ಬೆಂಗಳೂರಿನಲ್ಲಿ ಶತಕದಂಚಿಗೆ ತಲುಪಿದೆ ಪೆಟ್ರೋಲ್ ಬೆಲೆ..!
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರನಲ್ಲಿ ಪೆಟ್ರೋಲ್ ಬೆಲೆ ಶತಕದಂಚಿಗೆ ತಲುಪಿದೆ.
ನಗರದಲ್ಲಿ ಲೀಟರ್ ಪೆಟ್ರೋಲ್ ಬರೋಬ್ಬರಿ 98 ರೂಪಾಯಿ 19 ಪೈಸೆಯಾಗಿದೆ. ಹಾಗೆಯೇ ಲೀಟರ್ ಡಿಸೇಲ್ ಗೆ 90 ರೂಪಾಯಿ 84 ಪೈಸೆಯಾಗಿದೆ.
ಕೊರೊನಾ ಸಂಕಷ್ಟ ಆರ್ಥಿಕ ಹೊಡೆತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಪೆಟ್ರೋಲ್, ಡಿಸೇಲ್ ಬೆಲೆಗಳು ಗಗನಕ್ಕೇರುತ್ತಿವೆ.
ಅದ್ರಲ್ಲೂ ಪೆಟ್ರೋಲ್ ಬೆಲೆಯಂತೂ ಶತಕದ ಸನಿಹದಲ್ಲಿದೆ. ಈಗಾಗಲೇ ದೇಶದ ಕೆಲ ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. ಇದು ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದೆ.
ಕಳೆದ ಒಂದು ತಿಂಗಳಿಗೆ ಹೋಲಿಕೆ ಮಾಡಿದ್ರೆ ಶೇ.17ರಷ್ಟು ಇಂಧನ ಮಾರಾಟದಲ್ಲಿ ಇಳಿಕೆಯಾಗಿದೆ.
ಮೇ ತಿಂಗಳಿನಲ್ಲಿ ಪೆಟ್ರೋಲ್ ಬರೋಬ್ಬರಿ 17.9 ಲಕ್ಷ ಟನ್ ನಷ್ಟು ಇಳಿಕೆ ಕಂಡಿದೆ. ಆದರೂ ದೇಶದಲ್ಲಿ ತೈಲ ಬೆಲೆ ಏರಿಕೆ ಆಗುತ್ತಲೇ ಇರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ ಗೆ 66.98 ಡಾಲರ್ ಇದೆ.