ರಾಜ್ಯದಲ್ಲಿ ಬ್ಲಾಕ್ ಫಂಗಸ್ ಇಂಜಕ್ಷನ್ ಕೊರತೆ…!
ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹಾವಳಿ ನಡುವೆ ಮತ್ತೊಂದು ಮಾರಿ ಆತಂಕ ಸೃಷ್ಟಿ ಮಾಡಿದೆ… ಬ್ಲಾಕ್ ಫಂಗಸ್ ಕಾಟ ಶುರುವಾಗಿದೆ.. ಈ ನಡುವೆ ರಾಜ್ಯದಲ್ಲಿ ಫಂಗಸ್ ಇಂಜಕ್ಷನ್ ಕೊರತೆ ಎದುರಾಗಿದೆ ಎನ್ನಲಾಗಿದೆ.. ಹೌದು.. ಒಟ್ಟಾರೆ ಬೇಕಿರೋದು 36000 , ಆದ್ರೆ ಇರೋದು 5180 ವಯಲ್ ಮಾತ್ರ.ಕಪ್ಪು ಶೀಲಿಂಧ್ರ ರೋಗಕ್ಕೆ ನೀಡುವ ಔಷಧ ಕೊರತೆ…..!
ರಾಜ್ಯದಲ್ಲಿ ಬ್ಲಾಕ್ ಫಂಗಸ್ ಗೆ 20 ಸಾವಿರ ವಯಲ್ಸ್ ಬೇಕು. ಕೂಡಲೇ ಕ್ರಮ ತೆಗಗೆದುಕೊಳ್ಳದೇ ಹೋದಲ್ಲಿ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಳವಾಗಲಿದೆ ಎನ್ನಲಾಗ್ತಿದೆ. ಇನ್ನೂ ಅಂಪೊಟೆರಿಸಿನ್ ಪೂರೈಕೆ ಮಧ್ಯೆ ಭಾರಿ ವತ್ಯಾವಿದ್ದು, ಕೇಂದ್ರದಿಂದ 5190 ಹೆಚ್ಚುವರಿ ವಯಲ್ಸ್ ಬಂದರೂ ಸಾಕಾಗದ ಪರಿಸ್ಥಿತಿ ಇದೆ ಎನ್ನಲಾಗ್ತಿದೆ. ಈ ಮೊದಲು ಕೇಂದ್ರ ಸರ್ಕಾರ ನೀಡಿದ್ದ ವಯಲ್ಸ್ ಸಂಪೂರ್ಣ ಖಾಲಿಯಾಗಿದೆ ಎನ್ನಲಾಗ್ತಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








