ಮೃಗಾಲಯಗಳ ರಕ್ಷಣೆಗೆ ನಿಂತ ಡಿ ಬಾಸ್ – ಪ್ರಾಣಿಗಳನ್ನ ದತ್ತು ಪಡೆಯುವಂತೆ ಮನವಿ
ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಕೇವಲ ಮನುಷ್ಯರು ಮಾತ್ರವೇ ಸಂಕಷ್ಟಕ್ಕೆ ಸಿಲುಕಿಲ್ಲ. ಪ್ರಾಣಿಗಳ ರಕ್ಷಣೆಯೂ ಅನಿವಾರ್ಯತೆಯಾಗಿದೆ.. ಲಾಕ್ ಡೌನ್ ಸಮಯದಲ್ಲಿ ರಾಜ್ಯದ 9 ಮೃಗಾಲಯಗಳು ಸಂಕಷ್ಟದಲ್ಲಿವೆ. ಪ್ರವಾಸಿಗರ ಹಣದಿಂದ ಮೃಗಾಲಯದ ಬಹುತೇಕ ಖರ್ಚು ಸಾಗುತ್ತಿತ್ತು. ಆದರೀಗ ಮೃಗಾಲಯಗಳು ಕಷ್ಟದಲ್ಲಿವೆ. ಇದೀಗ ಪ್ರಾಣಿ ಪಕ್ಷಿ, ಮರ ಗಿಡಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ಸ್ಯಾಂಡಲ್ ವುಡ್ ನ ಡಿ ಬಾಸ್ ಸಂಕಷ್ಟದಲ್ಲಿರುವ ಪ್ರಾಣಿ, ಪಕ್ಷಿಗಳ ನೆರವಿಗೆ ನಿಂತಿದ್ದಾರೆ.
ಅಲ್ಲದೇ ಪ್ರಾಣಿಪಕ್ಷಿಗಳನ್ನು ಉಳಿಸಿ ಬೆಳಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಸುಮಾರು 9 ಮೃಗಾಲಯಗಳಿದ್ದು, ಕೊರೊನಾದಿಂದ ಸಂಕಷ್ಟದಲ್ಲಿವೆ. ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ನೆರವಾಗಿ ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ದರ್ಶನ್ ಮಾಹಿತಿ ಹಂಚಿಕೊಂಡಿದ್ದಾರೆ.
‘ಕೋವಿಡ್ ಅನ್ನೋ ಮಹಾಮಾರಿ ಒಂದೂವರೆ ವರ್ಷದಿಂದ ಇಡೀ ನಮ್ಮ ದೇಶದಾದ್ಯಂತ ಎಲ್ಲರಿಗೂ ತೊಂದರೆ ಕೊಟ್ಟಿದೆ. ಮಾನವ ಕುಲಕ್ಕೆ ಎಷ್ಟೋ ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿ ಸಂಕುಲಕ್ಕೂ ಆಗಿದೆ. ಕರ್ನಾಟಕದಲ್ಲಿ 9 ಮೃಗಾಲಯಗಳಿವೆ. ಸುಮಾರು 5 ಸಾವಿರಕ್ಕೂ ಹೆಚ್ಚು ಪ್ರಾಣಿಗಳಿವೆ.’ ದಯವಿಟ್ಟು ಪ್ರಾಣಿಗಳನ್ನು ದತ್ತು ಪಡೆಯಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಹುಲಿಗೆ 1 ಲಕ್ಷ ರೂ, ಅನೆಗೆ 1.75 ಲಕ್ಷ ರೂ. ‘ಒಂದು ಹಕ್ಕಿಗೆ 1 ಸಾವಿರ, ಹುಲಿಗೆ 1 ಲಕ್ಷ, ಆನೆಗೆ 1.75 ಲಕ್ಷ ಆಗುತ್ತೆ. ಈ ಹಣವನ್ನು ಒಂದು ವರ್ಷಕ್ಕೆ ಕೊಡಬೇಕು. ದಯಮಾಡಿ ಈ ಪ್ರಾಣಿ ಸಂಕುಲವನ್ನು ಉಳಿಸಲು, ಮೃಗಾಲಯಗಳನ್ನು ಬೆಳಸಲಿಕ್ಕೆ ಎಲ್ಲರೂ ಕೈ ಜೋಡಿಸಿ. ಕೋವಿಡ್ ನಲ್ಲಿ ಎಲ್ಲರೂ ಒಂದಾಗೋಣ’ ಎಂದು ಮನವಿ ಮಾಡಿದ್ದಾರೆ.
ಶ್ರೀ ದರ್ಶನ್ ತೂಗುದೀಪರವರು ರಾಜ್ಯದ ಮೃಗಾಲಯಗಳ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮತ್ತು ದೇಣಿಗೆ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು. @dasadarshan @aranya_kfd @CMofKarnataka @ArvindLBJP @CZA_Delhi @ani_digital @Mysore_Zoo @PIBBengaluru @PTI_News @KarnatakaWorld pic.twitter.com/6k2hk9RMag
— Zoos of Karnataka (@ZKarnataka) June 5, 2021