ದೇಶದಲ್ಲಿ 20 ಕೋಟಿ ಡೋಸ್ ಲಸಿಕೆ ವಿತರಣೆ – ಅಮೆರಿಕಾ ನಂತರ ಭಾರತಕ್ಕೆ 2ನೇ ದೇಶ ಭಾರತ
ನವದೆಹಲಿ : ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಈ ನಡುವೆ ದೇಶದಲ್ಲಿ ಲಸಿಕೆ ಅಭಿಯಾನವೂ ವೇಗವಾಗಿ ಸಾಗಿದೆ.. ಈವರೆಗೂ ಭಾರತದಲ್ಲಿ ಸುಮಾರು 20 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.. ಈ ಮೂಲಕ ಅತಿ ಹೆಚ್ಚು ಲಸಿಕೆ ವಿತರಣೆ ಮಾಡಿದ ದೇಶಗಳ ಪೈಕಿ ಅಮೆರಿಕಾ ಮೊದಲ ಸ್ಥಾನದಲ್ಲಿದ್ದರೆ 2ನೇ ಸ್ಥಾನದಲ್ಲಿ ಭಾರತವಿದೆ.
ಆರೋಗ್ಯ ಸಚಿವಾಲಯವು ನೀಡಿರುವ ಮಾಹಿತಿ ಪ್ರಕಾರ 124 ದಿನಗಳಲ್ಲಿ ಅಮೆರಿಕವು ಈ ಸಾಧನೆ ಮಾಡಿದೆ. ಭಾರತವು 130 ದಿನಗಳಲ್ಲಿ ಈ ವ್ಯಾಪ್ತಿಯನ್ನು ಸಾಧಿಸಿದೆ ಎಂದು ಸಚಿವಾಲಯ ತಿಳಿಸಿದೆ. ಇನ್ನುಳಿದಂತೆ ಬ್ರಿಟನ್ ನಲ್ಲಿ 168 ದಿನಗಳಲ್ಲಿ 5.1 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಬ್ರೆಜಿಲ್ ನಲ್ಲಿ 128 ದಿನಗಳಲ್ಲಿ 5.9 ಕೋಟಿ ಡೋಸ್ ನೀಡಲಾಗಿದೆ. ಜರ್ಮನಿಯಲ್ಲಿ 149 ದಿನಗಳಲ್ಲಿ 4.9 ಕೋಟಿ ಡೋಸ್ ಲಸಿಕೆ ನೀಡಿದೆ.
ಲಸಿಕಾ ಅಭಿಯಾನದ 130 ನೇ ದಿನದ ಹೊತ್ತಿಗೆ ಭಾರತದಲ್ಲಿ ಲಸಿಕೆ ನೀಡಿಕೆಯ ವ್ಯಾಪ್ತಿ 20 ಕೋಟಿ ಡೋಸ್ ಗಡಿ ದಾಟಿದೆ (15,71,49,593 ಮೊದಲ ಡೋಸ್ ಮತ್ತು 4,35,12,863 ಎರಡನೇ ಡೋಸ್ ಪಡೆದಿರುವವರು ಒಳಗೊಂಡಂತೆ 20,06,62,456 ಡೋಸ್) ಎಂದು ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ.
ಈ ಪೈಕಿ 45 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಶೇಕಡಾ 34 ಕ್ಕಿಂತ ಹೆಚ್ಚು ಜನರು ಇಲ್ಲಿಯವರೆಗೆ ಭಾರತದಲ್ಲಿ ಕನಿಷ್ಠ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ ಜನಸಂಖ್ಯೆಯ ಶೇಕಡಾ 42 ಕ್ಕಿಂತಲೂ ಹೆಚ್ಚು ಜನರು ಕನಿಷ್ಠ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








