ಫ್ರೆಂಚ್ ಓಪನ್ – ಎಲಿನಾ ಸ್ವಿಟೊಲಿನಾಗೆ ಆಘಾತ… ಮುನ್ನಡೆ ಸಾಧಿಸಿದ ಸೋಫಿಯಾ ಕೆನಿನ್
2021ರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಟೂರ್ನಿಯ ಸ್ಟಾರ್ ಆಟಗಾರ್ತಿ ಐದನೇ ಶ್ರೇಯಾಂಕಿತೆ ಎಲಿನಾ ಸ್ವಿಟೊಲಿನಾ ಅವರು ಮೂರನೇ ಸುತ್ತಿನಲ್ಲೇ ತನ್ನ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.
ಮೂರನೇ ಸುತ್ತಿನಲ್ಲಿ ಎಲಿನಾ ಸ್ವಿಟೊಲಿನಾ ಅವರು 3-6, 2-6 ನೇರ ಸೆಟ್ ಗಳಿಂದ 33ನೇ ಶ್ರೇಯಾಂಕಿತೆ ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜೆಸಿಕೊವಾ ವಿರುದ್ಧ ಸೋಲು ಅನುಭವಿಸಿದ್ರು.
ಹಾಗೇ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಪೊಲೆಂಡ್ ನ ಐಗಾ ಸ್ವಿಯೆಟೆಕ್ ಅವರು 7-6, 6-0ರಿಂದ ಎಸ್ಟೊನಿಯನ್ ಅನ್ನಾ ಕೊಂಟಾವೆಟ್ ಅವರನ್ನು ಮಣಿಸಿದ್ರು.
ಇನ್ನು ನಾಲ್ಕನೇ ಶ್ರೇಯಾಂಕಿತೆ ಸೋಫಿಯಾ ಕೆನಿನ್ ಅವರು 4-6, 6-1, 6-4ರಿಂದ ಅಮೆರಿಕಾದ ಜೆಸ್ಸಿಕಾ ಪೆಗುಲಾ ಅವರನ್ನು ಪರಾಭವಗೊಳಿಸಿದ್ರು.
ಮಾಜಿ ಯುಎಸ್ ಓಪನ್ ಚಾಂಪಿಯನ್ ಸ್ಲೊಯಾನ್ ಸ್ಟೆಫೆನ್ಸ್ ಅವರು 6-3, 7-5ರಿಂದ ಕರೊಲಿನಾ ಮುಚೊವಾ ಅವರನ್ನು ಸೋಲಿಸಿ ನಾಲ್ಕನೇ ಸುತ್ತು ಪ್ರವೇಶಿಸಿದ್ರು. ಇನ್ನು ಯುವ ಆಟಗಾರ್ತಿ ಕೊಕೊ ಗಾಫ್ ಅವರು ಕೂಡ ನಾಲ್ಕರ ಘಟ್ಟ ತಲುಪಿದ್ದಾರೆ.