ADVERTISEMENT
Wednesday, December 17, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಟೀಮ್ ಇಂಡಿಯಾದ ವಾರಿಯರ್ ರವೀಂದ್ರ ಜಡೇಜಾ.. ಇದು ಜಡ್ಡುವಿನ ಬಯೋಗ್ರಾಫಿ..!

admin by admin
June 2, 2021
in Newsbeat, Sports, ಕ್ರೀಡೆ
ravindra jadeja team iindia saakshatv
Share on FacebookShare on TwitterShare on WhatsappShare on Telegram

ಟೀಮ್ ಇಂಡಿಯಾದ ವಾರಿಯರ್ ರವೀಂದ್ರ ಜಡೇಜಾ.. ಇದು ಜಡ್ಡುವಿನ ಬಯೋಗ್ರಾಫಿ..!

ravindra jadeja team iindia saakshatvರವೀಂದ್ರ ಸಿಂಗ್ ಅನಿರುದ್ಧ್ ಸಿಂಗ್ ಜಡೇಜಾ..
ಟೀಮ್ ಇಂಡಿಯಾದ ಆಲ್ ರೌಂಡರ್. ಸಹ ಆಟಗಾರರ ಪ್ರೀತಿಯ ಜಡ್ಡು.. ವಿಶ್ವ ಕ್ರಿಕೆಟ್ ನಲ್ಲಿ ರವೀಂದ್ರ ಜಡೇಜಾ ಹೆಸರು ತೀರಾ ಚಿರಪರಿಚಿತ.
ಬೌಲಿಂಗ್ ನಲ್ಲಿ ಎದುರಾಳಿ ಬ್ಯಾಟ್ಸ್ ಮೆನ್ ಗಳನ್ನು ತಬ್ಬಿಬ್ಬುಗೊಳಿಸುವ ಚಾಕಚಕ್ಯತೆ ಇದೆ. ಹಾಗೇ ಬ್ಯಾಟಿಂಗ್ ನಲ್ಲೂ ಎದುರಾಳಿ ಬೌಲರ್ ಗಳನ್ನು ದ್ವಂಸಗೊಳಿಸುವ ಸಾಮಥ್ರ್ಯವೂ ಇದೆ. ಅಷ್ಟೇ ಅಲ್ಲ, ಕ್ಷೇತ್ರ ರಕ್ಷಕನಾಗಿ ಎದುರಾಳಿ ಬ್ಯಾಟ್ಸ್ ಮೆನ್ ಗಳಿಗೆ ಸಿಂಹಸ್ವಪ್ನವಾಗಿ ಕಾಡುವಂತಹ ಫೀಲ್ಡರ್ ಕೂಡ ಹೌದು.
ಕಳೆದ ಹತ್ತು -15 ವರ್ಷಗಳಿಂದ ರವೀಂದ್ರ ಜಡೇಜಾ ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಎರಡು ಬಾರಿ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ ಹೆಗ್ಗಳಿಕೆ ಕೂಡ ರವೀಂದ್ರ ಜಡೇಜಾಗಿದೆ. ಅದ್ರಲ್ಲಿ ಒಂದು ಬಾರಿ ರನ್ನರ್ ಅಪ್ ಮತ್ತು ಒಂದು ಬಾರಿ ಪ್ರಶಸ್ತಿ ಗೆದ್ದಿರುವ ಹೆಗ್ಗಳಿಕೆಯೂ ಜಡೇಜಾ ಅವರಿಗಿದೆ.
