Bengaluru ಬೆಂಗಳೂರಿಗರಿಗೆ ಪಾಸಿಟಿವ್ ಸುದ್ದಿ : ಶೇ.3.94ಕ್ಕಿಳಿದ ಪಾಸಿಟಿವಿಟಿ ರೇಟ್
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ತಗ್ಗಿದ್ದು, ಇಂದು ಪಾಸಿಟಿವಿಟಿ ರೇಟ್ ಶೇ.3.94ಕ್ಕಿಳಿದಿದೆ.
ನಗರದಲ್ಲಿ ಇವತ್ತು 2,973 ಕೊರೊನಾ ಕೇಸ್ ಗಳು ದಾಖಲಾಗಿವೆ.
ಮುಖ್ಯವಾಗಿ ನಗರದ ಎಂಟು ವಲಯಗಳಲ್ಲೂ 500 ಕ್ಕಿ ಕಡಿಮೆ ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಬೊಮ್ಮನಹಳ್ಳಿ 381, ದಾಸರಹಳ್ಳಿ 86,
ಬೆಂಗಳೂರು ಪೂರ್ವ 357, ಮಹಾದೇವಪುರ 429, ಆರ್.ಆರ್ ನಗರ 205, ಬೆಂಗಳೂರು ದಕ್ಷಿಣ 201, ಬೆಂಗಳೂರು ಪಶ್ಚಿಮ 228, ಯಲಹಂಕ 295 ಕೇಸ್ ಗಳು ಪತ್ತೆಯಾಗಿವೆ.
ಇನ್ನು ವಲಯವಾರು ಪಾಸಿಟಿವಿಟಿ ರೇಟ್ ಹೀಗಿದೆ.
ಮಹಾದೇವಪುರ- ಶೇ.7.7, ದಾಸರಹಳ್ಳಿ – ಶೇ.5.2,
ಬೆಂಗಳೂರು ಪೂರ್ವ – ಶೇ.6.7, ಬೊಮ್ಮನಹಳ್ಳಿ- ಶೇ.7.5,
ಬೆಂಗಳೂರು ದಕ್ಷಿಣ- ಶೇ.4.1, ಬೆಂಗಳೂರು ಪಶ್ಚಿಮ- ಶೇ.4.1,
ಯಲಹಂಕ – ಶೇ.6.4, ಆರ್.ಆರ್ ನಗರ- ಶೇ.9.2