ಬಾವಲಿಗಳಿಂದ ಕೋವಿಡ್-19 ವೈರಸ್ ಹರಡುತ್ತಿದೆ ಎಂಬ ತಪ್ಪು ಮಾಹಿತಿ ವೈರಲ್ ಆಗುತ್ತಿದ್ದಂತೆ ಕೂಡಲೇ ಅನೇಕರು ತಮ್ಮ ಮನೆ ಮಂದೆ ಇರುವ ಗಿಡ, ಮರಗಳ ಕೊಂಬೆಗಳನ್ನು ಕಡಿಯತ್ತಿರುವ ಕೆಲಸ ನಡೆಯುತ್ತಿದೆ. ಆದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಮತ್ತು ತಜ್ಞರು ಬಾವಲಿಗಳಿಂದ ಕೋವಿಡ್-19 ಹರಡಲು ಸಾದ್ಯವಿಲ್ಲ ಎಂದಿದ್ದಾರೆ. ಇತ್ತೀಚೆಗಷ್ಟೇ ಕೇರಳ, ಹಿಮಾಚಲ ಪ್ರದೇಶ, ಪುದುಚೇರಿ ಮತ್ತು ತಮಿಳುನಾಡು ಪ್ರದೇಶ ವ್ಯಾಪ್ತಿಯ 25ಕ್ಕೂ ಹೆಚ್ಚು ಬಾವಲಿಗಳನ್ನು ಪರೀಕ್ಷೆಗೊಳಪಡಿಸಿ ಅಧ್ಯಯನ ಕೈಗೊಳ್ಳಲಾಗಿತ್ತು. ಭಾರತದ ಎರಡು ಜಾತಿಯ ಬಾವಲಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಆದರೆ, ಈಗ ಮಾನವ ಕುಲಕ್ಕೆ ಕಂಟಕ ತಂದಿರುವ ಕೊರೊನಾ ವೈರಸ್(ಕೋವಿಡ್-19) ಮತ್ತು ಬಾವಲಿಗಳಲ್ಲಿ ಪತ್ತೆಯಾಗಿರುವ ವೈರಸ್ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
”ಬಾವಲಿಗಳಿಂದ ಕೊರೊನಾ ವೈರಸ್ ಹರಡುವ ಘಟನೆ ಸಾವಿರ ವರ್ಷಗಳಲ್ಲಿ ಒಮ್ಮೆ ಮಾತ್ರ ಸಂಭವಿಸಬಹುದು, ಎಂದು ಐಸಿಎಂಆರ್ನ ಮುಖ್ಯ ವಿಜ್ಞಾನಿ ಡಾ. ರಮಣ್ ಗಂಗಖೇಡ್ಕರ ಅವರು ಹೇಳಿದ್ದಾರೆ. ಇದುವರೆಗೂ ಭಾರತದಲ್ಲಿನ ಬಾವಲಿಗಳು ಸೋಂಕು ಹರಡುವುದಕ್ಕೆ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ. ಜನರಲ್ಲಿ ಬಾವಲಿಗಳ ಬಗ್ಗೆ ತಪ್ಪು ಕಲ್ಪನೆ ಹೆಚ್ಚಾದಲ್ಲಿ, ಬಾವಲಿಗಳ ಮಾರಣ ಹೋಮ ನಡೆಯಬಹುದು ಎಂಬ ಆತಂಕವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.
10 ಸಾವಿರ ಜನ ನುಗ್ಗಿದಾಗ ಲಾಠಿ ಬೀಸದೆ ಮುತ್ತು ಕೊಡಬೇಕಾ?
ಪಂಚಮಸಾಲಿ ಸಮುದಾಯವು 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದೆ. ಈ ಹೋರಾಟದ ವೇಳೆ 10 ಸಾವಿರ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು,...