ಪ್ರಾಣಿಗಳ ದತ್ತು ಪಡೆಯಲು ಡಿ ಬಾಸ್ ಕೂಗಿಗೆ ಸ್ಪಂದಿಸಿದ ಅಭಿಮಾನಿಗಳು ..!
ಬೆಂಗಳೂರು: ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಕೇವಲ ಮನುಷ್ಯರು ಮಾತ್ರವೇ ಸಂಕಷ್ಟಕ್ಕೆ ಸಿಲುಕಿಲ್ಲ. ಪ್ರಾಣಿಗಳ ರಕ್ಷಣೆಯೂ ಅನಿವಾರ್ಯತೆಯಾಗಿದೆ.. ಲಾಕ್ ಡೌನ್ ಸಮಯದಲ್ಲಿ ರಾಜ್ಯದ 9 ಮೃಗಾಲಯಗಳು ಸಂಕಷ್ಟದಲ್ಲಿವೆ. ಪ್ರವಾಸಿಗರ ಹಣದಿಂದ ಮೃಗಾಲಯದ ಬಹುತೇಕ ಖರ್ಚು ಸಾಗುತ್ತಿತ್ತು. ಆದರೀಗ ಮೃಗಾಲಯಗಳು ಕಷ್ಟದಲ್ಲಿವೆ. ಇದೀಗ ಪ್ರಾಣಿ ಪಕ್ಷಿ, ಮರ ಗಿಡಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ಸ್ಯಾಂಡಲ್ ವುಡ್ ನ ಡಿ ಬಾಸ್ ಸಂಕಷ್ಟದಲ್ಲಿರುವ ಪ್ರಾಣಿ, ಪಕ್ಷಿಗಳ ನೆರವಿಗೆ ನಿಂತಿದ್ದಾರೆ.
ಪ್ರಾಣಿಗಳನ್ನ ದಯಮಾಡಿ ದತ್ತು ಪಡೆದು ನೆರವಾಗಿ ಎಂದು ಡಿ ಬಾಸ್ ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದರು. ಅವರ ಒಂದೇ ಒಂದು ಕೂಗಿಗಿ ಸ್ಪಂದಿಸಿದ ಅಭಿಮಾನಿಗಳು ಪ್ರಾಣಿಗಳ ದತ್ತು ಪಡೆಯಲು ಮುಗಿಬಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕರೆಗೆ ಒಗೊಟ್ಟ ಅವರ ಅಭಿಮಾನಿಗಳು ಹಾಗೂ ಆಪ್ತರು ಸಂಗ್ರಹಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ.
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ” ದರ್ಶನ್ ” ಎಂಬ ಹೆಸರಿನ ಸಿಂಹವನ್ನು ನಿರ್ಮಾಪಕರಾದ ಶೈಲಜಾ ನಾಗ್ ಅವರು ದತ್ತು ಪಡೆದಿದ್ದಾರೆ. ಇವರಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ದರ್ಶನ್ ಅಭಿಮಾನಿಗಳ ಸಂಘಗಳೂ ಕೂಡ ಪ್ರಾಣಿಗಳನ್ನು ದತ್ತು ಪಡೆಯಲು ಮುಗಿ ಬಿದ್ದಿದ್ದಾರೆ. ಇನ್ನು ತಮ್ಮ ಮಾತಿಗೆ ಸ್ಪಂದಿಸಿ, ಪ್ರಾಣಿ ಸಂಗ್ರಹಾಲಯಗಳ ಕಷ್ಟಕ್ಕೆ ಸ್ಪಂದಿಸಿರುವ ತಮ್ಮ ಅಭಿಮಾನಿಗಳಿಗೆ, ಆಪ್ತರಿಗೆ ದರ್ಶನ್ ಅವರು ತಮ್ಮ ಟ್ವಿಟರ್ ಖಾತೆಗಳ ಮೂಲಕ ವಿಶೇಷವಾಗಿ ಧನ್ಯವಾದ ಹೇಳಿದ್ದಾರೆ.
ಶ್ರೀ ದರ್ಶನ್ ತೂಗುದೀಪರವರು ರಾಜ್ಯದ ಮೃಗಾಲಯಗಳ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮತ್ತು ದೇಣಿಗೆ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು. @dasadarshan @aranya_kfd @CMofKarnataka @ArvindLBJP @CZA_Delhi @ani_digital @Mysore_Zoo @PIBBengaluru @PTI_News @KarnatakaWorld pic.twitter.com/6k2hk9RMag
— Zoos of Karnataka (@ZKarnataka) June 5, 2021







