ವಿಮಾನ ದುರಂತದಲ್ಲಿ ಹಾಲಿವುಡ್ ನ ಖ್ಯಾತ ನಟ ಜೋ ಲಾರಾ, ಪತ್ನಿ ಸೇರಿ 7 ಮಂದಿ ಸಾವು
ಹಾಲಿವುಡ್ ನ ಖ್ಯಾತ ನಟ ಜೋ ಲಾರಾ ಹಾಗೂ ಆತನ ಪತ್ನಿ ವಿಮಾನ ದುರಂತದಲ್ಲಿ ನಿಧರಾಗಿದ್ದಾರೆ. ಅಮೆರಿಕದ ನ್ಯಾಶ್ವಿಲ್ಲೆ ನಗರದ ಸರೋವರ ಬಳಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ನಟ ಆತನ ಪತ್ನಿ ಸೇರಿ ಒಟ್ಟು 7 ಮಂದಿ ಪ್ರಾಣ ಕಳೆದುಕೊಮಡಿದ್ದಾರೆ.
ಬ್ಯುಸಿನೆಸ್ ಜೆಟ್ ನಲ್ಲಿ ಹೊರಟಿದ್ದ ಕೆಲವೇ ಕ್ಷಣದಲ್ಲಿ ಈ ದುರಂತ ಸಂಭವಿಸಿದೆ. ಪ್ಲೋರಿಡಾದ ಪಾಮ್ ಬೀಚ್‌ನ ಸ್ಮಿರ್ನಾದ ಟೆನ್ನೆಸೀ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಸ್ವಲ್ಪ ಸಮಯದಲ್ಲೇ ಪ್ರಿಸ್ಟ್ ಸರೋವರದಲ್ಲಿ ಪತನಗೊಂಡಿದೆ.
ಶನಿವಾರ ಈ ಘಟನೆ ನಡೆದಿದ್ದು, ತಕ್ಷಣ ರಕ್ಷಣ ತಂಡ ಸ್ಥಳಕ್ಕೆ ಧಾವಿಸಿದೆ. ಆದರೆ 7 ಪ್ರಯಾಣಿಕರು ಬದುಕುಳಿಯಲಿಲ್ಲ ಎಂದು ವರದಿಯಾಗಿದೆ. ಶೋಧ ಕಾರ್ಯ ಇಂದೂ ಕೂಡ ಮುಂದುವರೆದಿದೆ. ಮಾನದ ಹಲವಾರು ತುಂಡುಗಳು ಮತ್ತು ಮಾನವ ಅವಶೇಷಗಳು ರಕ್ಷಣಾ ಕಾರ್ಯಚರಣೆ ವೇಳೆ ಪತ್ತೆಯಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.