ರಾಜ್ಯದಲ್ಲಿ ಸೆಂಚುರಿ ಸನಿಹದಲ್ಲಿ ಪೆಟ್ರೋಲ್ ದರ Karnataka
ನವದೆಹಲಿ : ದೇಶದಲ್ಲಿ ಪೆಟ್ರೋಲ್ ಡಿಸೇಲ್ ದರ ಮತ್ತೆ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 27 ಪೈಸೆ ಮತ್ತು ಡಿಸೇಲ್ ಲೀಟರ್ಗೆ 28 ಪೈಸೆ ಹೆಚ್ಚಿಸಲಾಗಿದೆ.
ಇದರೊಂದಿಗೆ ದೇಶಾದ್ಯಂತ ಇಂಧನ ಬೆಲೆಗಳನ್ನು ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಕೊಂಡೊಯ್ದಿದೆ.
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ಇದೀಗ ಲೇಹ್ ನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 100 ರೂ. ದಾಟಿದೆ.
ಕರ್ನಾಟಕದಲ್ಲೂ ಸಹ ಪೆಟ್ರೋಲ್ ದರ ಸೆಂಚುರಿ ಸನಿಹದಲ್ಲಿ ಬಂದು ನಿಂತಿದೆ. ಬಳ್ಳಾರಿಯಲ್ಲಿ ಪೆಟ್ರೋಲ್ ಲೀಟರ್ ಗೆ ಅತ್ಯಧಿಕ 99.83 ರೂ.ಗೆ ಮಾರಾಟ ಆಗುತ್ತಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 97.98 ರೂ. ಮತ್ತು ಡೀಸೆಲ್ 90.87 ರೂ.ಯಲ್ಲಿ ಖರೀದಿ ಆಗುತ್ತಿದೆ.
ದೆಹಲಿಯಲ್ಲಿ ಪೆಟ್ರೋಲ್ ಸಾರ್ವಕಾಲಿಕ ಗರಿಷ್ಠ 94.76 ರೂ.ಗೆ ತಲುಪಿದ್ದರೆ, ಡೀಸೆಲ್ ಈಗ ಲೀಟರ್ ಗೆ 85.66 ರೂ. ಆಗಿದೆ.