“ಹಸ್ತಕ್ಷೇಪ ಸಹಿಸಲ್ಲ.. ವರಿಷ್ಠರ ಮುಂದೆ ಏನ್ ಹೇಳಬೇಕೋ ಅದನ್ನು ಹೇಳಿದ್ದೀನಿ”
ಬೆಂಗಳೂರು : ವರಿಷ್ಠರ ಮುಂದೆ ಏನ್ ಹೇಳಬೇಕೋ ಅದನ್ನು ಹೇಳಿದ್ದೀನಿ. ಮುಂದೆ ಎಲ್ಲವೂ ಬಹಿರಂಗವಾಗಲಿದೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ದೆಹಲಿ ಭೇಟಿ ಬಗ್ಗೆ ಮಾತನಾಡಿದ್ದಾರೆ.
ರಾಜ್ಯದಲ್ಲಿ ಸದ್ಯ ಸಿಎಂ ಬದಲಾವಣೆ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಈ ಮಧ್ಯೆ ಕೆಲವರು ಲಾಬಿ ನಡೆಸಲು ದೆಹಲಿಗೆ ತೆರಳಿದ್ದಾರೆ ಎಂಬ ಸುದ್ದಿಯೂ ಜೋರಾಗಿದೆ.
ಈ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿ ಯೋಗೇಶ್ವರ್, ದೆಹಲಿಗೆ ನನ್ನ ವೈಯಕ್ತಿಕ ವಿಚಾರಕ್ಕೆ ಆಗಾಗ ಹೋಗುತ್ತಿರುತ್ತೇನೆ.
ಪಕ್ಷದ ಚೌಕಟ್ಟಿನಲ್ಲಿ ನಾನು ವರಿಷ್ಠರ ಜೊತೆ ಚರ್ಚಿಸಿದ್ದೇನೆ. ನನಗೆ ಅಸಮಾಧಾನವಿದೆ, ಕೆಲವೊಂದು ನೋವುಗಳಿವೆ. ಹೀಗಾಗಿ ದೆಹಲಿಗೆ ಹೋಗಿದ್ದೇನೆ. ಆದರೆ ದೆಹಲಿಗೆ ಹೋಗಿದ್ರಲ್ಲಿ ತಪ್ಪೇನಿದೆ..? ಎಂದು ಪ್ರಶ್ನಿಸಿದರು.
ಇನ್ನು ನಾನು ವರಿಷ್ಠರ ಮುಂದೆ ಏನ್ ಹೇಳಬೇಕೋ ಅದನ್ನು ಹೇಳಿದ್ದೀನಿ. ಮುಂದೆ ಎಲ್ಲವೂ ಬಹಿರಂಗವಾಗಲಿದೆ. ನನಗೆ ಕೆಲವೊಂದು ವಿಚಾರಗಳಲ್ಲಿ ಅಸಮಾಧಾನವಿದೆ.
ಈ ವಿಚಾರ ತಿಳಿಸಲು ದೆಹಲಿಗೆ ಹೋಗಿದ್ದೇನೆ. ನಾನು ಹಸ್ತಕ್ಷೇಪ ಸಹಿಸಲ್ಲ. ಜವಾಬ್ದಾರಿ ಕೊಡದಿದ್ದರೂ ನನಗೆ ಬೇಸರವಿಲ್ಲ ಎಂದು ಹೇಳಿದ್ದಾರೆ.