ravindra jadeja team iindia saakshatvಅಂದ ಹಾಗೇ ರವೀಂದ್ರ ಜಡೇಜಾ ಇಂದು ವಿಶ್ವ ಕ್ರಿಕೆಟ್ ನಲ್ಲಿ ಹೆಸರು ಮಾಡಿರಬಹುದು. ಆದ್ರೆ ಅದರ ಹಿಂದಿನ ಶ್ರಮ, ಕಷ್ಟ, ಏಳುಬೀಳುಗಳು ಸಾಕಷ್ಟಿವೆ. ಪ್ರತಿ ಹಂತದಲ್ಲೂ ಕಷ್ಟಪಟ್ಟಿದ್ದಾರೆ. ಸಂಕಷ್ಟದ ಸಮಯದಲ್ಲೂ ಎಂದೆಗುಂದದ ರವೀಂದ್ರ ಜಡೇಜಾ ಇಂದು ವಿಶ್ವ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಕೂಡ ಬರೆದಿದ್ದಾರೆ. ಟೀಮ್ ಇಂಡಿಯಾದ ರೋಚಕ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.
ರವೀಂದ್ರ ಜಡೇಜಾ ಹುಟ್ಟಿದ್ದು ಡಿಸೆಂಬರ್ 6, 1988ರಲ್ಲಿ. ಗುಜರಾತಿನ ರಜಪೂತ್ ಕುಟುಂಬದ ಕುಡಿ. ಹಾಗಂತ ಹುಟ್ಟು ಶ್ರೀಮಂತನಲ್ಲ. ಮಧ್ಯಮ ವರ್ಗದ ಕುಟುಂಬದವರು. ತಂದೆ ಅನಿರುದ್ಧ ಸಿಂಗ್. ಖಾಸಗಿ ಕಂಪೆನಿಯೊಂದರ ವಾಚ್ ಮೆನ್. ತಾಯಿ ಲತಾ ಅವರು ನರ್ಸ್ ಆಗಿದ್ರು. ಅಕ್ಕ ನೈನಾ ಕೂಡ ನಸ್ ಆಗಿದ್ದಾರೆ. 2005ರಲ್ಲಿ ಜಡೇಜಾ ಅವರ ತಾಯಿ ಲತಾ ಅವರು ನಿಧನರಾಗಿದ್ದರು. ಆಗ ರವೀಂದ್ರ ಜಡೇಜಾಗೆ ತಾಯಿ ಸ್ಥಾನ ತುಂಬಿದ್ದು ಅಕ್ಕ ನೈನಾ.
ravindra jadeja team iindia saakshatvಗುಜರಾತಿನ ಜಾಮ್ ನಗರ ಜಿಲ್ಲೆಯ ನವಗಮ್ ಘೇಡ್ ರವೀಂದ್ರ ಜಡೇಜಾ ಅವರ ಹುಟ್ಟೂರು. ಅಪ್ಪನಿಗೆ ಮಗ ಆರ್ಮಿ ಆಫೀಸರ್ ಆಗಬೇಕು ಅನ್ನೋ ಆಸೆ. ಆದ್ರೆ ಮಗನ ಆಸಕ್ತಿಯೇ ಬೇರೆಯಾಗಿತ್ತು. ಕ್ರಿಕೆಟಿಗನಾಗಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಬೇಕು ಅನ್ನೋ ಕನಸು ಕಟ್ಟಿಕೊಂಡಿದ್ದರು. ಅದಕ್ಕೆ ಪೂರಕವಾಗಿ ರವೀಂದ್ರ ಜಡೇಜಾ ಅವರು ಕ್ರಿಕೆಟ್ ಮೇಲೆ ಅಪಾರವಾದ ಪ್ರೀತಿಯನ್ನಿಟ್ಟುಕೊಂಡಿದ್ದರು. ಬಾಲ್ಯದಲ್ಲಿ ತನ್ನಗಿಂತ ದೊಡ್ಡವರ ಜೊತೆ ಕ್ರಿಕೆಟ್ ಆಡುತ್ತಿದ್ದ ಬಾಲಕ ಜಡೇಜಾ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗುತ್ತಿರಲಿಲ್ಲ. ಆಗ ಆಳುತ್ತಾ ಮನೆಗೆ ಬರುತ್ತಿದ್ದರು. ಆಗ ರವೀಂದ್ರ ಜಡೇಜಾ ಅವರ ತಾಯಿ ಸಮಾಧಾನಪಡುತ್ತಿದ್ದರು.
