HIV ಸೋಂಕಿತೆಯಲ್ಲಿ , 216 ದಿನದಲ್ಲಿ 32 ರೂಪಾಂತರಿ ಪತ್ತೆ..!
ಇಡೀ ವಿಶ್ವಾದ್ಯಂತ ಕೊರೊನಾ ಹೆಮ್ಮಾರಿ ದಿನೇ ದಿನೇ ಹೊಸ ಹೊಸ ರೀತಿಯಲ್ಲಿ , ಹೊಸ ರೂಪಾಂತರಿಗಳಾಗಿ ಕಾಡಲಾರಂಭಿಸಿದೆ. ಇದರ ನಡುವೆ ಮತ್ತೊಂದು ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ದಕ್ಷಿಣ ಆಫ್ರಿಕಾದ ಸಂಶೋಧಕರು 36 ವರ್ಷದ ಎಚ್ ಐವಿ ಸೋಂಕಿತ ಮಹಿಳೆಯಲ್ಲಿ 216 ದಿನಗಳ ಕಾಲ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಅಲ್ಲದೇ ಈ ಮಹಿಳೆಯ ದೇಹದಲ್ಲಿದ್ದ ಎಚ್ ಐವಿ ಸೋಂಕು ಸಾಕಷ್ಟು ಅಭಿವೃದ್ಧಿಗೊಂಡು ರೂಪಾಂತರಗೊಂಡಿದ್ದು, 32 ಭಿನ್ನ ರೂಪಾಂತರಿ ಕೊರೊನಾ ವೈರಸ್ ಗಳು ಪತ್ತೆಯಾಗಿವೆ.
36 ವರ್ಷದ ಮಹಿಳೆಗೆ 2006ರಲ್ಲಿ HIV ಸೋಂಕು ಪತ್ತೆಯಾಗಿತ್ತು. ಆಕೆಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರಿಂದ HIV ತನ್ನ ಶಕ್ತಿ ಕಳೆದುಕೊಂಡು ದುರ್ಬಲವಾಗಿತ್ತು. ಆದ್ರೆ 2020ರ ಸೆಪ್ಟೆಂಬರ್ ನಲ್ಲಿ ಈ ಮಹಿಳೆಗೆ ಕೊರೊನಾ ಸೋಂಕು ತಗುಲಿತ್ತು. ಅದರಿಂದ ಇಲ್ಲಿಯರೆಗೆ 13 ಬಾರಿ ಕೊರೊನಾ ರೂಪಾಂತರಗೊಂಡಿದೆ. ಈ ಮಹಿಳೆಯ ದೇಹದಲ್ಲಿ ಪತ್ತೆಯಾದ ರೂಪಾಂತರಿಗಳ ಪೈಕಿ ಕೆಲವು ಕೊರೊನಾ ಸೋಂಕು ಅತ್ಯಂತ ಅಪಾಯಕಾರಿಯಾಗಿದೆ. ಅಲ್ಲದೇ ಈಕೆಯ ಮಹಿಳೆಯಲ್ಲಿ ಹಲವು ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿರೋದು ವೈದ್ಯಲೋಕಕ್ಕೆ ಸವಲಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








