ಪುರುಷನಾಗಿ ಬದಲಾದ ಖ್ಯಾತ ನಟಿ – ಫೋಟೋಗಳು ವೈರಲ್..!
ಕಾಲ ಬದಲಾದಂತೆ… ಸಮಾಜ ಮುಂದುವರೆದಂತೆಲ್ಲಾ… ಜನರ ಯೋಚನೆಗಳು ಬದಲಾಗುತ್ತಾ ಹೋಗುತ್ತವೆ… ಕೆಲವೊಮ್ಮೆ ತೀರ ವಿಚಿತ್ರ ಎನಿಸುವಂತಹ ಕೆಲಸಗಳನ್ನ ಜನ ಮಾಡಿಬಿಡುತ್ತಾರೆ… ಸಾಮಾನ್ಯವಾಗಿ ಈಗಿನ ಜೆನರೇಷನ್ ನಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಸಮಾನ ಹಕ್ಕುಗಳನ್ನ ನೀಡಲಾಗಿದೆ.. ಮಹಿಳೆಯರ ಯೋಚನಾ ಶಕ್ತಿಯೂ ಬದಲಾಗಿದೆ… ಪುರುಷರಿಗಿಂತ ಯಾವು ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಲ್ಲಾ ಎನ್ನೋದನ್ನೂ ಸಹ ಸಾಬೀತು ಮಾಡಿದ್ದಾರೆ. 
ಆದ್ರೆ ಹಾಲಿವುಡ್ ನ ಖ್ಯಾತ ನಟಿ ಎಲೆನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಹುಡುಗನಾಗಿ ಬದಲಾಗಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ನೆಟ್ಟಿಗರು ದಂಗಾಗಿದ್ದಾರೆ.. ಹೌದು.. ಹುಡುಗನಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿರುವ ಫೋಟೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://www.instagram.com/p/CPRDYAUhvEt/?utm_source=ig_web_copy_link
33 ವರ್ಷದ ನಟಿ ಎಲೆನ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ತಾನು ತೃತೀಯ ಲಿಂಗಿ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಹಿಂದೆ ಸಂದರ್ಶನವೊಂದ್ರಲ್ಲಿ ಮಾತನಾಡಿದ್ದ ನಟಿ ನನ್ನ ಬಾಲ್ಯ ಎಲ್ಲ ಹುಡುಗಿಯರಂತೆಯೇ ಕಳೆಯಿತು. ಕಾಲೇಜಿನ ಸಮಯದಲ್ಲಿ ದೇಹದ ಬೆಳವಣಿಗೆಯಲ್ಲಿ ಸಹ ಅಸಹಜ ಬದಲಾವಣೆಗಳು ಕಂಡು ಬಂದವು. ಹಾಗಾಗಿ ಕಾಲೇಜಿನ ವೇಳೆ ಟಾಮ್ ಬಾಯ್ ಲುಕ್ ನಲ್ಲಿರಲು ಇಷ್ಟವಾಗುತ್ತಿತ್ತು. ಇತ್ತ ಹಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನ್ಮಾಗಳು ನೀಡಿದ್ರೂ ನನ್ನೊಳಗಿನ ಬದಲಾವಣೆ ನನ್ನನ್ನು ಪ್ರಶ್ನೆ ಮಾಡಿತ್ತು. ನನ್ನ ಖಾಸಗಿ ಬದುಕು ಚಿಂತೆಯನ್ನು ತರಿಸಿತ್ತು ಎಂದು ಹೇಳಿಕೊಂಡಿದ್ದರು.
ಅಲ್ಲದೇ ಮಹಿಳೆಯರ ಡ್ರೆಸ್ ಗಳು ನನಗೆ ಯಾವತ್ತೂ ಕಂಫರ್ಟ್ ಆಗಿರಲಿಲ್ಲ. ಸರ್ಜರಿ ಬಳಿಕ ನನಗೆ ಮರುಜನ್ಮ ಸಿಕ್ಕಂತೆ ಆಯ್ತು. ಹುಡುಗಿಯಿಂದ ಹುಡುಗನಾಗಿ ಬದಲಾದಾಗ ಮಾನಸಿಕವಾಗಿ ನನ್ನೊಳಗೆ ಸಂಘರ್ಷ ಉಂಟಾಗಿತ್ತು. ಆ ಸಮಯದಲ್ಲಿಯೇ ತೃತೀಯ ಲಿಂಗಿಗಳ ಕಷ್ಟ ಅರಿತುಕೊಂಡೆ ಎಂದಿದ್ದರು.ಡಿಸೆಂಬರ್ 2020ರಲ್ಲಿ ಎಲಟ್ ಪೇಜ್ ಹೆಸರಿನಲ್ಲಿ ಇನ್‍ಸ್ಟಾಗ್ರಾಂ ಖಾತೆ ತರೆದು ನಾನು ತೃತೀಯ ಲಿಂಗಿ ಹುಡುಗನಾಗಿ ಬದಲಾಗಿದ್ದೇನೆ ಎಂದು ತಿಳಿಸಿದ್ದರು.
ಅಲ್ಲದೇ 2014ರಲ್ಲಿ ಎಲೆನ್ ತಾವು ಲೆಸ್ಬಿಯನ್ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. 2018ರಲ್ಲಿ ಡ್ಯಾನ್ಸರ್ ಎಮ್ಮಾ ಪೋರ್ಟರ್ ಜೊತೆ ಮದುವೆ ಸಹ ಆಗಿದ್ದು, ಸದ್ಯ ವಿಚ್ಛೇಧನ ಪಡೆಯಲು ಮುಂದಾಗಿದ್ದಾರೆ. ಕೇವಲ 10 ವರ್ಷದವರಾಗಿದ್ದಾಗಲೇ ಎಲೆನ್ ಹಾಲಿವುಡ್ ನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