ಬಳಿಕ ರವೀಂದ್ರ ಸಿಂಗ್ ಅವರು ಕ್ರಿಕೆಟ್ ಕೋಚ್ ಮಹೇಂದ್ರ ಸಿಂಗ್ ಚೌಹ್ಹಾಣ್ ಅವರ ಕಣ್ಣಿಗೆ ಬಿದ್ರು. ಜಾಮ್ ನಗರದ ಕ್ರಿಕೆಟ್ ಬಂಗ್ಲದಲ್ಲಿ ತರಬೇತಿ ಕೇಂದ್ರಲ್ಲಿ ಸೇರಿಕೊಂಡ್ರು. ಕೇವಲ ಎಂಟರ ಹರೆಯದ ರವೀಂದ್ರ ಜಡೇಡಾ ತುಂಬಾ ನಾಚಿಕೆ ಸ್ವಭಾವದವರಾಗಿದ್ದರು. ಆದ್ರೆ ಚೌಹ್ಹಾಣ್ ಅವರು ರವೀಂದ್ರ ಜಡೇಜಾ ಅವರ ಬದುಕನ್ನೇ ಬದಲಾಯಿಸಿದ್ರು. ಅಚ್ಚರಿ ಅಂದ್ರೆ ರವೀಂದ್ರ ಜಡೇಜಾ ಅವರು ಆರಂಭದಲ್ಲಿ ವೇಗದ ಬೌಲರ್ ಆಗಿದ್ದರು. ಬಳಿಕ ಎಡಗೈ ಸ್ಪಿನ್ನರ್ ಆಗಿ ರೂಪುಗೊಂಡ್ರು.
ಗುರುವಿನ ನೆಚ್ಚಿನ ಶಿಷ್ಯನಾಗಿದ್ದ ಜಡೇಜಾ, ಒಂದು ಬಾರಿ ಗುರುವಿನಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ದರು. ಪಂದ್ಯವೊಂದರಲ್ಲಿ ಐದು ವಿಕೆಟ್ ಉರುಳಿಸಿದ್ರೂ ದುಬಾರಿಯಾಗಿದ್ದರು. ಇದ್ರಿಂದ ಸಿಟ್ಟಿಗೆದ್ದ ಕೋಚ್ ಚೌಹ್ವಾಣ್ ಅವರು ರವೀಂದ್ರ ಜಡೇಜಾಗೆ ಮೈದಾನದ ಪಿಚ್ ನಲ್ಲೇ ಕಪಾಳಕ್ಕೆ ಹೊಡೆದಿದ್ದರು.
ravindra jadeja team iindia saakshatvಸ್ಥಳೀಯ ಟೂರ್ನಿಗಳಲ್ಲಿ ರವೀಂದ್ರ ಜಡೇಜಾ ಹೆಸರು ಚಿರಪರಿಚಿತವಾಗಿತ್ತು. ಹಾಗೇ ರಾಜ್ಯದ ತಂಡದ ವಿವಿಧ ವಯೋಮಿತಿ ಟೂರ್ನಿಗಳಲ್ಲೂ ಭಾಗಿಯಾಗುತ್ತಿದ್ದರು.. ಅಲ್ಲದೆ 2006 ಮತ್ತು 2008ರ 19 ವಯೊಮಿತಿ ವಿಶ್ವಕಪ್ ಟೂರ್ನಿಯಲ್ಲೂ ಆಡಿದ್ದರು. ಅಲ್ಲದೆ 2006ರಲ್ಲಿ ರಣಜಿ ಟೂರ್ನಿಗೂ ಎಂಟ್ರಿಯಾಗಿದ್ದರು.
ಇನ್ನು 2008ರಲ್ಲಿ ರವೀಂದ್ರ ಜಡೇಜಾ ಚೊಚ್ಚಲ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಸೇರಿಕೊಂಡ್ರು. ಫೈನಲ್ ನಲ್ಲಿ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನವನ್ನೇ ನೀಡಿದ್ದರು. ಅಲ್ಲದೆ ನಾಯಕ ಶೇನ್ ವಾರ್ನ್ ಅವರಿಂದ ರಾಕ್ ಸ್ಟಾರ್ ಅನ್ನೋ ಬಿರುದನ್ನು ಪಡೆದುಕೊಂಡಿದ್ದರು.
