬಾಲರಾಜು ಎಂಬ ಯುವಕ ಇಬ್ಬರನ್ನು ಮದ್ವೆಯಾಗಿದ್ದು, ಈತನಿಗೆ ಸ್ವಾತಿ ಜೊತೆ ಮದುವೆ ನಿಶ್ಚಯವಾಗಿತ್ತು.
ಆದರೆ ಶ್ವೇತಾ ಮಾನಸಿಕ ಅಸ್ವಸ್ಥಳಾಗಿದ್ದಳು. ಹಾಗಾಗಿ ಅಕ್ಕ ತಂಗಿ ಇಬ್ಬರನ್ನೂ ಮದುವೆ ಆಗುವಂತೆ ಸ್ವಾತಿ ಹೇಳಿದ್ದಾಳೆ.
ಇದರಿಂದ ಬಾಲರಾಜು ಇಬ್ಬರನ್ನೂ ಮದುವೆಯಾಗಿದ್ದಾನೆ ಎಂದು ವರದಿಯಾಗಿದೆ.