ಬಿಮ್ಸ್ ಅವ್ಯವಸ್ಥೆ : ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು..? CM BS Yeddyurappa
ಬೆಳಗಾವಿ : ನಗರದ ಬಿಮ್ಸ್ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿದೆ. ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಒಬ್ಬ ವೈದ್ಯರನ್ನು ಕಂಡರೆ ಮತ್ತೊಬ್ಬ ವೈದ್ಯರಿಗೆ ಆಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಬೆಳಗಾವಿಗೆ ಭೇಟಿ ನೀಡಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಚರ್ಚೆ ಮಾಡಿದ್ದೇವೆ. ಸಮರ್ಥ ಐಎಎಸ್ ಅಧಿಕಾರಿ ನೇಮಕ ಮಾಡುತ್ತೇವೆ. ಡಿಸಿಎಂ ಲಕ್ಷ್ಮಣ ಸವದಿ ಆಸ್ಪತ್ರೆಗೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಅವ್ಯವಸ್ಥೆ ಸರಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ರೈತರಿಗೆ ಕೊಡಬೇಕಾಗಿರೋ ಬಾಕಿ ಬಿಲ್ ಆದಷ್ಟು ಬೇಗ ಕೊಡಿಸಲು ಯತ್ನ ಮಾಡುತ್ತೇವೆ ಎಂದರು. ಹಾಗೇ ಪಿಯುಸಿ, ಎಸ್ ಎಸ್ ಎಲ್ ಸಿ ಪರೀಕ್ಷೆ ವಿಚಾರವಾಗಿ ಮಾತನಾಡಿ, ಪರಿಸ್ಥಿತಿ ಸುಧಾರಣೆ ಆದರೆ ಪರೀಕ್ಷೆ ನಡೆಸುತ್ತೇವೆ. ಇಲ್ಲದೇ ಇದ್ರೆ ಪರೀಕ್ಷೆ ನಡೆಸಲ್ಲ ಎಂದು ತಿಳಿಸಿದ್ದಾರೆ.