ಬಳಿಕ 2008-09ರ ರಣಜಿ ಟೂರ್ನಿಯಲ್ಲಿ ಆಲ್ ರೌಂಡ್ ಪ್ರದರ್ಶನವನ್ನು ನೀಡಿದ್ದರು. 739 ರನ್ ಹಾಗೂ 42 ವಿಕೆಟ್ ಪಡೆದು ರಾಷ್ಟ್ರೀಯ ತಂಡದ ಕದ ಕೂಡ ತಟ್ಟಿದ್ದರು. ಅಲ್ಲದೆ ಶ್ರೀಲಂಕಾ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಅದೇ ಸರಣಿಯಲ್ಲಿ ಚೊಚ್ಚಲ ಟಿ-ಟ್ವೆಂಟಿ ಪಂದ್ಯಕ್ಕೂ ಪದಾರ್ಪಣೆ ಮಾಡಿದ್ದರು.
ravindra jadeja team iindia saakshatvಈ ನಡುವೆ, 2010ರಲ್ಲಿ ರವೀಂದ್ರ ಜಡೇಜಾ ಐಪಿಎಲ್ ನಲ್ಲಿ ಒಂದು ವರ್ಷದ ನಿಷೇಧಕ್ಕೂ ಗುರಿಯಾಗಿದ್ದರು. ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರಾದ್ರು. 2012ರಲ್ಲಿ ದೇಶಿ ಕ್ರಿಕೆಟ್ ನಲ್ಲಿ ಮೂರು ತ್ರಿಶತಕ ದಾಖಲಿಸಿ ವಿಶ್ವ ಕ್ರಿಕೆಟ್ ನಲ್ಲಿ ಅಪರೂಪದ ಸಾಧನೆ ಮಾಡಿದ್ದರು. 2012ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ರು.
ಬಳಿಕ ರವೀಂದ್ರ ಜಡೇಜಾ ಹಿಂತಿರುಗಿ ನೋಡಲೇ ಇಲ್ಲ. ಮೂರು ಮಾದರಿಯ ಕ್ರಿಕೆಟ್ ನಲ್ಲೂ ರವೀಂದ್ರ ಜಡೇಜಾ ಟೀಮ್ ಇಂಡಿಯಾದ ಖಾಯಂ ಸದಸ್ಯರಾದ್ರು. 2013ರಲ್ಲಿ ಏಕದಿನ ಕ್ರಿಕೆಟ್ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನಕ್ಕೇರಿದ್ರು. ಈ ಸಾಧನೆ ಮಾಡಿದ್ದ ಭಾರತದ ಎರಡನೇ ಬೌಲರ್ ಎಂಬ ಗೌರವಕ್ಕೂ ಪಾತ್ರರಾದ್ರು.
2015ರ ವಿಶ್ವಕಪ್ ನಲ್ಲಿ ಫುಲ್ ಫಿಟ್ ಆಗಿಲ್ಲದಿದ್ರೂ ಆಡಿದ್ರು. ನಂತರ ತಂಡದಿಂದ ಕೈಬಿಡಲಾಗಿತ್ತು. ಬಳಿಕ ಮತ್ತೆ ತಂಡವನ್ನು ಸೇರಿಕೊಂಡ್ರು. 2016ರ ಆಸ್ಟ್ರೇಲಿಯಾ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡ್ರು, ಇನ್ನೊಂದೆಡೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಹಾರ್ದಿಕ್ ಪಾಂಡ್ಯ ರನೌಟ್ ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಟೀಕೆಗಳನ್ನು ಕೇಳಬೇಕಾಯ್ತು. ಬಳಿಕ 2018ರಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ದಾಖಲಿಸಿ ತನ್ನ ತಾಯಿಗೆ ಅರ್ಪಣೆ ಮಾಡಿದ್ದರು.
