ವಿಶ್ವ ಪರಿಸರ ದಿನ : ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಕೆರೆ ಸ್ವಚ್ಛತೆ
ಬೆಂಗಳೂರು : ಇಂದು ವಿಶ್ವ ಪರಿಸರ ದಿನ ಹಿನ್ನೆಲೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಮನೆಗೊಂದು ಮರ, ಊರಿಗೊಂದು ಕೆರೆ ಮತ್ತು ನಮ್ಮ ನಡೆ ನಿಸರ್ಗದ ಕಡೆ ಎಂಬ ಶೀರ್ಷಿಕೆಯಡಿ ಕೆರೆ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಯುವ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ರವರ ನೇತೃತ್ವದಲ್ಲಿ ಐ ಕೇರ್ ಬ್ರಿಗೇಡ್ ಸಂಸ್ಥೆಯ ಸಹಯೋಗದೊಂದಿಗೆ ಹಾಗೂ ಕೆರೆಗಳ ಸಂರಕ್ಷಕರು ಮತ್ತು ಪರಿಸರವಾದಿಗಳು ಆದ ಆನಂದ್ ರವರ ಮಾರ್ಗದರ್ಶನ ಹಾಗೂ ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಆರ್ ಚಂದ್ರಪ್ಪ ರವರ ಅಧ್ಯಕ್ಷತೆಯಲ್ಲಿ ಹುಣಸಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಗಲಹಟ್ಟಿ ಕೆರೆ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕೊರೊನಾ ವಾರಿಯರ್ಸ್ಗಳಿಗೆ ದಿನಸಿ ವಿತರಣೆ ಆಯೋಜಿಸಲಾಗಿದೆ.