ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ‘ಕೋವಿಡ್ ಲಸಿಕೆ’
ಅಮೆರಿಕಾ: ದೇಶದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಲಸಿಕೆ ಅಭಿಯಾನವೂ ಮುಂದುವರೆದಿದೆ.. ಇನ್ನೂ ಅನೇಕರಿಗೆ ಲಸಿಕೆಯ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಇಡೀ ವಿಶ್ವಾದ್ಯಂತ ಲಸಿಕೆ ಅಭಿಯಾನ ಜಾರಿಯಲ್ಲಿದೆ.. ಈ ನಡುವೆ ಕೋವಿಡ್ ಲಸಿಕೆಯ ಬಗ್ಗೆ ಸಮಾದಾನಕರ ಸಂಗತಿಯೊಂದು ಬಹಿರಂಗವಾಗಿದೆ.. ಹೌದು ಕೊರೊನಾ ಸೋಂಕಿತರಲ್ಲಿ ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ ಹೊಸ ರೂಪಾಂತರಿತ ವೈರಸ್‌ಗಳಿಂದಲೂ ರಕ್ಷಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಅಮೆರಿಕದ ರಾಕೆಫೆಲ್ಲರ್ ವಿಶ್ವವಿದ್ಯಾಲಯದ ಸಂಶೋಧಕರು ಕೋವಿಡ್ ರೋಗಿಗಳ ರಕ್ತದಲ್ಲಿ ಇರುವ ಪ್ರತಿಕಾಯಗಳನ್ನು ವಿಶ್ಲೇಷಿಸಿ, ಈ ವಿಕಾಸವನ್ನು ಪತ್ತೆ ಹಚ್ಚಿದ್ದಾರೆ. ಕಳೆದ ವರ್ಷ ಕೋವಿಡ್ ಅಲೆಯ ಸಂದರ್ಭದಲ್ಲಿ 63 ಜನರನ್ನು ಇದಕ್ಕಾಗಿ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಅಧ್ಯಯನ ಇನ್ನೂ ಉನ್ನತ ತಜ್ಞರಿಂದ ಪರಿಶೀಲನೆಗೆ ಒಳಗಾಗಿಲ್ಲ. ಮಾಡರ್ನಾ ಅಥವಾ ಫೈಜರ್ ಲಸಿಕೆಯ ಒಂದು ಡೋಸ್ ಪಡೆದಿರುವ 26 ಜನರಲ್ಲಿ ಪ್ರತಿಕಾಯಗಳು ಮತ್ತಷ್ಟು ಹೆಚ್ಚಾಗಿವೆ. ಅಲ್ಲದೆ ಬ್ರಿಟನ್, ದಕ್ಷಿಣ ಆಫ್ರಿಕಾ, ನ್ಯೂಯಾರ್ಕ್ ರೂಪಾಂತರಿತ ವೈರಸ್‌ಗಳ ಮೇಲೂ ಹೆಚ್ಚು ಪರಿಣಾಮಕಾರಿಯಾಗಿವೆ ಎಂದು ಅಧ್ಯಯನ ತಿಳಿಸಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.