ravindra jadeja team iindia saakshatv2019ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ಏಕಾಂಗಿ ಹೋರಾಟ ನಡೆಸಿದ್ರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಆ ನಂತರ 2020ರ ಆಸ್ಟ್ರೇಲಿಯಾ ಸರಣಿಯ ವೇಳೆ ರವೀಂದ್ರ ಜಡೇಜಾ ಗಾಯಗೊಂಡಿದ್ದರು. ನಂತರ ಚೇತರಿಸಿಕೊಂಡು ಐಪಿಎಲ್ ನಲ್ಲಿ ಆಡಿ ಅದ್ಭುತ ಪ್ರದರ್ಶನವನ್ನು ನೀಡಿದ್ದರು.
ಒಟ್ಟಾರೆಯಾಗಿ ರವೀಂದ್ರ ಜಡೇಜಾ ಅವರು ಇಲ್ಲಿಯವರೆಗೆ 51 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 1954 ರನ್ ಹಾಗೂ ಒಂದು ಶತಕ ಹಾಗು 15 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಹಾಗೇ 220 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಏಕದಿನ ಕ್ರಿಕೆಟ್ ನಲ್ಲಿ 168 ಪಂದ್ಯಗಳನ್ನು ಆಡಿದ್ದು, 2411 ರನ್ ಹಾಗೂ 13 ಅರ್ಧಶತಕ ಹಾಗೂ 188 ವಿಕೆಟ್ ಗಳನ್ನು ಪಡೆದಿದ್ದಾರೆ.
ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ 50 ಪಂದ್ಯಗಳನ್ನು ಆಡಿದ್ದು, 217 ರನ್ ಹಾಗೂ 39 ವಿಕೆಟ್ ಪಡೆದಿದ್ದಾರೆ.
ಒಟ್ಟಿನಲ್ಲಿ ರವೀಂದ್ರ ಜಡೇಜಾ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಆಟಗಾರ. ಸಮಯೋಚಿತ ಆಟವನ್ನಾಡುವ ರವೀಂದ್ರ ಜಡೇಜಾ ಬೌಲಿಂಗ್ ಮತ್ತು ಬ್ಯಾಟಿಂಗ್ ಗಿಂತಲೂ ಚಿರತೆಯ ವೇಗದ ಫೀಲ್ಡಿಂಗ್ ನಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ.

