ಬೆಂಗಳೂರಿನಲ್ಲಿ 5 ಸಾವಿರ ಜನರ ಹಸಿವು ನೀಗಿಸಲು ಮುಂದಾದ ‘ರಿಯಲ್ ಹೀರೋ’ ಸೋನು..!
ಬೆಂಗಳೂರು : ಕಳೆದ ವರ್ಷ ಲಾಕ್ ಡೌನ್ ಆದಾಗಿನಿಂದಲೂ ಜನಪರ ಕೆಲಸ ಮಾಡುತ್ತಾ ಬಡವರಿಗೆ ಬೇಕಾದ ಸಹಾಯ ಮಾಡುತ್ತಾ… ಜಾಗ ಯಾವುದೇಇದ್ರು, ಜನ ಯಾರೇ ಇದ್ರೂ, ಶ್ರೀಮಂತರು ಬಡವರು ಅಂತ ನೋಡದೇ ಸಹಾಯ ಮಾಡ್ತಿದ್ದಾರೆ.. ಕೋವಿಡ್ ಮೊದಲನೇ ಅಲೆ ವೇಳೆ ವಿದ್ಯಾರ್ಥಿಗಳು , ವಲಸೆ ಕಾರ್ಮಿಕರಿಗೆ ನೆರವಾಗಿ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದರು. ಈ ಲಾಕ್ ಡೌನ್ ಸಮಯದಲ್ಲೂ ಬಡವರಿಗೆ ನೆರವಾಗ್ತಿದ್ದಾರೆ. ಆಕ್ಸಿಜನ್ ಪೂರೈಕೆ ಸೇರಿ ಅನೇಕ ಕೆಲಸಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು, ಸಿನಿಮಾದಲ್ಲಿ ವಿಲ್ಲನ್ ಆದ್ರೂ ರಿಯಲ್ ಲೈಫ್ ನ ಹೀರೋ ಅಂತ ಸಾಬೀತು ಪಡಿಸಿದ್ದಾರೆ.. ಅಲ್ಲದೇ ಬಡವರ ಪಾಲಿಗೆ ದೇವರಾಗಿದ್ದಾರೆ..
ಅಂದ್ಹಾಗೆ ಸೋನು ಕರ್ನಾಟಕ ಬೆಂಗಳೂರು ಜನತೆಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದಾರೆ.. ಇದೀಗ ಮತ್ತೊಮ್ಮೆ ನಮ್ಮ ರಾಜ್ಯದ ಜನರ ನೆರವಿಗೆ ದಾವಿಸಿದ್ದಾರೆ.. ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಜನರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ಜನರಿಗಾಗಿ ಹಗಲು ರಾತ್ರಿ ಎನ್ನದೆ ಕಷ್ಟಪಡುತ್ತಿರುವ ಸೋನು ಸೂದ್ ಬೆಂಗಳೂರಿನಲ್ಲಿ 5000ಕ್ಕೂ ಅಧಿಕ ಜನರಿಗೆ ಆಹಾರ ವಿತರಣೆ ಮಾಡಲು ಮುಂದಾಗಿದ್ದಾರೆ.
ಹೌದು.. ಸೋನು ಸೂದ್ ಟ್ರಸ್ಟ್ ಬೆಂಗಳೂರಿನಲ್ಲಿ 5000ಕ್ಕೂ ಅಧಿಕ ಮಂದಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಈ ಮಹತ್ವದ ಕಾರ್ಯಕ್ಕೆ ಕರ್ನಾಟಕ ರೈಲ್ವೆ ಪೊಲೀಸರು ಮತ್ತು ಬೀಯಿಂಗ್ ಬೈಟ್ಸ್ ರೆಸ್ಟೋರೆಂಟ್ ಕೂಡ ಕೈ ಜೋಡಿಸಿದೆ. ಸೋನು ಸೂದ್ ಚಾರಿಟಬಲ್ ನಿಂದ ಫುಡ್ ಫ್ರಮ್ ಸೂದ್ ಅನ್ನೋ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದರ ಅಡಿಯಲ್ಲಿ ಪ್ರತಿನಿತ್ಯ 5 ಸಾವಿರ ಜನರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ. ರಿಯಲ್ ಹೀರೋ ಸೋನು ಸೂದ್ ದೇಶದ ಮೂಲೆ ಮೂಲೆಯ ಜನರ ನೆರವಿಗೆ ಧಾವಿಸಿದ್ದಾರೆ. ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡುವ ಮೂಲಕ ಸಾವಿರಾರು ಜೀವಗಳನ್ನು ಕಾಪಾಡಿದ್ದಾರೆ. ಪ್ರತಿನಿತ್ಯ 5 ಸಾವಿರ ಆಹಾರ ಕಿಟ್ ತಯಾರಾಗುತ್ತಿದ್ದು, ಈ ಕಾರ್ಯಕ್ಕೆ ರಿಚ್ ಮಂಡ್ ಟೌನ್ ನಲ್ಲಿರುವ ಬೀಯಿಂಗ್ ರೆಸ್ಟೋರೆಂಟ್ ಅನ್ನು ಉಚಿತವಾಗಿ ಬಳಸಿಕೊಳ್ಳಲು ಮಾಲಿಕ ಇಬ್ರಾಹಿಂ ನೀಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