Related posts

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

December 17, 2025
ಇದು ದೇವಸ್ಥಾನದ ಅರ್ಚಕರ ಜೀವನದಲ್ಲಿ ಆದಂತಹ ನೈಜ ಘಟನೆ..!

ಇದು ದೇವಸ್ಥಾನದ ಅರ್ಚಕರ ಜೀವನದಲ್ಲಿ ಆದಂತಹ ನೈಜ ಘಟನೆ..!

December 17, 2025
Tags: #saakshatvbccichennai super kingsCricketcskICCIPLjaddurajastan royalsravindra jadejaSportsteam india
ShareTweetSendShare
Join us on:

Related Posts

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

by admin
December 17, 2025
0

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಒಳ್ಳೆದಾ ಅಥವಾ ಕೆಟ್ಟದಾ.?? ಹಾಗಾದರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...

ಇದು ದೇವಸ್ಥಾನದ ಅರ್ಚಕರ ಜೀವನದಲ್ಲಿ ಆದಂತಹ ನೈಜ ಘಟನೆ..!

ಇದು ದೇವಸ್ಥಾನದ ಅರ್ಚಕರ ಜೀವನದಲ್ಲಿ ಆದಂತಹ ನೈಜ ಘಟನೆ..!

by admin
December 17, 2025
0

ಒಬ್ಬ ಅರ್ಚಕರು ದೇವಸ್ಥಾನದಲ್ಲಿ ತಡರಾತ್ರಿವರೆಗೂ ಕೆಲಸ ಮಾಡುತಿದ್ದರು, ಮರುದಿನ ವಿಶೇಷ ಮಹಾಪೂಜೆ ಇದ್ದಿದ್ದರಿಂದ ಅದರ ತಯಾರಿಯಲ್ಲಿಯೇ ವ್ಯಸ್ತರಾಗಿದ್ದರು.ಆದರೆ ತುಂಬಾ ತಡವಾಗಿತ್ತು ಹಾಗೂ ಎಂದಿನಂತೆಯೇ ತಮ್ಮ ಮನೆಗೆ ದೇವಸ್ಥಾನದ...

ಅಧಿವೇಶನ ವಿಸ್ತರಣೆ ಕುರಿತು ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

ಅಧಿವೇಶನ ವಿಸ್ತರಣೆ ಕುರಿತು ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

by Shwetha
December 17, 2025
0

ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಒಂದು ವಾರ ವಿಸ್ತರಿಸುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಪತ್ರ ಬರೆದಿರುವ ಹಿನ್ನೆಲೆಯಲ್ಲಿ, ಈ ವಿಷಯದ ಬಗ್ಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್...

ವಿಧಾನಸಭೆಯಲ್ಲಿ ನಾನೇ ಸಿಎಂ ಎಂದು ಗುಡುಗಿದ ಸಿದ್ದರಾಮಯ್ಯ; ಮುಗುಳ್ನಗುತ್ತಲೇ ನಿಗೂಢ ಸಂದೇಶ ರವಾನಿಸಿದ ಡಿಕೆ ಶಿವಕುಮಾರ್

ವಿಧಾನಸಭೆಯಲ್ಲಿ ನಾನೇ ಸಿಎಂ ಎಂದು ಗುಡುಗಿದ ಸಿದ್ದರಾಮಯ್ಯ; ಮುಗುಳ್ನಗುತ್ತಲೇ ನಿಗೂಢ ಸಂದೇಶ ರವಾನಿಸಿದ ಡಿಕೆ ಶಿವಕುಮಾರ್

by Shwetha
December 17, 2025
0

ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಎಂಬ ಗುಸುಗುಸು ಮತ್ತು ವಿಪಕ್ಷಗಳ ಟೀಕಾಸ್ತ್ರಗಳ ನಡುವೆಯೇ ವಿಧಾನಸಭೆಯ ಕಲಾಪ ಹೈವೋಲ್ಟೇಜ್ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ...

ಮುಡಾ ಹಗರಣದಲ್ಲಿ ಸ್ಫೋಟಕ ತಿರುವು: ಸಿಎಂಗೆ ಶುರುವಾಯ್ತು ಢವಢವ, ಮಾಜಿ ಆಯುಕ್ತ ದಿನೇಶ್ ಕುಮಾರ್ ಈಗ ಲೋಕಾಯುಕ್ತರ ಸುಪರ್ದಿಗೆ

ಮುಡಾ ಹಗರಣದಲ್ಲಿ ಸ್ಫೋಟಕ ತಿರುವು: ಸಿಎಂಗೆ ಶುರುವಾಯ್ತು ಢವಢವ, ಮಾಜಿ ಆಯುಕ್ತ ದಿನೇಶ್ ಕುಮಾರ್ ಈಗ ಲೋಕಾಯುಕ್ತರ ಸುಪರ್ದಿಗೆ

by Shwetha
December 17, 2025
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣವು ಇದೀಗ ಮಹತ್ತರ ಘಟ್ಟವನ್ನು ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram